Asianet Suvarna News Asianet Suvarna News

ಸಿನಿಮಾಗಳಿಂದ ಹೊರ ಹಾಕಲ್ಪಟ್ಟಿರುವೆ, ಕಪ್ಪು ಬೆಕ್ಕು ಎಂದೂ ಕರೆಸಿಕೊಂಡಿರುವೆ; ಪ್ರಿಯಾಂಕಾ ಚೋಪ್ರಾ

ಕೆಲವು ಕೋ ಸ್ಟಾರ್ ನಟರು ಅದೆಷ್ಟು ಪರಿಪೂರ್ಣವಾಗಿ ಇರುತ್ತಾರೆ ಎಂದರೆ ತಾವು ಸೋಲೋ ಪರ್ಮಾಮನ್ಸ್ ಮಾಡಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಬರುತ್ತಾರೆ. 

Bollywood actress priyanka chopra says she was thrown out of movies many times srb
Author
First Published Dec 17, 2023, 6:56 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಏರಿರುವ ಎತ್ತರ, ಗಳಿಸಿರುವ ಆಸ್ತಿ ಅಷ್ಟಿಷ್ಟಲ್ಲ. ಆದರೆ, ಬಾಲಿವುಡ್ ಜಗತ್ತಿಗೆ ಕಾಲಿಟ್ಟ ಕ್ಷಣದಲ್ಲಿ ನಟಿ ಪ್ರಿಯಾಂಕಾ ಬಹಳಷ್ಟು ಅವಮಾನವನ್ನು ಎದುರಿಸಿದ್ದಾರೆ. ಅವರು ಶುರುವಿನಲ್ಲಿ ಸಿನಿಮಾಗಳಿಂದ ಹೊರಹಾಕಲ್ಪಟ್ಟು ಸಾಕಷ್ಟು ಅವಮಾನ ಎದುರಿಸಿದ್ದಾರೆ. ಕಪ್ಪು ಹುಡುಗಿ ಎಂದು ಅನೇಕರು ಜರಿದು ಅವರನ್ನು ಇಂಡಸ್ಟ್ರಿಯಿಂದ ಹೊರಗಿಡಲು ಬಹಳಷ್ಟು ಪ್ರಯತ್ನ ಪಟ್ಟಿದ್ದರು. ಆದರೆ, ನಟಿ ಪ್ರಿಯಾಂಕಾ ಛಲ ಹಾಗೂ ತಮ್ಮ ಗುರಿಯನ್ನು ಬಿಡಲಿಲ್ಲ, ಬದಲಾಯಿಸಿಕೊಳ್ಳಲಿಲ್ಲ. ನಟಿ ಪ್ರಿಯಾಂಕಾ ಚೋಪ್ರಾ ಅವರದ್ದು ಹೋರಾಟದ ಬದುಕು ಎನ್ನಬಹುದು. 

ಇತ್ತೀಚೆಗೆ ಮುಂಬೈಗೆ ಬಂದಿದ್ದ ನಟಿ ಪ್ರಿಯಾಂಕಾ ತಮ್ಮ ಸಿನಿ ಕೆರಿಯರ್ ಬಗ್ಗೆ, ತಾವು ಬೆಳೆದು ಬಂದ ಹಾದಿಯ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಕೆಲವೊಮ್ಮೆ ನನ್ನನ್ನು ಪುರುಷ ನಟರು ಅದೆಷ್ಟು ಸೈಡ್‌ಗೆ ಸರಿಸುತ್ತಿದ್ದರು ಎಂದರೆ ನನಗೆ ಸಿನಿಮಾ ಪ್ರಮೋಶನ್‌ಗಳಲ್ಲಿ ಮಾತನಾಡಲು ಬಿಡುತ್ತಲೇ ಇರಲಿಲ್ಲ. ಕ್ಯಾಮೆರಾ ಮುಂದೆ ನನ್ನ ಮುಖ ತೋರಿಸಲು ಕೂಡ ಬಿಡುತ್ತಿರಲಿಲ್ಲ. ಒಮ್ಮೆಯಂತೂ ಸಿನಿಮಾ ಸೆಟ್‌ನಲ್ಲಿ ನನಗೆ ಕೋ ಸ್ಟಾರ್ ನಟ ಡೈಲಾಗ್ ಹೇಳುವುದಕ್ಕೇ ಬಿಡಲಿಲ್ಲ. ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಇಂದು ನಾನೇನಾಗಿರುವೆನೋ ಅದರ ಹಿಂದೆ ಬಹಳಷ್ಟು ಪರಿಶ್ರಮವಿದೆ. 

