ಹಿಂದುತ್ವ ಜೊತೆ ತಾಲೀಬಾನ್ ಹೋಲಿಕೆ ಮಾಡಿದ ಬಾಲಿವುಡ್ ನಟಿ #ArrestSwaraBhaskar ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಅಷ್ಟಕ್ಕೂ ನಟಿ ಸ್ವರಾ ಹೇಳಿದ್ದೇನು ?

ತಾಲೀಬಾನ್ ಉಗ್ರರ ಕ್ರೌರ್ಯದ ಬಗ್ಗೆ ಸಿನಿಮಾ ತಾರೆಗಳು, ಸೆಲೆಬ್ರಿಟಿಗಳು ಸೇರಿ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಕಂಗನಾ ರಣಾವತ್ ಅವರೂ ಈ ಕುರಿತು ಸರಣಿ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿ ಪೋಸ್ಟ್ ಮಾಡಿದ್ದರು. ಈಗ ನಟಿ ಸ್ವರಾ ಭಾಸ್ಕರ್ ಅವರೂ ಈ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೊಳಗಾಗಿದ್ದಾರೆ. ಅಫ್ಘಾನಿಸ್ತಾನ್ ಪ್ರಜೆಗಳ ಕುರಿತು ಬಹಳಷ್ಟು ಜನ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ನಟಿ ಸ್ವರಾ ಅವರು ಹಿಂದುತ್ವ ಹಾಗೂ ತಾಲಿಬಾನಿ ಸಂಸ್ಕೃತಿಯನ್ನು ಹೋಲಿಕೆ ಮಾಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗಾಗಲೇ ನಟಿಯ ಟ್ವೀಟ್ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ.

ನಾವು ಹಿಂದುತ್ವ ಭಯೋತ್ಪಾದನೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ತಾಲಿಬಾನ್ ಭಯೋತ್ಪಾದನೆಯಿಂದ ಎಲ್ಲರೂ ಆಘಾತಕ್ಕೊಳಗಾಗಬಹುದು ಮತ್ತು ನಾಶವಾಗಬಹುದು. ನಾವು #ತಾಲಿಬಾನ್ ಭಯೋತ್ಪಾದನೆಯಿಂದ ಕೂಲ್ ಆಗಿರಲು ಸಾಧ್ಯವಿಲ್ಲ; ನಂತರ #ಹಿಂದುತ್ವ ಭಯೋತ್ಪಾದನೆಯ ಬಗ್ಗೆ ಎಲ್ಲರೂ ಕೋಪಗೊಳ್ಳಿ! ನಮ್ಮ ಮಾನವೀಯ ಮತ್ತು ನೈತಿಕ ಮೌಲ್ಯಗಳು ದಬ್ಬಾಳಿಕೆಯ ಅಥವಾ ದಮನಿತರ ಗುರುತನ್ನು ಆಧರಿಸಬಾರದು ಎಂದು ಸ್ವರ ಟ್ವೀಟ್ ಮಾಡಿದ್ದಾರೆ.

ಮೋದಿ ಇಲ್ಲಾಂದ್ರೆ ಓಡುತ್ತಿರೋ ಅಫ್ಘಾನಿಗಳ ಸ್ಥಾನದಲ್ಲಿ ನಾವೂ ಇರಬಹುದು: ಕಂಗನಾ

ಸದ್ಯ ಟ್ವಟಿರ್‌ನಲ್ಲಿ ಟ್ರೆಂಡ್ ಆಗುತ್ತಿರುವ ಈ ಟ್ವೀಟ್‌ಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, 14 ಸಾವಿರಕ್ಕೂ ಹೆಚ್ಚು ಲೈಕ್ಸ್, ಎರಡೂವರೆ ಸಾವಿರ ರಿಟ್ವೀಟ್, 3900ಕ್ಕೂ ಹೆಚ್ಚು ಕೋಟ್ ಟ್ವೀಟ್ಸ್ ಬಂದಿದೆ. ಹಿಂದೂಗಳ ಭಾವನೆಗಳನ್ನು ಧಕ್ಕೆ ಮಾಡಿರುವ ಸ್ವರಾ ಭಾಸ್ಕರ್ ಅವರನ್ನು ಬಂಧಿಸುವಂತೆ ಟ್ವಿಟರ್‌ನಲ್ಲಿ ಅಭಿಯಾನ ಶುರುವಾಗಿದೆ. ಈಗಾಗಲೇ ಬಹಳಷ್ಟು ಜನ ಈ ಸಂಬಂಧ ಟ್ವೀಟ್ ಮಾಡಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Scroll to load tweet…

ಸ್ವರಾ ಭಾಸ್ಕರ್ ಟ್ವಿಟರ್‌ನಲ್ಲಿ ಇಂಥಹ ಬಹಳಷ್ಟು ವಿಚಾರಗಳನ್ನು ಹೇಳಿ ಆಗಾಗ ವಿವಾದಕ್ಕೊಳಗಾಗುತ್ತಿರುತ್ತಾರೆ. ಪ್ರತಿ ಬಾರಿ ನಟಿಯ ಸುತ್ತ ವಿವಾದಗಳಾಗುತ್ತದೆ. ಇತ್ತೀಚೆಗೆ, ನಟಿ ಟ್ವಿಟರ್‌ನಲ್ಲಿ ತಾಲಿಬಾನ್ ಭಯೋತ್ಪಾದಕರನ್ನು ಹಿಂದುತ್ವಕ್ಕೆ ಹೋಲಿಸಿದ್ದಾರೆ. ಅವರ ಟ್ವೀಟ್‌ನಿಂದ, ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸ್ವರ ಭಾಸ್ಕರ್ ಬಂಧನಕ್ಕೆ ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಆದರೆ ಇನ್ನೊಂದಷ್ಟು ಜನ ಈ ಅಭಿಯಾನ ನಡೆಯುತ್ತದೆ, ನಂತರ ಮುಗಿಯುತ್ತದೆ. ಆದರೆ ನಮ್ಮ ಕಾನೂನು ಆಕೆಯನ್ನು ಬಂಧಿಸುವುದನ್ನು ಸಮ್ಮತಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ,

Scroll to load tweet…