Asianet Suvarna News Asianet Suvarna News

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಸ್ವಸ್ಥ, ಮುಂಬೈ ಆಸ್ಪತ್ರೆಗೆ ದಾಖಲು!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ತಕ್ಷಣವೇ ಪಡುಕೋಣೆಯನ್ನು ಆಸ್ಪತ್ರೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Bollywood Actress Deepika Padukone rushed to Mumbai hospital after she complained of uneasiness ckm
Author
First Published Sep 27, 2022, 7:54 PM IST

ಮುಂಬೈ(ಸೆ.27):  ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾದ ದೀಪಿಕಾ ಪಡುಕೋಣೆ ಮುಂಬೈನ ಬ್ರೀಚ್ ಕ್ಯಾಂಡಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರ ತಡ ರಾತ್ರಿ ದೀಪಿಕಾ ಪಡುಕೋಣೆ ಅಸ್ವಸ್ಥರಾಗಿದ್ದಾರೆ. ಹೀಗಾಗಿ ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಾಗಿತ್ತು. ವೈದ್ಯರ ತಂಡ ಪಡುಕೋಣೆಯನ್ನು ತಪಾಸಣೆ ಮಾಡಿದ್ದಾರೆ. ಹಲವು ಪರೀಕ್ಷೆಗಳನ್ನು ಮಾಡಿದ್ದಾರೆ. ಸದ್ಯ ದೀಪಿಕಾ ಪಡುಕೋಣೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಿಂಕ್‌ವಿಲ್ಲ ಮಾಧ್ಯಮ ವರದಿ ಮಾಡಿದೆ. ಆದರೆ ದೀಪಿಕಾ ಪಡುಕೋಣೆ ತಂಡ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ದೀಪಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಕೆಲ ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಶೀಘ್ರ ಗುಣಮುಖಕ್ಕಾಗಿ ಪ್ರಾರ್ಥಿಸಿದ್ದಾರೆ. ಆದರೆ ಯಾರೂ ಆತಂಕಪಡುವ ಅಗತ್ಯವಿಲ್ಲ. ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಸುಧಾರಣೆಯಾಗಿದ ಎಂದು ವೈದ್ಯರು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ದೀಪಿಕಾ ಪಡುಕೋಣೆ(Deepika Padukone) ಇದೇ ರೀತಿ ಅಸ್ವಸ್ಥರಾಗುವ ಮೂಲಕ ಆಸ್ಪತ್ರೆ(Hospital) ದಾಖಲಾಗಿದ್ದರು. ಇದೀಗ ಎರಡನೇ ಬಾರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಹೃದಯ ಬಡಿತ ಹೆಚ್ಚಾಗಿದೆ. ಹಾರ್ಟ್ ರೇಟ್ ಹೆಚ್ಚಾದ ಕಾರಣ ಹೈದರಾಬಾದ್‌ನ ಕಮಿನೆನಿ ಆಸ್ಪತ್ರೆಗೆ ದಾಖಲಾಗಿದ್ದರು. ಅರ್ಧ ದಿನ ದೀಪಿಕಾ ವೈದ್ಯರ ನಿರೀಕ್ಷೆಯಲ್ಲಿದ್ದರು. ಬಳಿಕ ಚೇತರಿಸಿಕೊಂಡು ದೀಪಿಕಾ ಕೆಲ ದಿನಗಳ ವಿಶ್ರಾಂತಿ ಬಳಿಕ ಶೂಟಿಂಗ್‌ಗೆ ಹಾಜರಾಗಿದ್ದರು. ಇದೀಗ ಎರಡನೇ ಬಾರಿಗೆ ದೀಪಿಕಾ ಅಸ್ವಸ್ಥರಾಗಿದ್ದಾರೆ .

