'ಬ್ರಹ್ಮಾಸ್ತ್ರ' ಟ್ರೈಲರ್ ರಿಲೀಸ್ ಬೆನ್ನಲ್ಲೇ ಸೌತ್ v/s ಬಾಲಿವುಡ್ ಬಗ್ಗೆ ಅಲಿಯಾ ಭಟ್ ಪ್ರತಿಕ್ರಿಯೆ
ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ (Alia Bhatt) ಸೌತ್ ಮತ್ತು ಬಾಲಿವುಡ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ದಂಪತಿ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಅಲಿಯಾ ಸೌತ್ ವರ್ಸಸ್ ಬಾಲಿವುಡ್ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ.
ಸೌತ್ ವರ್ಸಸ್ ಬಾಲಿವುಡ್ ಚರ್ಚೆ ( North vs South debate) ಇನ್ನು ನಿಂತಿಲ್ಲ. ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಮುಂದುವರೆದಿದ್ದು ಹಿಂದಿ ಸಿನಿಮಾಗಳು ಸರಣಿ ಸೋಲು ಕೂಡ ಮುಂದುವರೆದಿದೆ. ಪ್ಯಾನ್ ಇಂಡಿಯಾ (Pan India) ಹೆಸರಿನಲ್ಲಿ ತೆರೆಗೆ ಬರ್ತಿರುವ ದಕ್ಷಿಣದ ಸಿನಿಮಾಗಳು ದೇಶದಾದ್ಯಂತ ಆರ್ಭಟಿಸುತ್ತಿವೆ. ಸೌತ್ ಸಿನಿಮಾಗಳ ಗೆಲುವು ಬಾಲಿವುಡ್‌ನನ್ನು ಮಂಕಾಗಿಸಿದೆ. ಇತ್ತೀಚಿಗೆ ಬಂದ ಭೂಲ್ ಭುಲೈಯಾ-2 ಸಿನಿಮಾ ಬಿಟ್ಟರೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ನೆಲಕಚ್ಚಿವೆ. ಇತ್ತ ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡುವ ಮೂಲಕ ಗೆಲುವು ದಾಖಲಿಸುತ್ತಿವೆ. ಸೌತ್ ಸಿನಿಮಾಗಳ ಸರಣಿ ಗೆಲುವಿನ ಬೆನ್ನಲ್ಲೇ ದಕ್ಷಿಣ ಭಾರತ ವರ್ಸಸ್ ಬಾಲಿವುಡ್ ಚರ್ಚೆ ಜೋರಾಗಿದೆ. ಪ್ಯಾನ್ ಇಂಡಿಯಾ ಎನ್ನವ ಪದ ಕೂಡ ಚರ್ಚೆಯಾಗುತ್ತಿದೆ.
ಇತ್ತೀಚಿಗೆ ಗೆಲುವು ದಾಖಲಿಸುತ್ತಿರುವ ಸೌತ್ ಸಿನಿಮಾಗಳನ್ನು ಗಮನಿಸಿದ ಅನೇಕ ಕಲಾವಿದರು ಭಾಷೆಗಿಂತ ಕಂಟೆಂಟ್ ಮುಖ್ಯ ಎನ್ನುವುದನ್ನು ನಂಬಿದ್ದಾರೆ. ಬಾಲಿವುಡ್ ಆಗಲಿ ಸೌತ್ ಆಗಲಿ ಕಂಟೆಂಟ್ ಮುಖ್ಯ ಎನ್ನುವ ಸತ್ಯ ಅರಿವಾಗಿದೆ. ಇದೀಗ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ (Alia Bhatt) ಸೌತ್ ಮತ್ತು ಬಾಲಿವುಡ್ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ದಂಪತಿ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಅಲಿಯಾ ಸೌತ್ ವರ್ಸಸ್ ಬಾಲಿವುಡ್ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ.
ಹಿಂದಿ, ತಮಿಳು, ತೆಲುಗು ಸಿನಿಮಾ ಎನ್ನುವುದಿಲ್ಲ ಎಲ್ಲವು ಇಂಡಿಯನ್ ಸಿನಿಮಾ ಎಂದು ಹೇಳಿದ್ದಾರೆ. ನಾನು ಇಲ್ಲಿ ಕುಳಿತು ಗಮನಿಸಿದ್ದೇನೆಂದರೆ ಹಿಂದಿ, ತಮಿಳು, ತೆಲುಗು ಸಿನಿಮಾ ಅಂತಲ್ಲ, ಎಲ್ಲವೂ ಇಂಡಿಯನ್ ಸಿನಿಮಾ. ಈ ಭಾವನೆ ಇರಬೇಕು. ಸಿನಿಮಾ ಪ್ರೇಕ್ಷಕರಿಗಾಗಿ, ಎಲ್ಲರಿಗಾಗಿ ಎಂದಿದ್ದಾರೆ.
ದಯವಿಟ್ಟು ಒಡೆದು ಆಳುವ ನೀತಿ ನಿಲ್ಲಿಸಿ, ಅಲ್ಲು ಅರ್ಜುನ್ ನನ್ನ ಸಿನಿಮಾದಲ್ಲಿ ನಟಿಸ್ತಾರೆ; ಅಕ್ಷಯ್ ಕುಮಾರ್
ಅಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಈ ಸಿನಿಮಾ ಬಳಿಕ ಬಂದ ಆರ್ ಆರ್ ಆರ್ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇದೀಗ ಅಲಿಯಾ ಬ್ರಹ್ಮಾಸ್ತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಭಾರಿ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶಿವ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನಿಗೆ ವಿಶೇಷವಾದ ಶಕ್ತಿ ಇರುತ್ತದೆ. ಅಗ್ನಿ ಶಕ್ತಿ ಮತ್ತು ಬ್ರಹ್ಮಾಸ್ತ್ರದ ರಕ್ಷಕ. ಇಶಾ (ಅಲಿಯಾ ಭಟ್) ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. ಇನ್ನು ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಟಾಲಿವುಡ್ ಸ್ಟಾರ್ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿಸಿದ್ದಾರೆ. ಕೆಜಿಎಫ್ ಬೆಡಗಿ ಮೌನಿ ರಾಯ್ ವಿಲನ್ ಆಗಿ ಮಿಂಚಿದ್ದಾರೆ.
ವಿವಾದದಲ್ಲಿ ಬ್ರಹ್ಮಾಸ್ತ್ರ; ಶೂ ಧರಿಸಿ ದೇವಸ್ಥಾನದ ಘಂಟೆ ಹೊಡೆದ ರಣಬೀರ್, ಡಿಸಾಸ್ಟರ್ ಎಂದ ನೆಟ್ಟಿಗರು
ಬ್ರಹ್ಮಾಸ್ತ್ರ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ. ತೆಲುಗು ವರ್ಷನ್ ಬ್ರಹ್ಮಾಸ್ತ್ರಗೆ ಮೆಗಾಸ್ಟಾರ್ ಚಿರಂಜೀವಿ ಧ್ವನಿ ನೀಡಿದ್ದಾರೆ. ಚಿರಂಜೀವಿ ಧ್ವನಿ ನೀಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಯನ್ ಮುಖರ್ಜಿ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷೆಯ ಸಿನಿಮಾ ಸೆಪ್ಟಂಬರ್ 9ರಂದು ತೆರೆಗೆ ಬರುತ್ತಿದೆ.