ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಇಂಡಿಯನ್‌ ಎಂಟರ್‌ಟೈನ್‌ಮೆಂಟ್‌ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದೇ ಬಿಗ್‌ಬಾಸ್‌ ಶೋ ಮೂಲಕ. ಆದ್ರೆ ಈಗ ಅವ್ರು ಅದೇ ಶೋನಲ್ಲಿ ಮಾಡಿರೋ ಕೆಲ್ಸ ನೋಡಿ ಜನ ಹೌಹಾರಿದ್ದಾರೆ! 

ವೂಟ್‌ನಲ್ಲಿ ಪ್ರಸಾರ ಆಗ್ತಿರೋ ಬಿಗ್‌ಬಾಸ್‌ ಓಟಿಟಿ ಸೆಲೆಬ್ರಿಟಿಗಳ ಹೈಡ್ರಾಮ, ಜಗಳ, ಪ್ರೇಮದ ಕಾರಣಕ್ಕೆ ಶುರುವಿನಿಂದಲೂ ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿತ್ತು. ಈಗ ಈ ಶೋವನ್ನು ಮತ್ತಷ್ಟು ರಂಗೇರಿಸ್ತಿರೋದು ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್. ಸಿನಿಮಾಗಳಲ್ಲಾದರೆ ಅದರಲ್ಲಿರುವ ಹಿಂಸೆ, ಅಶ್ಲೀಲತೆಯನ್ನಾಧರಿಸಿ ವಯಸ್ಕರ ಚಿತ್ರವಾ, ಎಲ್ಲರೂ ನೋಡಬಹುದಾದ ಚಿತ್ರವಾ ಅಂತ ಸರ್ಟಿಫಿಕೇಟ್ ಕೊಡ್ತಾರೆ. ಸಮಸ್ಯೆ ಆಗುವ ಹಾಗಿದ್ದರೆ ವಿವಾದ ಉಂಟು ಮಾಡುವ ಸೀನ್‌ಗಳಿಗೆ ಕತ್ತರಿ ಹಾಕುತ್ತಾರೆ. ಆದರೆ ಸದ್ಯಕ್ಕೆ ಕಿರುತೆರೆ ಮತ್ತು ಓಟಿಟಿಗಳು ಈ ಸೆನ್ಸಾರ್ ಕಣ್ಣಿಂದ ತಪ್ಪಿಸಿಕೊಂಡಿವೆ. ಹೀಗಾಗಿ ಇಲ್ಲಿ ಒಂಥರಾ ಆಡಿದ್ದೇ ಆಟ ಅನ್ನುವ ಹಾಗಾಗಿದೆ. ಇಲ್ಲಿನ ಕ್ಯಾಮರಾಗಳೂ ಎಗ್ಗಿಲ್ಲದೇ ಎಲ್ಲ ದೃಶ್ಯಗಳನ್ನೂ ರಸವತ್ತಾಗಿ ಪ್ರಸಾರ ಮಾಡುತ್ತಿವೆ. ಅದರಲ್ಲೂ ಸನ್ನಿ ಲಿಯೋನ್ ಬಂದ ಮೇಲಂತೂ ಸ್ಪರ್ಧಿಗಳು ಟಾಸ್ಕ್ ಬಿಟ್ಟು ಮತ್ತೇನನ್ನೂ ಯೋಚಿಸದ ಹಾಗಾಗಿದೆ. 

ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!

ಓಟಿಟಿ ವೂಟ್‌ನಲ್ಲಿ ಆಗಸ್ಟ್‌ 8ರಿಂದ ಬಿಗ್‌ಬಾಸ್ ಶೋ ಶುರುವಾಗಿದೆ. 13 ಜನ ಸೆಲೆಬ್ರಿಟಿಗಳು 42 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಆಟವಾಡಲಿದ್ದಾರೆ. ಸುಮಾರು 22 ಎಪಿಸೋಡ್‌ಗಳಲ್ಲಿ ಇದು ಪ್ರಸಾರವಾಗಲಿದೆ. ಈವರೆಗೆ ನಾಲ್ಕು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಅಕ್ಷರಾ, ಮಸ್ಕನ್‌, ರಾಕೇಶ್‌, ಶಮಿತಾ ಶೆಟ್ಟಿ, ನೇಹಾ, ನಿಶಾಂತ್‌ ಹೀಗೆ ಒಂಭತ್ತು ಜನ ಸ್ಪರ್ಧಿಗಳು ಸದ್ಯ ಮನೆಯಲ್ಲಿ ಮನರಂಜನೆ ನೀಡುತ್ತಿದ್ದಾರೆ. ಅದರಲ್ಲಿ ಶಮಿತಾ ಶೆಟ್ಟಿ ಆರಂಭದಿಂದಲೇ ಶೈನ್ ಆಗುತ್ತಾ ಬಂದಿದ್ದಾರೆ. ರಾಕೇಶ್ ಬಾಪಟ್ ಅವರಿಗೆ ಜೊತೆಯಾಗಿದ್ದಾರೆ. 


