ಬಾಲಿವುಡ್ ನಟಿ ಅಲಿಯಾ ಭಟ್ ಮೋಸ್ಟ್ ಇನ್ಸ್ಪೈರಿಂಗ್ ಏಷಿಯನ್ ವುಮೆನ್ ಪೋಪಲ್ ಚಾಯ್ಸ್ ಅವಾರ್ಡ್ 2019 ಗೆ ನಾಮಿನೇಟ್ ಆಗಿದ್ದಾರೆ. 

ಈ ಅವಾರ್ಡ್ ಗೆ ನಾಮಿನೇಟ್ ಆದವರಲ್ಲಿ ಏಕೈಕ ಭಾರತಸ ನಟಿ ಇವರಾಗಿದ್ದಾರೆ.  ಒಂದು ವೇಳೆ ಅಲಿಯಾ ಈ ಅವಾರ್ಡನ್ನು ಗೆದ್ದರೆ ಮೋಸ್ಟ್ ಇನ್ಸ್ಪೈರಿಂಗ್ ಏಷಿಯನ್ ವುಮೆನ್ ಅವಾರ್ಡನ್ನು ಗೆದ್ದ ಎರಡನೇ ನಟಿಯಾಗುತ್ತಾರೆ. ಪ್ರಿಯಾಂಕ ಚೋಪ್ರಾ ಭಾರತದ ಮೊದಲ ಮಹಿಳೆಯಾಗಿದ್ದಾರೆ. 

ಇದಕ್ಕಾಗಿ ಆನ್ ಲೈನ್ ಪೋಲ್ ಆಯೋಜಿಸಲಾಗಿದೆ. ಅಕ್ಟೋಬರ್ 18 ರವರೆಗೆ ಈ ಪೋಲ್ ನಡೆಯಲಿದೆ. ಪೋಲ್ ನಲ್ಲಿ ಯಾರಿಗೆ ಅತೀ ಹೆಚ್ಚು ವೋಟ್ ಬಂದಿರುತ್ತದೋ ಅವರನ್ನು ವಿನ್ನರ್ ಆಗಿ ಘೋಷಣೆ ಮಾಡಲಾಗುತ್ತದೆ. ನವೆಂಬರ್ 10 ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. 

ಸೌತ್ ಕೊರಿಯನ್ ನಟಿ ಜುಂಗ್ ಯು ಮಿ, ಥಾಯ್ ನಟಿ ಪ್ರಾಯ ಲುಂಡೆರ್ಬರ್ಗ್, ಚೈನೀಸ್ ನಟಿ ಜೂ ಡಾಂಗ್ಯೂ, ಸೌತ್ ಕೋರಿಯನ್ ಸಿಂಗರ್ ಲೀ ಚಾಯ್, ಮಲೇಷ್ಯಾ ಸಿಂಗರ್ ಯುನಾ, ಇಂಡೋನೇಷ್ಯಾ ನಟಿ ರಾನೈನ್ ಶಾ ಜೊತೆ ಅಲಿಯಾ ಭಟ್ ರೇಸ್ ನಲ್ಲಿದ್ದಾರೆ.  ಅಲಿಯಾ ಭಟ್ ಸದ್ಯ ರಣಬೀರ್ ಕಪೂರ್ ಜೊತೆ ಬ್ರಹ್ಮಸೂತ್ರ ದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಮಿತಾಬಚ್ಚನ್, ಅಕ್ಕಿನೇನಿ ನಾಗಾರ್ಜುನ್ ಕೂಡಾ ನಟಿಸಿದ್ದಾರೆ.