Asianet Suvarna News Asianet Suvarna News

57ರಲ್ಲೂ ಕುಗ್ಗದ ಸೌಂದರ್ಯ, ನಟಿ ಮಾಧುರಿ ದೀಕ್ಷಿತ್ ಡಯೆಟ್‌ ಸೀಕ್ರೆಟ್‌ ಇದು

ಮಾಧುರಿ ದೀಕ್ಷಿತ್ ಅವರ ಸೌಂದರ್ಯದ ಬಗ್ಗೆ ಬಹುತೇಕ ಎಲ್ಲರೂ  ಬೆರಗುಗೊಳ್ಳುವುದು ಸಹಜ, ತಮ್ಮ ನಿತ್ಯ ಜೀವನದಲ್ಲಿ ಕಟ್ಟುನಿಟ್ಟಿನ ಆಹಾರ ಮತ್ತು ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

Bollywood actress Madhuri Dixit beauty secrets Diet Plan And Skin Care Routine gow
Author
First Published May 30, 2024, 5:28 PM IST

ಮಾಧುರಿ ದೀಕ್ಷಿತ್ ಭಾರತೀಯ ಚಿತ್ರರಂಗದ ಪ್ರಸಿದ್ಧ ತಾರೆ.  1984 ರಲ್ಲಿ ಅಬೋಧ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.  2024ಕ್ಕೆ 40 ವರ್ಷಗಳ ಸಿನಿ ಪಯಣ ಪೂರೈಸಿದ್ದು, ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ನಟಿ ಮತ್ತು ಪ್ರಸಿದ್ಧ ನೃತ್ಯಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 1990 ಮತ್ತು 2000 ರ ದಶಕದ ಆರಂಭದಲ್ಲಿ, ಮಾಧುರಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. 

 ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಪದ್ಮಶ್ರೀ ಪ್ರಶಸ್ತಿಯೊಂದಿಗೆ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಮಾಧುರಿ 72 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಮ್ ಆಪ್ಕೆ ಹೈ ಕೌನ್, ದೇವದಾಸ್, ದಿಲ್ ತೋ ಪಾಗಲ್ ಹೈ, ತೇಜಾಬ್, ಬೇಟಾ, ದಿಲ್, ಕೊಯ್ಲಾ, ರಾಮ್ ಲಖನ್, ಪರಿಂದಾ, ಸಾಜನ್, ತ್ರಿದೇವ್, ರಾಜಾ, ಮತ್ತು ಇನ್ನೂ ಅನೇಕ ಚಿತ್ರಗಳು ಅವರ ಕೆಲವು ಸ್ಮರಣೀಯ ಚಲನಚಿತ್ರಗಳಾಗಿವೆ. 

ಮಾಧುರಿ ದೀಕ್ಷಿತ್ ತನ್ನ ಪತಿ ಡಾ ಶ್ರೀರಾಮ್ ಮಾಧವ್ ಮತ್ತು ಇಬ್ಬರು ಮಕ್ಕಳೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ. ಶ್ರೀರಾಮ್ ಪ್ರಸಿದ್ಧ ಹೃದಯ ಚಿಕಿತ್ಸಕ. ಅಕ್ಟೋಬರ್ 17, 1999 ರಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಾಧುರಿ ಅವರ ಅಣ್ಣನ ನಿವಾಸದಲ್ಲಿ  ವಿವಾಹವಾದರು. 

2003 ರಲ್ಲಿ ಮಾಧುರಿ ಆರಿನ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು. ಮಾಧುರಿ ಮತ್ತು ಶ್ರೀರಾಮ್ 2005 ರಲ್ಲಿ ಮತ್ತೊಂದು ಮಗುವನ್ನು ಸ್ವಾಗತಿಸಿದರು ಮತ್ತು ಅವನಿಗೆ ರಿಯಾನ್ ಎಂದು ಹೆಸರಿಸಿದರು. ಮಾಧುರಿ ದೀಕ್ಷಿತ್ ಅವರು ಮೇ 15, 2024 ರಂದು 57 ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಈ ಹರೆಯದಲ್ಲೂ ಆಕೆ ಸ್ವೀಟ್‌ 16 ನಂತೆ ಕಾಣುತ್ತಾರೆ. ತಮ್ಮ ಫಿಟ್‌ನೆಸ್ ಮತ್ತು ಮೈಕಟ್ಟಿಗಾಗಿ ಅನೇಕರು ಅವರನ್ನು ಶ್ಲಾಘಿಸುತ್ತಾರೆ. ಅವರ ಸೌಂದರ್ಯ, ಮೈಕಟ್ಟು,  ಹೊಳೆಯುವ ಚರ್ಮದ ಕಾಂತಿಗೆ ಕಾರಣವೇನು ಗೊತ್ತಾ?

