ಮುಂಬೈ(ಏ.17): ಕೊರೋನಾ ಸಮಯದಲ್ಲಿ  ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿದ ಬಾಲಿವುಡ್ ನಟ ಸೋನು ಸೂದ್‌ಗೆ ಇದೀಗ ಕೊರೋನಾ ವೈರಸ್ ತಗುಲಿದೆ. ಈ ಕುರಿತ ಸ್ವಥ ಸೋನ್ ಸ್ಪಷ್ಟಪಡಿಸಿದ್ದಾರೆ. ತಮಗೆ ಕೊರೋನಾ ಅಂಟಿಕೊಂಡಿದ್ದರೂ ಯಾರೂ ಆತಂಕ ಪಡುವ ಅಗತ್ಯವಿಲ್ಲ, ನಿಮ್ಮ ಕಷ್ಟಗಳಿಗೆ ನೆರವಾಗಲು ಸದಾ ಸಿದ್ದ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Sonu Sood (@sonu_sood)

ಸೋನು ಸೂದ್ ಆ್ಯಂಬುಲೆನ್ಸ್ ಸೇವೆ: ಇದಕ್ಕಿದೆ ಒಂದು ವಿಶೇಷತೆ

ಕಳೆದ ವರ್ಷ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಲಾಗಿತ್ತು. ಈ ವೇಳೆ ವಲಸೆ ಕಾರ್ಮಿಕರು, ನಿರ್ಗತಿಕರು, ಬಡವರು, ಅಗತ್ಯವಿರುವ ಎಲ್ಲರಿಗೂ ಸೋನು ಸೂದ್ ನೆರವು ನೀಡಿದ್ದರು. ಬಳಿಕ ತಂಡಗಳನ್ನು ರಚಿಸಿ ದೇಶದ ಎಲ್ಲಾ ಭಾಗದ ಜನರಿಗೆ ನೆರವಾಗಿದ್ದರು. ಇದೀಗ ತಮಗೆ ಕೋವಿಡ್ ಅಂಟಿಕೊಂಡಿದ್ದರು, ತಾನು ನಿಮ್ಮ ಕಷ್ಟಗಳಿಗೆ ನೆರವಾಗಲಿದ್ದೇನೆ ಎಂದಿದ್ದಾರೆ. ಸೋನು ಸೂದ್‌ಗೆ ಕೊರೋನಾ ಎಂದ ತಕ್ಷಣ ಇಡೀ ಭಾರತವೇ ಶೀಘ್ರ ಚೇತರಿಕಿಗೆ ಹಾರೈಸಿದೆ.

ಕಾರ್ಮಿಕರ, ನಿರುದ್ಯೋಗಿಗಳ, ಅನಾಥರ ಬಂಧುವಾದ ಸೋನು ಸೂದ್​​ಗಾಗಿ ದೇವಾಲಯ!.

ನನಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈಗ ನನಗೆ ಹೆಚ್ಚಿನ ಸಮಯ ಸಿಗಲಿದೆ. ನಿಮ್ಮಲ್ಲೆರ ಕಷ್ಟಗಳಿಗೆ ನೆರವಾಗುತ್ತೇನೆ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ಕೊರೋನಾ ಲಸಿಕೆ ಪಡೆದ 10 ದಿನಗಳ ಬಳಿಕ ಇದೀಗ ಕೋವಿಡ್ ವೈರಸ್‌ ತಗುಲಿದೆ.  ಈ ಕುರಿತು ಅಭಿಮಾನಿಗಳು ಸೋನು ಸೂದ್‌ಗೆ ಟ್ವೀಟ್ ಮೂಲಕ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ನಿಮ್ಮ ಸೇವೆ ಈ ದೇಶಕ್ಕೆ ಅಗತ್ಯವಿದೆ. ದೇಶದ ಕಷ್ಟಕ್ಕೆ ಸ್ಪಂದಿಸಿದ ನೀವು, ಇದೀಗ ನಿಮ್ಮ ಆರೋಗ್ಯದ ಕುರಿತು ಮೊದಲು ಕಾಳಜಿ ವಹಿಸಿ ಎಂದಿದ್ದಾರೆ