2019 ನೇ ಸಾಲಿನಲ್ಲಿ ಅತೀ ಹೆಚ್ಚು ಗೂಗಲ್ ಆದವರ ಪಟ್ಟಿ ಹೊರ ಬಿದ್ದಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪಾಕಿಸ್ತಾನದ ಗೂಗಲ್ ಸರ್ಚ್‌ನಲ್ಲಿ 6 ನೇ ಸ್ಥಾನದಲ್ಲಿದ್ದಾರೆ.  

ಸಾರಾ ಅಲಿ ಖಾನ್ ಸಾಕಷ್ಟು ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ, ಸಾಮಾಜಿಕ ಕೆಲಸಗಳಲ್ಲೂ ಸದಾ ಮುಂದು. ಜೊತೆಗೆ ಯೂನಿಕ್ ಫ್ಯಾಷನ್ ಸ್ಟೈಲ್‌ನಿಂದ ಯಾವಾಗಲೂ ಗಮನ ಸೆಳೆಯುತ್ತಿರುತ್ತಾರೆ.

ಕತ್ರಿನಾ ಹಿಂದಿಕ್ಕಿ ಸೆಕ್ಸಿಯಸ್ಟ್ ಪಟ್ಟ ಏರಿದ ಬಿಗ್ ಬಾಸ್ ಸುಂದರಿ, ಸಖತ್ ಹಾಟ್ ಮಗಾ! 

ಸುಶಾಂತ್ ಸಿಂಗ್ ರಜಪೂತ್ ಜೊತೆ ಮೊದಲ ಸಿನಿಮಾ 'ಕೇದಾರನಾಥ್' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಆ ನಂತರ ಸಿಂಬಾ, ಕೂಲಿ ನಂ 1, ಆಜ್ ಕಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಪಾಕಿಸ್ತಾನಿ ಮೂಲದ ಗಾಯಕ ಅದ್ನಾನ್ ಸಾಮಿ ಕೆಲ ವರ್ಷಗಳ ಹಿಂದೆ ಭಾರತದ ಪೌರತ್ವ ಪಡೆದಿದ್ದಾರೆ. ಇವರೂ ಕೂಡಾ ಪಾಕಿಸ್ತಾನದಲ್ಲಿ ಅತೀ ಹೆಚ್ಚು ಗೂಗಲ್ ಸರ್ಚ್ ಆಗಲ್ಪಟ್ಟಿದ್ದಾರೆ.  ಅದ್ನಾನ್ ಸಾಮಿ ಆಗಾಗ ಅವರ ತಂದೆ ವಿಚಾರದ ಬಗ್ಗೆ, ತಾಯ್ನಾಡಿನ ನಿಷ್ಠೆ ಬಗ್ಗೆ ಆಗಾಗ ಟ್ರೋಲ್ ಆಗ್ತಾ ಇರ್ತಾರೆ. 

ಬಿಗ್‌ಬಾಸ್‌ಗೆ ಸಲ್ಲು ಗುಡ್‌ಬೈ?: ಖ್ಯಾತ ನಿರ್ದೇಶಕಿ ಹೆಗಲಿಗೆ ನಿರೂಪಣೆ ಜವಾಬ್ದಾರಿ!

ಕಬೀರ್ ಸಿಂಗ್ ಖ್ಯಾತಿಯ ಶಾಹಿದ್ ಕಪೂರ್, ಗಲ್ಲಿ ಬಾಯ್ ಖ್ಯಾತಿಯ ರಣವೀರ್ ಸಿಂಗ್ 5 ನೇ ಸ್ಥಾನದಲ್ಲಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ಬಿಗ್ ಬಾಸ್ 13 ಟ್ರೆಂಡಿಂಗ್‌ನಲ್ಲಿದೆ.