ಮಾಧುರಿ ದೀಕ್ಷಿತ್ ಅವರ ಸೌಂದರ್ಯದ ಬಗ್ಗೆ ಬಹುತೇಕ ಎಲ್ಲರೂ  ಬೆರಗುಗೊಳ್ಳುವುದು ಸಹಜ, ತಮ್ಮ ನಿತ್ಯ ಜೀವನದಲ್ಲಿ ಕಟ್ಟುನಿಟ್ಟಿನ ಆಹಾರ ಮತ್ತು ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅವರ ಡಯೆಟ್‌ನಲ್ಲಿ ಪ್ರಮುಖ ವಿಷಯವೆಂದರೆ ಹೈಡ್ರೇಟೆಡ್  ಆಗಿರಲು ಎಂಟು ಲೋಟ ನೀರು, ಹಣ್ಣಿನ ರಸಕ್ಕಿಂತ ಹೆಚ್ಚು ಹಣ್ಣುಗಳನ್ನೇ ಹೆಚ್ಚು ಬಳಕೆ ಮಾಡುತ್ತಾರೆ. ದಿನವಿಡೀ ನಟಿ ಮಿಥವಾಗಿ ಆಹಾರ ತಿನ್ನುತ್ತಲೇ ಇರುತ್ತಾರೆ. ಸಂಸ್ಕರಿಸಿದ ಆಹಾರ ಮತ್ತು ಕೊಬ್ಬಿನ ಆಹಾರಗಳನ್ನು   ಕಟ್ಟುನಿಟ್ಟಾಗಿ  ಸೇವಿಸುವುದೇ ಇಲ್ಲ. ಬದಲಾಗಿ ಹಸಿರು ತರಕಾರಿಗಳನ್ನು ಆರಿಸಿಕೊಳ್ಳುತ್ತಾರೆ.  ಪ್ರತಿದಿನ ತಪ್ಪದೆ ಎಳನೀರು ಸೇವಿಸುತ್ತಾರೆ.  ತೂಕ  ಇಳಿಕೆಗೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಮಾಧುರಿ ದೀಕ್ಷಿತ್ ಅನುಸರಿಸುವ ಮತ್ತೊಂದು ಕಟ್ಟುನಿಟ್ಟಿನ ನಿಯಮ ಅಂದರೆ ರಾತ್ರಿ 7:30 ಕ್ಕೆ  ಸರಿಯಾಗಿ ತಮ್ಮ ಭೋಜನವನ್ನು ಮುಗಿಸುತ್ತಾರೆ. ಅವರ ಆಹಾರದಲ್ಲಿ ಪನ್ನೀರ್‌, ಚಿಕನ್, ಬ್ರೊಕೊಲಿ ಇಂತಹ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪ್ರೋಟೀನ್ ಆಹಾರಗಳು ಸೇರಿವೆ. ಹರ್ಬಲ್ ಟೀ ಮಾಧುರಿಯ ಆಹಾರದಲ್ಲಿ  ಇರುವ ಮತ್ತೊಂದು ಸೇರ್ಪಡೆ. ಮೂಳೆಯ ಆರೋಗ್ಯವನ್ನು ಇದು ಬೆಂಬಲಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ನಟಿ ಕಟ್ಟುನಿಟ್ಟಾಗಿ ಶೇಖರಿಸಿದ ಪಾನೀಯಗಳು, ಕೆಫೀನ್ ಮತ್ತು ತಕ್ಷಣಕ್ಕೆ ತೂಕ ಕಡಿಮೆ ಮಾಡುವ ಲಿಕ್ವಿಡ್‌ ಆಹಾರವನ್ನು ನಿಷೇಧಿಸಿದ್ದಾರೆ. 

ಒಮ್ಮೆ, ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ಮಾಧುರಿ ದೀಕ್ಷಿತ್  ತಮ್ಮ ತ್ವಚೆಯ ದಿನಚರಿಯ ಬಗ್ಗೆ ಮಾತನಾಡಿದ್ದರು. ಬೆಳಿಗ್ಗೆ ಕ್ಲೆನ್ಸರ್‌ನಿಂದ ಮುಖ ತೊಳೆಯುತ್ತೇನೆ ಮತ್ತು ಸೀರಮ್‌ ಹಾಕುತ್ತೇನೆ. ಆ ನಿರ್ದಿಷ್ಟ ದಿನದಂದು ತನ್ನ ಚರ್ಮವು ಹೇಗೆ ಕಾಣುತ್ತದೆ ಎಂಬುದರ ಮೇಲೆ ಅದಕ್ಕೆ ತಕ್ಕುನಾಗಿ ತಯಾರಾಗುತ್ತೇನೆ  ಎಂದು ಅವರು ಹೇಳಿದರು.   ದಿನಕ್ಕೆ ಎರಡು ಬಾರಿ ಬೆಳಿಗ್ಗೆ ಮತ್ತು ರಾತ್ರಿ  ಚರ್ಮದ ಆರೈಕೆಯ ದಿನಚರಿಯನ್ನು ಅನುಸರಿಸುತ್ತಾರೆ ಎಂದು ಬಹಿರಂಗಪಡಿಸಿದರು. 

ಮಾಧುರಿ ದೀಕ್ಷಿತ್ ಅವರು ತಮ್ಮ ಸುಂದರವಾದ ಕೂದಲಿನ ಹಿಂದಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕೂದಲಿಗೆ ಎಣ್ಣೆ ಹಾಕುವುದು ಮುಖ್ಯ ಎಂದಿದ್ದಾರೆ. ನಟಿ ತನ್ನ ಕೂದಲು ಮತ್ತು ನೆತ್ತಿಯ ಮೇಲೆ ಆಲಿವ್ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಬೆರೆಸುತ್ತಾರೆ. ಇದು  ಕೂದಲಿನ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದಲ್ಲದೆ ಫಿಟ್‌ನೆಸ್‌ಗಾಗಿ ಯೋಗ, ವ್ಯಾಯಾಮ ಮಾಡುತ್ತಾರೆ.

Latest Videos
Follow Us:
Download App:
  • android
  • ios