ಶಾರುಖ್ ಖಾನ್ ಬಾಲಿವುಡ್‌ನ ಕಿಂಗ್ ಖಾನ್ ಆಗಿದ್ದು, 'ದಿವಾನಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಟ ಸಿನಿಮಾ ಒಪ್ಪದ ಕಾರಣ ಶಾರುಖ್ ಖಾನ್‌ಗೆ ಸ್ಟಾರ್ ಗಿರಿ ಸಿಕ್ಕಿತು. ಇಂದಿಗೂ ಆ ಸಿನಿಮಾ ಬಿಟ್ಟಿದ್ದಕ್ಕೆ ನಟ ಬೇಸರ ವ್ಯಕ್ತಪಡಿಸುತ್ತಾರೆ.

ಮುಂಬೈ: ನಟ ಶಾರೂಖ್ ಖಾನ್ ಅವರನ್ನು ಬಾಲಿವುಡ್ ಅಂಗಳದ ಕಿಂಗ್ ಖಾನ್, ಬಾದ್‌ಶಾ ಎಂದು ಕರೆಯಲಾಗುತ್ತದೆ. ಭಾರತದ ಸೂಪರ್ ಸ್ಟಾರ್ ನಟರ ಪಟ್ಟಿಯಲ್ಲಿ ಶಾರೂಖ್ ಖಾನ್ ಹೆಸರು ಸೇರಿದೆ. ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಶಾರೂಖ್ ಖಾನ್ ಅವರನ್ನು ಗುರುತಿಸಲಾಗುತ್ತದೆ. 1992ರಲ್ಲಿ ಬಿಡುಗಡೆಯಾದ 'ದಿವಾನಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಶಾರೂಖ್ ಖಾನ್ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಕಿಂಗ್ ಅಂಕಲ್, ಬಾಜಿಗರ್ ಸಿನಿಮಾದಲ್ಲಿ ಶಾರೂಖ್ ಖಾನ್ ನಟಿಸಿದರು. ಈ ಮೂರು ಸಿನಿಮಾಗಳಿಂದ ಶಾರೂಖ್ ಕಡಿಮೆ ಸಮಯದಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡರು. ಅಂದು ಉದಯನ್ಮೋಕ ನಟರಾಗಿದ್ದ ಶಾರೂಖ್‌ ಖಾನ್, ಸ್ಟಾರ್ ಪಟ್ಟ ಸಿಗಲು ಕಾರಣ ಮತ್ತೋರ್ವ ಹೀರೋ. 11 ದಿನಕ್ಕೆ 47 ಸಿನಿಮಾಗಳಿಗೆ ಸಹಿ ಹಾಕುತ್ತಿದ್ದ ನಟ ಮಾಡಿದ ಒಂದು ತಪ್ಪಿನಿಂದ ಶಾರೂಖ್‌ ಖಾನ್‌ಗೆ ಸ್ಟಾರ್ ಗಿರಿ ಸಿಕ್ಕಿತು. 

'ಡರ್' ಸಿನಿಮಾದಲ್ಲಿ ಸನ್ನಿ ಡಿಯೋಲ್ ಲೀಡ್ ರೋಲ್‌ನಲ್ಲಿ ನಟಿಸಿದ್ರೆ, ಶಾರೂಖ್ ಖಾನ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು. ಆದ್ರೆ ಚಿತ್ರದಲ್ಲಿ ನಾಯಕ ನಟನಗಿಂತ ಖಳನಾಯಕನ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು. ಸೈಕೋ ಪ್ರೇಮಿಯಾಗಿ ಕಾಣಿಸಿಕೊಂಡಿದ್ದ ಶಾರೂಖ್ ಖಾನ್ ತಮ್ಮ ಅದ್ಭುತ ನಟನೆ ಮೂಲಕ ಚಿತ್ರದ ಗೆಲುವಿಗೆ ಕಾರಣರಾಗಿದ್ದರು. ಇಂದಿಗೂ ಶಾರೂಖ್ ಖಾನ್ ಚಿತ್ರದಲ್ಲಿ ಪ್ರೇಯಸಿ ಕಿರಣ್‌ಳನ್ನು ಕರೆಯೋ ಶೈಲಿಗೆ ಅಭಿಮಾನಿಗಳು ಫಿದಾ ಆಗ್ತಾರೆ.

ಡರ್ ಚಿತ್ರಕ್ಕೆ ಶಾರೂಖ್ ಖಾನ್ ಮೊದಲ ಆಯ್ಕೆಯಾಗಿರಲಿಲ್ಲ. ಕಾರಣಾಂತರಗಳಿಂದ ಸ್ಟಾರ್ ನಟ ಸಿನಿಮಾ ಒಪ್ಪದ ಕಾರಣ, ಡರ್ ಚಿತ್ರದ ವಿಲನ್ ರೋಲ್ ಶಾರೂಖ್ ಖಾನ್ ಪಾಲಾಗಿತ್ತು. ಈ ಚಿತ್ರ ಬಿಡುಗಡೆಯಾದ ಬಳಿಕ ಶಾರೂಖ್ ಖಾನ್ ಇಮೇಜ್ ಸಂಪೂರ್ಣ ಬದಲಾಗಿತ್ತು. ಎಲ್ಲಾ ಪಾತ್ರಗಳಿಗೂ ತಾನು ಸೈ ಎಂಬುದನ್ನು ಶಾರೂಖ್ ಖಾನ್ ಸಾಬೀತು ಮಾಡಿದ್ದರು. ಶಾರೂಖ್ ಖಾನ್ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆಯೂ ಅಧಿಕವಾಯ್ತು. ಹಾಗಾದ್ರೆ ಚಿತ್ರದ ಮೊದಲ ಆಯ್ಕೆ ಯಾರಾಗಿದ್ರು ಯಾರು ಗೊತ್ತಾ? 

