ಸ್ವಿಮ್ ಸೂಟ್‌ನಲ್ಲಿ ಮಿಂಚಿದ ಸಮೀರಾ ರೆಡ್ಡಿ | ಆರು ತಿಂಗಳ ಗರ್ಭಿಣಿಯಾಗಿದ್ದರೂ ಸ್ವಿಮ್ ಮಾಡಿದ ಸಮೀರಾ | ಸ್ವಿಮ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ 

ಬೆಂಗಳೂರು (ಏ. 12): ಬಾಲಿವುಡ್ ನಟಿ ಸಮೀರಾ ರೆಡ್ಡಿ ಯಾವಾಗಲೂ ಟ್ರೆಂಡ್ ನಲ್ಲಿರುವ ನಟಿ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಇವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ಸಮೀರಾ ರೆಡ್ಡಿ ಆರು ತಿಂಗಳ ಗರ್ಭಿಣಿಯಾಗಿದ್ದು ಸ್ವಿಮ್ ಸೂಟ್ ಧರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬಿಕಿನಿ ತೊಟ್ಟು ಈಜಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.

View post on Instagram
View post on Instagram
View post on Instagram

ಸಮೀರಾ ರೆಡ್ಡಿ ಸ್ಯಾಂಡಲ್ ವುಡ್ ನಲ್ಲಿ ’ವರದನಾಯಕ’ ಸಿನಿಮಾದಲ್ಲಿ ನಟಿಸಿದ್ದಾರೆ. 2014 ರಲ್ಲಿ ಅಕ್ಷಯ್ ಎಂಬುವವರನ್ನು ವಿವಾಹವಾಗಿದ್ದು ಗಂಡು ಮಗುವೊಂದರ ತಾಯಿಯಾಗಿದ್ದಾರೆ. ಇದೀಗ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.