ತುಲೈಲ್‌ ಗ್ರಾಮದಲ್ಲಿ ಶಾಲೆ ನಿರ್ಮಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. 

ಬಾಲಿವುಡ್ ಫಾರ್‌ಎವರ್‌ ಎಂಗ್ ಮ್ಯಾನ್‌ ಅಕ್ಷಯ್ ಕುಮಾರ್ ಬಿಎಸ್‌ಎಫ್‌ನ ಯೋಧರಿಗೆ ಗೌರವ ನಮನ ಸಲ್ಲಿಸಲು ತುಲೈಲ್‌ ಕಣಿವೆಯ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ಥಳೀಯರ ಜೊತೆ ಮಾತುಕತೆ ನಡೆಸಿದ ಅಕ್ಷಯ್, ಅವರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದರು. ಈ ವೇಳೆ ಒಂದು ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. 

3600 ಡ್ಯಾನ್ಸರ್ಸ್‌ ಕುಟುಂಬಕ್ಕೆ ನಟ ಅಕ್ಷಯ್‌ನಿಂದ ದಿನಸಿ ಪೋರೈಕೆ 

ಹೌದು! ತುಲೈಲ್‌ ಗ್ರಾಮದಲ್ಲಿ ಶಾಲೆ ಇಲ್ಲದ ಕಾರಣ ಅಕ್ಷಯ್ ಕುಮಾರ್ 1 ಕೋಟಿ ದೇಣಿಗೆ ನೀಡಿ, ಶಾಲೆ ನಿರ್ಮಾಣ ಮಾಡಿಸುವುದಕ್ಕೆ ಮುಂದಾಗಿದ್ದಾರೆ. ಅಕ್ಷಯ್ ಆನ್‌ ಸ್ಕ್ರೀನ್‌ ಹೀರೋ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಹೀರೋ ಎಂದು ಸ್ಥಳೀಯರು ಜೈ ಕಾರ ಹಾಕಿದ್ದಾರೆ. ಈ ಶಾಲೆಗೆ ಅಕ್ಷಯ್ ಕುಮಾರ್ ತಂದೆ 'ಹರಿ ಓಂ' ಹೆಸರನ್ನು ಇಡಲಾಗುತ್ತದೆ. 

Click and drag to move

ಕೊರೋನಾ ಆರಂಭದಿಂದಲೂ ಅಕ್ಷಯ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಮೊದಲನೇ ಅಲೆಯಲ್ಲಿ PM Fundsಗೆ 25 ಕೋಟಿ ರೂ. ದೇಣಿಗೆ ನೀಡಿದ್ದರು, ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಿದ ಕಾರಣ 100 ಆಕ್ಸಿಜನ್‌ ಕಾನ್ಸಟ್ರೇಟರ್‌ಗಳನ್ನು ನೀಡಿದ್ದರು. ಅಲ್ಲದೇ ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ರೂ. ನೀಡಿದ್ದರು. 

'ರಾಮ ಸೇತು' ಸಿನಿಮಾದಲ್ಲಿ ಇಬ್ಬರು ಸೌತ್ ಸ್ಟಾರ್ ನಟರು; ಶ್ರೀಲಂಕಾದಲ್ಲಿ ಚಿತ್ರೀಕರಣ! 

ಸದ್ಯ ಅಕ್ಷಯ್ 'ರಾಮ್ ಸೇತು' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಭಿಶೇಕ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ನುಶ್ರತ್ ಬಾರೂಚಾ ಅಭಿನಯಿಸುತ್ತಿದ್ದಾರೆ. 'ರಾಮ್ ಸೇತು' ಚಿತ್ರೀಕರಣದ ನಂತರ ಅಕ್ಷಯ್ ಕೈಯಲ್ಲಿ 'ಅತ್ರಂಗಿ ರೇ', 'ಬಚ್ಚನ್ ಪಾಂಡೇ', 'ಬೆಲ್ ಬಾಟಂ' ಮತ್ತು 'ಹೌಸ್‌ಫುಲ್‌ 5' ಸಿನಿಮಾಗಳು ರಿಲೀಸ್‌ಗೆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.