ಇದನ್ನೂ ಓದಿ: ಅತಿದೊಡ್ಡ ಯುದ್ಧದ ಚಿತ್ರೀಕರಣ ಆರಂಭ; 50 ದಿನದ ಶೂಟಿಂಗ್‌ಗಾಗಿ 30 ದಿನ ತಯಾರಿ ನಡೆಸಿದ ಕನ್ನಡದ ನಟ

90ರ ದಶಕದ ಬ್ಯುಸಿ ನಟ
ಡರ್ ಸಿನಿಮಾ ತಂಡ ಚಿತ್ರದ ನೆಗೆಟಿವ್ ರೋಲ್‌ಗಾಗಿ ರಾಹುಲ್ ರಾಯ್ ಅವರನ್ನು ಸಂಪರ್ಕಿಸಿತ್ತು. ಕಪಿಲ್ ಶರ್ಮಾ ಶೋಗೆ ಅತಿಥಿಯಾಗಿ ಆಗಮಿಸಿದ್ದ ವೇಳೆ ರಾಹುಲ್ ರಾಯ್ ಈ ವಿಷಯವನ್ನು ಹಂಚಿಕೊಂಡಿದ್ದರು. ಅಂದು ನಾನು ಕಾರಣಾಂತರಗಳಿಂದ ಡರ್ ಸಿನಿಮಾ ಒಪ್ಪಿಕೊಳ್ಳಲಾಗಲಿಲ್ಲ. ನನಗೆ ಬಂದ ಆಫರ್ ಶಾರೂಖ್ ಖಾನ್ ಬಳಿ ಹೋಯ್ತು. ಸಿನಿಮಾ ಹೇಗೆ ಸಕ್ಸಸ್ ಆಯ್ತು ಎಂಬುವುದು ಎಲ್ಲರ ಮುಂದಿದೆ ಎಂದು ರಾಹುಲ್ ರಾಯ್ ಹೇಳಿದರು. ಇಂದಿಗೂ ಈ ಸಿನಿಮಾದಲ್ಲಿ ನಟನೆ ಮಾಡದಿರೋದಕ್ಕೆ ನನಗೆ ಬೇಸರವಿದೆ ಎಂದು ರಾಹುಲ್ ರಾಯ್ ಹೇಳಿಕೊಂಡಿದ್ದರು. 

YouTube video player

ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ದೂರವಾಗಿರುವ ರಾಹುಲ್ ರಾಯ್, 1990ರ ಆಶಿಕ್ ಸಿನಿಮಾ ಮೂಲಕ ತಮ್ಮ ಕೆರಿಯರ್ ಶುರು ಮಾಡಿದ್ದರು. ರೊಮ್ಯಾಂಟಿಕ್ ಮ್ಯೂಸಿಕಲ್ ಹಿಟ್ ಸಿನಿಮಾ ನೀಡಿದ ರಾಹುಲ್ ರಾಯ್, 11 ದಿನದಲ್ಲಿಯೇ 47 ಸಿನಿಮಾಗಳಿಗೆ ಸಹಿ ಹಾಕಿದ್ದರು. ಡರ್ ಚಿತ್ರದ ನೆಗೆಟಿವ್ ರೋಲ್‌ನಲ್ಲಿ ನಟಿಸಲು ಸಲ್ಮಾನ್ ಖಾನ್, ಆಮೀರ್ ಖಾನ್ ಸಹ ಒಪ್ಪಿರಲಿಲ್ಲ. ಅಂದು ಸೂಪರ್ ಸ್ಟಾರ್ ಆಗಿದ್ದರಿಂದ ಇಬ್ಬರು ಸಿನಿಮಾ ರಿಜೆಕ್ಟ್ ಮಾಡಿದ್ದರು. ಆದ್ರೆ ಈ ಸಿನಿಮಾದಿಂದ ಶಾರೂಖ್ ಖಾನ್ ಹಿಂದಿರುಗಿ ನೋಡಿಲ್ಲ. ಇದೇ ಚಿತ್ರವನ್ನು ಕನ್ನಡದಲ್ಲಿಯೂ ರಿಮೇಕ್ ಮಾಡಲಾಗಿತ್ತು. ಈ ಚಿತ್ರದಲ್ಲಿ ನಾಯಕನಾಗಿ ಶಿವರಾಜ್‌ಕುಮಾರ್ ಮತ್ತು ವಿಲನ್ ಆಗಿ ಉಪೇಂದ್ರ ನಟಿಸಿದ್ದಾರೆ. 

ಇದನ್ನೂ ಓದಿ: ಕನ್ನಡದ ಸೈಕಾಲಜಿಕಲ್ ಥ್ರಿಲ್ಲರ್ ರೊಮ್ಯಾಂಟಿಕ್ ಸಿನಿಮಾ ನೋಡಿ ಹುಚ್ಚರಾಗಿದ್ರು ವೀಕ್ಷಕರು; ಮ್ಯೂಸಿಕಲ್ ಹಿಟ್ ಸಿನಿಮಾ

View post on Instagram