ಪ್ರಭಾಸ್-ದೀಪಿಕಾ ಪಡುಕೋಣೆಗೆ ಹಾಲಿವುಡ್‌ Action ಡೈರೆಕ್ಟರ್‌ಗಳಿಂದ ತರಬೇತಿ

ಸದ್ಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿರುವ(Breach Candy Hospital) ದೀಪಿಕಾ ಪಡುಕೋಣೆ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಸತತ ಶೂಟಿಂಗ್ ಸೇರಿದಂತೆ, ಎಂಡೋರ್ಸ್‌ಮೆಂಟ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿರುವ ದೀಪಿಕಾ ಪಡುಕೋಣೆ ಹೆಚ್ಚು ಆಯಾಸವಾಗಿದ್ದರೆ. ಅವರಿಗೆ ಕೆಲ ದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು(Docotrs) ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಶಾರುಖ್ ಖಾನ್, ಜಾನ್ ಅಬ್ರಾಹಾಂ ಜೊತೆ ಪಠಾಣ್ ಚಿತ್ರದಲ್ಲಿ(Bollywood) ದೀಪಿಕಾ ಕಾಣಿಸಿಕೊಂಡಿದ್ದಾರೆ. ಇನ್ನು ಸೌತ್ ಸ್ಟಾರ್ ಪ್ರಭಾಸ್ ಜೊತೆಗೆ ಪ್ರಾಜೆಕ್ಟ್ ಕೆ ಚಿತ್ರದ ಶೂಟಿಂಗ್ ಕೂಡ ಮುಗಿಸಿದ್ದಾರೆ. ಹೃತಿಕ್ ರೋಶನ್ ಜೊತೆಗಿನ ಫೈಟರ್ ಚಿತ್ರದಲ್ಲೂ ದೀಪಿಕಾ ಪಡುಕೋಣೆ ಬ್ಯೂಸಿಯಾಗಿದ್ದಾರೆ. ಸತತ ಚಿತ್ರಗಳು, ಜಾಹೀರಾತು, ಎಂಡೋರ್ಸ್‌ಮೆಂಟ್ ಮೂಲಕ ದೀಪಿಕಾ ಬ್ಯೂಸಿಯಾಗಿದ್ದಾರೆ.

ತಂಗಿ ಕೈ ಹಿಡಿದು ಬಂದ ದೀಪಿಕಾ; ಬೆಸ್ಟ್ ಸಿಸ್ಟರ್ಸ್ ಎಂದ ನೆಟ್ಟಿಗರು

ಪ್ರಕಾಶ್‌ ಪಡುಕೋಣೆ ಜೀವನಾಧರಿತ ಚಿತ್ರ ನಿರ್ಮಿಸಲಿರುವ ದೀಪಿಕಾ
ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರ ತಂದೆ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪ್ರಕಾಶ ಪಡುಕೋಣೆಯವರ ಜೀವನಾಧರಿತ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಸೂಚನೆಯನ್ನು ದೀಪಿಕಾ ನೀಡಿದ್ದಾರೆ. ಈ ಚಿತ್ರದ ಕುರಿತ ತಯಾರಿಯನ್ನು ದೀಪಿಕಾ ಮಾಡುತ್ತಿದ್ದಾರೆ.  ಇತ್ತೀಚೆಗೆ ದೀಪಿಕಾಳ ಪತಿ ರಣವೀರ್‌ ಸಿಂಗ್‌ ಭಾರತ 1983ರಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆದ್ದಿದ್ದರ ಕುರಿತ ‘83’ ಚಿತ್ರದಲ್ಲಿ ನಿರ್ಮಿಸಿ ನಟಿಸಿದ್ದರು. ಈ ಕುರಿತು ಯೂಟ್ಯೂಬ್‌ ಚಾನೆಲ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ದೀಪಿಕಾ, ‘1983ರಲ್ಲಿ ಭಾರತ ವಿಶ್ವಕಪ್‌ ಗೆಲ್ಲುವಕ್ಕಿಂತಲೂ ಮೊದಲು ನನ್ನ ತಂದೆ 1981 ರಲ್ಲೇ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದರು. ಆಗಿನ ಕಾಲದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಗಳಿರಲಿಲ್ಲ. ಬ್ಯಾಡ್ಮಿಂಟನ್‌ ಕೋರ್ಟ್‌ ಇಲ್ಲದೇ ನನ್ನ ತಂದೆ ವಿವಾಹದ ಹಾಲ್‌ನಲ್ಲಿ ಆಡುತ್ತಿದ್ದರು. ಈಗ ಕ್ರೀಡಾಪಟುಗಳಿಗಿರುವ ಸೌಲಭ್ಯ ಅವರಿಗೆ ಸಿಕ್ಕಿದ್ದರೆ ಅವರು ಕ್ರೀಡೆಯನ್ನು ಇನ್ನಷ್ಟುಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಹೀಗಾಗಿ ಅವರ ಜೀವನ, ಸಾಧನೆ ಬಗ್ಗೆ ಚಿತ್ರ ನಿರ್ಮಿಸುತ್ತೇನೆ’ ಎಂದಿದ್ದಾರೆ.
 

Follow Us:
Download App:
  • android
  • ios