ವರ್ಷ ಮುಗಿಯುವ ಹೊತ್ತಲ್ಲಿ ಬಂದು ನಿಂತಿದ್ದೇವೆ. ಈ ವರ್ಷ ಯಾವೆಲ್ಲಾ ಸಿನಿಮಾ ಬಂದವು, ಎಷ್ಟು ಗೆದ್ದವು, ಎಷ್ಟು ಬಿದ್ದವು ಎನ್ನುವುದು ಲೆಕ್ಕಾಚಾರದ ಜೊತೆಗೆ ಈ ವೇಳೆ ಮುಂದಿನ ವರ್ಷ ಅಂದರೆ ೨೦೨೦ಕ್ಕೆ ಯಾರ‌್ಯಾರು ಯಾವ್ಯಾವ ರೂಪದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲವೂ ಇದ್ದೇ ಇರುತ್ತದೆ.

ಕನ್ನಡ ಸಿನಿಮಾ ಮಾಡುವುದು ಅಪ್ಪನ ಆಸೆಯೂ ಆಗಿತ್ತು: ಧನ್ಯಾ ಬಾಲಕೃಷ್ಣನ್‌

ಅದರಂತೆ ಇವಾಗ ಶಿಲ್ಪಾ ಶೆಟ್ಟಿ ಮತ್ತು ತಾಪ್ಸಿ ಪನ್ನು ಬಗ್ಗೆ ಈ ಕುತೂಹಲ ತುಸು ಹೆಚ್ಚಾಗಿದೆ. ಇದಕ್ಕೆ ಕಾರಣ ಅವರು ತಮ್ಮ ಮುಂದಿನ ಚಿತ್ರಗಳ ಪೋಸ್ಟರ್ಗಳನ್ನು ಬಿಡುಗಡೆ ಮಾಡಿರುವುದು, ಅವುಗಳು ಬಹಳ ಮೆಚ್ಚುಗೆ ಗಿಟ್ಟಿಸಿಕೊಂಡಿರುವುದು.

ಮರ್ಡರ್ ಮಿಸ್ಟರಿಯಲ್ಲಿ ತಾಪ್ಸಿ: ರಕ್ತದ ಮಡುವಿ ನಿಂದ ಹೆಣ್ಣೊಬ್ಬಳು ಮೊಣಕಾಲಿನ ವರೆಗೂ ಬಟ್ಟೆಯನ್ನು ಎತ್ತಿಕೊಂಡು ಕಾಲಿಟ್ಟು ನಡೆದು ಬರುತ್ತಿರುವ ಪೋಸ್ಟರ್ ನೋಡಿದರೆ ಇದೊಂದು ಖಂಡಿತ ಮರ್ಡರ್ ಮಿಸ್ಟರಿ ಎನ್ನಿಸುತ್ತದೆ. ಅದನ್ನು ಚಿತ್ರತಂಡವೂ ಹೇಳಿಕೊಂಡಿದೆ. 

 

‘ಹಸಿನಾ ದಿಲ್‌ರುಬಾ’ ಹೊಸ ಚಿತ್ರದ ಹೆಸರು. ವಿನಿಲ್ ಮ್ಯಾಥ್ಯೂ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇದು 2020 ರ ಸೆಪ್ಟೆಂಬರ್ 18 ಕ್ಕೆ ದರ್ಶನ ನೀಡಲಿದೆ.

'ಅವನೇ ಶ್ರೀಮನ್ನಾರಾಯಣ'ನಿಗೆ ಹ್ಯಾಂಡ್ಸಪ್‌! ಶಾನ್ವಿ ಚಾಲೆಂಜ್‌ಗೆ ಸೈ ಎಂದ ಸೆಲಬ್ರಿಟಿಗಳು

ದೀರ್ಘ ಕಾಲದ ನಂತರ ಬಂದ ಶಿಲ್ಪಾ: ಶಿಲ್ಪಾ ಶೆಟ್ಟಿ ಸುಮಾರು 13 ವರ್ಷಗಳ ನಂತರ ‘ನಿಕಮ್ಮಾ’ ಚಿತ್ರದ ಮೂಲಕ ಬಾಲಿವುಡ್‌ಗೆ ವಾಪಸ್ ಆಗುತ್ತಿದ್ದಾರೆ. ಸಬೀರ್ ಖಾನ್ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಅಭಿಮನ್ಯು ದಸ್ಸಾನಿ ಮತ್ತು ಶೆರ್ಲಿ ಸೆಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

 
 
 
 
 
 
 
 
 
 
 
 
 

Super excited to announce that #Nikamma is releasing on 5th June, 2020. Have had such an amazing experience working with @sabbir24x7, @abhimanyud & @ShirleySetia, and now, I can’t wait for you guys to watch it! Mark the date! See you in the theatres! 🤗😘🧿❤ . @sonypicturesin @sonypicsprodns . Posted @withrepost • @sabbir24x7 NIKAMMA ... Arriving on 5th June 2020. Get ready to meet this lovable couple and of course the sassy Shilpa Shetty who makes a comeback to the screen after 13 years. Nikamma once again gives me a chance to say a big story with rank newcomers, bring their talent to the fore and give them a platform. This also marks my first as a producer in collaboration with Sony pictures so super excited to bring this to you in the new year !!! @theshilpashetty @abhimanyud @shirleysetia @sonypicturesin

A post shared by Shilpa Shetty Kundra (@theshilpashetty) on Dec 16, 2019 at 9:25pm PST

ಅದರಂತೆಯೇ ಶಿಲ್ಪಾ ಶೆಟ್ಟಿ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ಫಸ್ಟ್ ಪೋಸ್ಟರ್ ಅನಾವರಣಗೊಂಡಿದೆ. ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ದೊರೆತಿರುವ ಈ ಚಿತ್ರ ಮುಂದಿನ ವರ್ಷ ಜೂನ್ 05 ಕ್ಕೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.