ಸಿನಿಮಾಗಳಿಂದ ಹೊರ ಹಾಕಲ್ಪಟ್ಟಿರುವೆ, ಕಪ್ಪು ಬೆಕ್ಕು ಎಂದೂ ಕರೆಸಿಕೊಂಡಿರುವೆ; ಪ್ರಿಯಾಂಕಾ ಚೋಪ್ರಾ

ಕೆಲವು ಕೋ ಸ್ಟಾರ್ ನಟರು ಅದೆಷ್ಟು ಪರಿಪೂರ್ಣವಾಗಿ ಇರುತ್ತಾರೆ ಎಂದರೆ ತಾವು ಸೋಲೋ ಪರ್ಮಾಮನ್ಸ್ ಮಾಡಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಬರುತ್ತಾರೆ. ಅವರದ ನಮಗೆ ಡೈಲಾಗ್ ಡೆಲಿವರಿಗೂ ಟೈಮ್ ಕೊಡುವುದಿಲ್ಲ. ಜತೆಗೆ, ಅದೆಷ್ಟು ಪಕ್ಕಾ ಇರುತ್ತಾರೆ ಎಂದರೆ ನಮಗೆ ಡೈಲಾಗ್ ಮಧ್ಯೆ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳಲೂ ಕೂಡ ಬಿಡುವುದಿಲ್ಲ. ಆದರೆ, ಶೂಟಿಂಗ್ ಬಳಿಕ ಮಾನಿಟರ್‌ನಲ್ಲಿ ನೋಡಿದಾಗ ಎಲ್ಲವೂ ಪರ್ಫೆಕ್ಟ್ ಎಂಬಂತೆ ಇರುತ್ತದೆ. ಆದರೆ, ಕೆಲವೊಬ್ಬರು ಕೇವಲ ಬಿಲ್ಡಪ್ ತೆಗೆದುಕೊಳ್ಳುತ್ತಾರೆ, ಯಾವುದೇ ಪರಿಪೂರ್ಣತೆ ಅವರಲ್ಲಿ ಇರುವುದಿಲ್ಲ.

ರಾಮಮಂದಿರ ಉದ್ಘಾಟನೆಗೆ 'ಕಾಂತಾರ' ರಿಷಬ್ ಶೆಟ್ಟಿಗೆ ಆಹ್ವಾನ 

ನಟಿ ಪ್ರಿಯಾಂಕಾ ಕಷ್ಟಪಟ್ಟು ಕೆಲಸ ಮಾಡಿ ಈ ಹಂತಕ್ಕೆ ಬಂದಿದ್ದಾರೆ. ಅವರಿಗೆ ಯಾವುದೇ ಸಿನಿಮಾ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇರಲಿಲ್ಲ. ಯಾರೂ ಗಾಡ್‌ ಫಾದರ್ಸ್‌ ಇರಲಿಲ್ಲ. ಯಾವುದೇ ಬೆಂಬಲ ಇಲ್ಲದೇ ಬಂದ ಪ್ರಿಯಾಂಕಾ ತಮ್ಮ ಕೆಲಸದಿಂದಲೇ ಬೆಳೆದವರು. ಅವರು ೀ ಮೊದಲು ಒಮ್ಮೆ ಹೇಳಿದ್ದಂತೆ, ಅಮೆರಿಕಾದಲ್ಲಿ ಸ್ಕೂಲ್ ಓಪನ್ ಮಾಡಿದ್ದಾರಂತೆ. ಸದ್ಯ ಅವರ ಬಳಿ ಇರುವ ಒಟ್ಟೂ ಆಸ್ತಿಯ ಮೌಲ್ಯ ಬರೋಬ್ಬರಿ ರೂ. 620 ಕೋಟಿ ಎನ್ನಲಾಗಿದೆ. ಪಾಕೆಟ್ ಮನಿ ಅಂತಲೂ ಇಟ್ಟುಕೊಳ್ಳುವ ಅಭ್ಯಾಸ ಇಲ್ಲದ ಈ ನಟಿ ಇಂದು ಕೋಟ್ಯಾಂಟತ ರೂಪಾಯಿಗೆ ಬಾಳುತ್ತಾರೆ ಎಂಬುದು ಹಲವರಿಗೆ ಮಾದರಿಯಾಗಿ ನಿಲ್ಲುವ ವ್ಯಕ್ತಿತ್ವ ಎನ್ನಬಹುದು. 

Follow Us:
Download App:
  • android
  • ios