'ಖಿಲಾಡಿಯೋಂಕಾ ಖಿಲಾಡಿ' ಚಿತ್ರದ ದೃಶ್ಯವೊಂದರ ಬಗ್ಗೆ ಸತ್ಯ ಹೇಳಿದಕ್ಕೆ ಸಂಕಷ್ಟದಲ್ಲಿ ಸಿಲುಕಿಕೊಂಡ ಅಕ್ಷಯ್? 

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಖಿಲಾಡಿಯೋಂಕಾ ಖಿಲಾಡಿ' ಸಿನಿಮಾ ಬಿಡುಗಡೆಯಾಗಿ 20 ವರ್ಷ ಪೂರೈಸಿದೆ. ಇದರ ಪ್ರಯುಕ್ತ ಈ ಚಿತ್ರದ ಬಗ್ಗೆ ಯಾರಿಗೂ ತಿಳಿಯದ ಕೆಲವೊಂದು ಸತ್ಯಗಳನ್ನು ಅಕ್ಷಯ್ ಕುಮಾರ್ ರಿವೀಲ್ ಮಾಡಿದ್ದಾರೆ. 

ಜಮ್ಮು ಮತ್ತು ಕಾಶ್ಮೀರ ಗ್ರಾಮದ ಶಾಲೆಗೆ 1 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ 

 'ಖಿಲಾಡಿಯೋಂ ಕಾ ಖಿಲಾಡಿ' ಚಿತ್ರದಲ್ಲಿ ಫೈಟ್‌ ಸೀನ್‌ವೊಂದಕ್ಕೆ WWE ಅಂಡರ್‌ಟೇಕರ್‌ ಕಾಣಿಸಿಕೊಂಡಿದ್ದರು. ಅಕ್ಷಯ್ ಮತ್ತು ಅಂಡರ್‌ಟೇಕರ್‌ ರಿಯಲ್‌ ಆಗಿ ಗುದ್ದಾಡಿದ್ದಾರೆ ಎನ್ನಲಾಗಿದೆ, ಆದರೆ ಅಸಲಿ ಕಥಯೇ ಬೇರೆ. ಹೌದು! ಚಿತ್ರದಲ್ಲಿ ಫೇಕ್ ಅಂಡರ್‌ಟೇಕರ್ ಬಳಸಲಾಗಿದೆ ಎಂದು ಅಕ್ಷಯ್ ಹೇಳಿದಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ ಆದರೆ ರಿಯಲ್ ಫೈಟರ್‌ ಏನು ಸವಾಲ್ ಹಾಕಿದ್ದಾರೆ ಗೊತ್ತಾ?

ಚಿತ್ರದಲ್ಲಿ ಬಳಸಿರುವ ಡೂಪ್ ಅಂಡರ್‌ಟೇಕರ್‌ ಬಗ್ಗೆ ತಿಳಿದು ರಿಯಲ್ ಅಂಡರ್‌ಟೇಕರ್ 'ರಿಯಲ್ ಮ್ಯಾಚ್‌ಗೆ ನೀವು ಯಾವಾಗ ಸಿದ್ಧರಿದ್ದೀರಿ?' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಕ್ಷಯ್ 'ನಾನು ಇನ್ಶೂರೆನ್ಸ್ ಚೆಕ್ ಮಾಡಿಕೊಂಡು ಬರ್ತೀನಿ, ಸ್ವಲ್ಪ ಕಾಯಿರಿ' ಎಂದು ತಮಾಷೆಯಿಂದ ಉತ್ತರಿಸಿದ್ದಾರೆ. ಇದರ ನಡುವೆ ಅಭಿಮಾನಿಗಳು 'ನೀವಿಬ್ಬರೂ ನಿಜವಾಗಿಯೂ ಕಾಣಿಸಿಕೊಳ್ಳಬೇಕು. ನಾವು ನಿಮ್ಮ ಫೈಟ್ಸ್ ಹೇಗಿರುತ್ತದೆ ನೋಡಬೇಕು' ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.