ಇದೀಗ ಸನ್ನಿ ಲಿಯೋನ್ ಈ ಶೋಗೆ ಎಂಟ್ರಿಯಾಗಿ ವಿಚಿತ್ರ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್​, ನೇಹಾ ಭಾಸಿನ್​ ಮುಂತಾದವರು ಭಾಗವಹಿಸಿದರು. ಆದರೆ ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಆಡೋದು ನೋಡಿ ದಿವ್ಯಾ ಅಗರ್​ವಾಲ್​ ನಾಚಿ ನೀರಾದರು. ಸದ್ಯ ಟಿವಿಯಲ್ಲಿ 'ಬಿಗ್​ ಬಾಸ್​ ಓಟಿಟಿ' ಪ್ರಸಾರ ಆಗುತ್ತಿಲ್ಲ. ವಯಸ್ಕರನ್ನೇ ಟಾರ್ಗೆಟ್​ ಆಗಿಟ್ಟುಕೊಂಡಿರುವ ಈ ಕಾರ್ಯಕ್ರಮ ಖಂಡಿತಾ ಕುಟುಂಬದವರು ಕೂತು ನೋಡುವ ಹಾಗಿರಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಸನ್ನಿ ಲಿಯೋನ್ ಅಖಾಡಕ್ಕೆ ಕಾಲಿಟ್ಟ ಮೇಲೆ ಅಲ್ಲಿನ ವಾತಾವರಣವೇ ಬದಲಾಗಿದೆ. ಈಗ ಅವರು ನೀಡಿದ ಟಾಸ್ಕ್​ ನೋಡಿ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳೇ ಶಾಕ್​ ಆಗಿದ್ದಾರೆ. ಕೆಲವರಂತೂ ನಾಚಿಕೊಂಡು ಹಿಂದೆ ಸರಿದಿದ್ದಾರೆ!

ಡಿಪ್ರೆಶನ್‌ಗೆ ಹೋದರೂ ಚೇತರಿಸಿಕೊಂಡ ಸೆಲೆಬ್ರಿಟಿಗಳು

ಅಷ್ಟಕ್ಕೂ ಆ ಟಾಸ್ಕ್‌ ಸಖತ್ ಬೋಲ್ಡ್. ಬಿಗ್​ ಬಾಸ್ ಮನೆಯಲ್ಲಿ ಕೆಲವು ಜೋಡಿಗಳ ನಡುವೆ ಕುಚ್ ಕುಚ್ ನಡೀತಿದೆ. ಇದಕ್ಕೆ ಇನ್ನಷ್ಟು ರಂಗು ತುಂಬುವ ಉದ್ದೇಶ ಈ ಶೋನದ್ದು. ಈ ಸಂಬಂಧವನ್ನು ಇನ್ನಷ್ಟು ಬಿಗಿಯಾಗಿಸೋದು ಈ ಟಾಸ್ಕ್‌ನ ಉದ್ದೇಶದಂತಿದೆ. ಅಷ್ಟಕ್ಕೂ ಸನ್ನಿ ಲಿಯೋನ್‌ ಹೇಳಿದ ಟಾಸ್ಕ್‌ನ ನಿಯಮ ಹೀಗಿದೆ; ಇಬ್ಬರು ಸ್ಪರ್ಧಿಗಳು ತಬ್ಬಿಕೊಳ್ಳುವಂತೆ ನಿಲ್ಲಬೇಕು, ತಮ್ಮಿಬ್ಬರ ದೇಹದ ಮಧ್ಯೆ ತೆಂಗಿನ ಕಾಯಿ ಇಟ್ಟುಕೊಳ್ಳಬೇಕು. ಕೈಗಳನ್ನು ಬಳಸದೇ ಆ ತೆಂಗಿನ ಕಾಯಿಯನ್ನು ತಮ್ಮ ಮುಖದವರೆಗೆ ತರಬೇಕು. 

ಶಮಿತಾ ಶೆಟ್ಟಿ, ರಾಕೇಶ್​ ಬಾಪಟ್​, ಬೇಹಾ ಭಾಸಿನ್​ ಮುಂತಾದವರು ಈ ಟಾಸ್ಕ್​ನಲ್ಲಿ ಭಾಗವಹಿಸಿದರು. ದಿವ್ಯಾ ಅಗರ್​ವಾಲ್​ ನಾಚಿ ನೀರಾದರು. ದೂರದಿಂದಲೇ ಎಲ್ಲವನ್ನೂ ನೋಡಿ ಅವರು ಕಣ್ಣರಳಿಸಿದರು. ಇನ್ನೂ ಎಷ್ಟು ದಿನಗಳ ಕಾಲ ಸನ್ನಿ ಲಿಯೋನ್​ ಇರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರು ಕಾಲಿಟ್ಟ ಮೇಲಂತೂ ಈ ಶೋನ ಸ್ವರೂಪವೇ ಬದಲಾಗಿರುವುದು ನಿಜ. ಸನ್ನಿ ಲಿಯೋನ್​ ಅವರಿಗೂ ಬಿಗ್​ ಬಾಸ್​ ಮನೆಗೂ ತುಂಬ ಹಳೆಯ ಸಂಬಂಧ. ನೀಲಿ ಸಿನಿಮಾ ಲೋಕಕ್ಕೆ ಗುಡ್​ಬೈ ಹೇಳಿದ ಬಳಿಕ ಅವರು ಮೊದಲು ಕಾಲಿಟ್ಟಿದ್ದೇ ಹಿಂದಿ ಬಿಗ್​ ಬಾಸ್ ಕಾರ್ಯಕ್ರಮಕ್ಕೆ. ಬಳಿಕ ಬಾಲಿವುಡ್‌ ಸಿನಿಮಾಗಳಿಗೆ ಎಂಟ್ರಿ ಕೊಟ್ಟರು. ಈಗ 10 ವರ್ಷಗಳ ಬಳಿಕ ಅವರು ಮತ್ತೆ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದು ವಿಶೇಷ.

ಬ್ಯೂಟಿ ಮತ್ತು ಸ್ಟೈಲ್‌ ಎರಡರಲ್ಲೂ ಶಾರುಖ್‌ ಮಗಳಿಗಿಂತ ಪತ್ನಿನೇ ಮುಂದೆ!