Asianet Suvarna News Asianet Suvarna News

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಬಿಪಾಶಾ ಬಸು

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಇಂದು (ನವೆಂಬರ್ 12) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.

Bollywood Actress bipasha basu and Karan Singh Grover blessed with baby girl sgk
Author
First Published Nov 12, 2022, 2:53 PM IST

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಇಂದು (ನವೆಂಬರ್ 12) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಇದೀಗ ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಬಿಪಾಶಾ ಮತ್ತು ಕರಣ್ ಸಿಂಗ್ ಇಬ್ಬರೂ 2016ರಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. 6 ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಬಿಪಾಶಾ ದಂಪತಿ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.    

ಆಗಸ್ಟ್ ತಿಂಗಳಲ್ಲಿ ಬಿಪಾಶಾ  ಮತ್ತು ಕರಣ್ ಸಿಂಗ್ ತಂದೆ-ತಾಯಿ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದರು. ಬಳಿಕ ಗರ್ಭಿಣಿ ಬಿಪಾಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತರಹೇವಾರಿ ಫೋಟೋಶೂಟ್ ಮಾಡಿದ್ದರು. ಬಿಪಾಶಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವೊಮ್ಮೆ ಬಿಪಾಶಾ ಫೋಟೋಗಳು ನೆಟ್ಟಿಗರ ಕೋಪಕ್ಕೂ ಕಾರಣವಾಗಿತ್ತು. ಗರ್ಭಿಣಿಯಾದಾಗ ಹಾಟ್ ಆಗಿ ಕಾಣಿಸಿಕೊಳ್ಳಬೇಕಾ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಪಾಶಾ ದಂಪತಿ ಸಿಕ್ಕಾಪಟ್ಟೆ ಫೋಟೋ ಶೂಟ್ ಮಾಡಿದ್ದರು. 

ಬಿಪಾಶಾ ಸಿಕ್ಕಾಪಟ್ಟೆ ಬೋಲ್ಡ್‌ ಫೋಟೋ; ಗರ್ಭಿಣಿಯಾಗಿದ್ದಾಗ ನಗ್ನವಾಗಿರುವುದು ಕಡ್ಡಾಯವೇ? ನೆಟ್ಟಿಗ್ಗರು ಕಿಡಿ

ಇನ್ನು ಸಿನಿಮಾಗಳ ಬಗ್ಗೆ ಹೇಳುವುದಾದರೆ ಕಳೆದ ಏಳು ವರ್ಷಗಳಿಂದ ಬಿಪಾಶಾ ಬಸು ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಕೊನೆಯದಾಗಿ 2015 ರ ಅಲೋನ್ ಚಿತ್ರದಲ್ಲಿ ಕಾಣಿಸಿಕೊಂಡರು. ಬಿಪಾಶಾ 2001 ರಲ್ಲಿ ಅಜ್ಞಾತವಾಸ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದಲ ಸಿನಿಮಾನೆ ಹಿಟ್ ಆಗಿತ್ತು. ನಂತರ ಅವರು  ರಾಝ್‌ನಲ್ಲಿ ಕಾಣಿಸಿಕೊಂಡರು ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಬಿಪಾಶಾ ರಾತ್ರೋರಾತ್ರಿ ಸ್ಟಾರ್ ಆದರು. ನಂತರ ಅವರು ಗುಣಾ, ಜಿಸ್ಮ್, ಜಮೀನ್, ಇತ್ಬಾರ್, ಮಧೋಶಿ, ಫಿರ್ ಹೇರಾ ಫೆರಿ, ಓಂಕಾರ, ಧೂಮ್ 2, ರೇಸ್, ಆಕ್ರೋಷ್, ದಮ್ ಮಾರೋ ದಮ್, ಪ್ಲೇಯರ್ಸ್, ಆತ್ಮ, ರೇಸ್ 2, ಹಮ್ಶಕಲ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

 

 

Follow Us:
Download App:
  • android
  • ios