ಯೋಗಿ ಆದಿತ್ಯನಾಥ್ ಭೇಟಿಯಾದ ಕಂಗನಾ; ಮಹಾರಾಜ್ ಎಂದು ಹೊಗಳಿದ ನಟಿ
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್(Kangana Ranaut) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಕಂಗನಾ ಬೇರೆ ಬೇರೆ ವಿಚಾರಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಕಂಗನಾ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದಲ್ಲಿ ಕಂಗನಾ ಭೇಟಿಯಾಗಿದ್ದಾರೆ.
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್(Kangana Ranaut) ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಕಂಗನಾ ಬೇರೆ ಬೇರೆ ವಿಚಾರಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಕಂಗನಾ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದಲ್ಲಿ ಕಂಗನಾ ಭೇಟಿಯಾಗಿದ್ದಾರೆ.
ಮೇ 1 ಸಂಜೆ ಕಂಗನಾ ಸಿಎಂ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಅಂದಹಾಗೆ ಕಂಗನಾ ಮತ್ತು ಆದಿತ್ಯನಾಥ್ ಅವರು ಭೇಟಿಯಾಗುತ್ತಿರುವುದು ಇದು 2ನೇ ಬಾರಿಯಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದೀಗ 2ನೇ ಬಾರಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಅಭೂತಪೂರ್ವ ಗೆಲವು ದಾಖಲಿಸಿರುವ ಯೋಗಿ ಆದಿತ್ಯನಾಥ್ ಅವರಿಗೆ ಕಂಗನಾ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಭೇಟಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.' ಚುನಾವಣೆಯಲ್ಲಿ ಪ್ರಚಂಡ ಗೆಲವು ದಾಖಲಿಸಿದ ಮಹಾರಾಜ್ ಆದಿತ್ಯನಾಥ್ ಅವರನ್ನು ಭೇಟಿಯಾಗಿರುವ ಭಾಗ್ಯ ನನಗೆ ಸಿಕ್ಕಿತ್ತು. ಇದು ಅದ್ಭುತವಾದ ಸಂಜೆಯಾಗಿತ್ತು. ಸಹಾನುಭೂತಿ, ಕಾಳಜಿ ನನ್ನು ವಿಸ್ಮಯಗೊಳಿಸುವುದನ್ನು ನಿಲ್ಲಿಸಲ್ಲ. ನನಗೆ ಸ್ಪೂರ್ತಿಯಾಗಿದೆ' ಎಂದು ಹೇಳಿದ್ದಾರೆ.
ಅಂದಹಾಗೆ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲ ನೀಡಿದ್ದರು. ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ದಾಖಲಿಸಿದ ಬಳಿಕವೂ ಕಂಗನಾ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಇದೀಗ ಮತ್ತೆ ಭೇಟಿಯಾದ ಬಗ್ಗೆ ಕಂಗನಾ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಕಂಗನಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿರುತ್ತದೆ. ಹಾಗಾಗಿ ಆದಿತ್ಯನಾಥ್ ಭೇಟಿ ಕುತೂಹಲ ಹೆಚ್ಚಿಸಿದೆ.
ನನ್ನನ್ನು ಕೆಟ್ಟದಾಗಿ ಮುಟ್ಟುತ್ತಿದ್ದ, ಬಟ್ಟೆ ಬಿಚ್ಚುತ್ತಿದ್ದ; ಬಾಲ್ಯದ ಭಯಾನಕ ಅನುಭವ ಹೇಳಿದ ಕಂಗನಾ
ಅಂದಹಾಗೆ ಕಂಗನಾ ಸದ್ಯ ಲಾಕ್ ಆಪ್ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಕಂಗನಾ ಬಾಲ್ಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿತ್ತು ಎಂದು ಬಹಿರಂಗ ಪಡಿಸಿದ್ದರು. 'ಬಾಲ್ಯದಲ್ಲಿ ಅನೇಕರಿಗೆ ಇಂಥ ಕೆಟ್ಟ ಘಟನೆಯ ಅನುಭವವಾಗಿದೆ. ನನಗೂ ಸೇರಿದಂತೆ. ನಾನು ಆಗ ಇನ್ನು ಚಿಕ್ಕವಳಿದ್ದೆ. ನಾನು ವಾಸವಿದ್ದ ನಗರದಲ್ಲಿ ಒಬ್ಬ ಹುಡುಗ ನನಗಿಂತ ಸ್ವಲ್ಪ ವರ್ಷ ದೊಡ್ಡವನು, ನನ್ನನ್ನು ಕೆಟ್ಟದಾಗಿ ಮುಟ್ಟಿದ್ದ. ಅದರ ಬಗ್ಗೆ ನನಗೆ ಆಗ ಗೊತ್ತಿರಲಿಲ್ಲ' ಎಂದು ಹೇಳಿದರು. ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಬೇಕು ಇದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕಂಗನಾ ಲಾಕ್ಆಪ್ ಶೋನಲ್ಲಿ ಹೇಳಿದ್ದರು.
ಮಹಿಳೆಯರು ತಮ್ಮನ್ನು ಮೀರಿಸುವುದನ್ನು ನೋಡಿದಾಗ ಪುರುಷರು ಮನನೊಂದುಕೊಳ್ಳುತ್ತಾರೆ: ಕಂಗನಾ
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಧಾಖಡ್ ಮತ್ತು ತೇಜಸ್ ಸಿನಿಮಾದ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಟಿಕು ವೆಡ್ಸ್ ಶೇರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಕಂಗನಾ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.