ಈದ್ ಶುಭಾಶಯ ತಿಳಿಸಿದ ಶಾರುಖ್ ಖಾನ್ ಮನ್ನತ್ ಮನೆಯ ಬಾಲ್ಕನಿಯಿಂದ ಫ್ಯಾನ್ಸ್‌ಗೆ ಶುಭಾಶಯ ಪುತ್ರನ ಜೊತೆ ಅಭಿಮಾನಿಗಳತ್ತ ಕೈಬೀಸಿದ ಶಾರುಖ್
ಮುಂಬೈ(ಜು.07): ಈದ್ ಹಬ್ಬ ಆಚರಣೆ ಮುಸ್ಲಿಮ್ ಸಮುದಾಯ ಸಜ್ಜಾಗಿದೆ. ಈ ಶುಭ ಸಂದರ್ಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಮನೆ ಹೊರಗಡೆ ಜಮಾಯಿಸಿದ್ದ ಅಭಿಮಾನಿಗಳಿಗೆ ಈದ್ ಶುಭಾಶಯ ಹೇಳಿದ್ದಾರೆ. ಮನೆಯಿಂದ ಪುತ್ರ ಅಬ್‌ರಾಮ್ ಜೊತೆ ಹೊರಬಂದ ಶಾರುಖ್ ಖಾನ್ ಅಭಿಮಾನಿಗಳ ಕೈಬೀಸಿ ಈದ್ ಶುಭಾಶಯ ಹೇಳಿದರು.
ಮುಂಬೈನ ಮನ್ನತ್ ಮನೆಯ ಬಾಲ್ಕನಿಯಲ್ಲಿ ಶಾರೂಖ್ ಖಾನ್ ಹಾಗೂ ಅಬ್‌ರಾಬ್ ಜೊತೆಯಾಗಿ ಕಾಣಿಸಿಕೊಂಡರು. ಬಳಿಕ ಅಭಿಮಾನಿಗಳತ್ತ ಕೈಬೀಸಿದರು. ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದರು. ಇದೇ ವೇಳೆ ಪುತ್ರ ಅಬ್‌ರಾಮ್ ಜನರತ್ತ ಕೈಬೀಸಿದರು. ಈದ್ ಹಬ್ಬದ ಹಿನ್ನಲೆಯಲ್ಲಿ ಶಾರುಖ್ ಮನೆ ಮನ್ನತ್ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಹೀಗಾಗಿ ಶಾರೂಖ್ ಹಾಗೂ ಪುತ್ರ ಅಭಿಮಾನಿಗಳಿಗೆ ಈದ್ ಶುಭಾಶಯ ತಿಳಿಸಿದ್ದಾರೆ.
ಚೈಯಾ ಚೈಯಾ ಹಾಡಿನಲ್ಲಿ Shahrukhಗೆ ಇರಲಿಲ್ಲ ಅವಕಾಶ; ಮತ್ತೆ ಮಾಡಿದ್ದೇನು?
ಹಿರಿಯ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಳಿಕ ತಮ್ಮ ಮನೆ ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳದ ಶಾರುಖ್ ಖಾನ್ ಇದೀಗ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ಅತ್ತ ಆರ್ಯನ್ ಖಾನ್ ಕೂಡ ಪ್ರಕರಣದಿಂದ ಮುಕ್ತರಾಗಿದ್ದಾರೆ. ಹೀಗಾಗಿ ಈದ್ ಹಬ್ಬ ಶಾರುಖ್ ಕುಟುಂಬಕ್ಕೆ ಹಲವು ರೀತಿಯಲ್ಲಿ ಸಂಭ್ರಮ ತಂದಿದೆ. ಇನ್ನು ಶಾರೂಕ್ ಖಾನ್ ಬಾಲಿವುಡ್‌ನಲ್ಲಿ ಸಕ್ರೀಯರಾಗಿ 30 ವರ್ಷಗಳು ಉರುಳಿದೆ. ಹೀಗಾಗಿ ಈ ಬಾರಿಯ ಈದ್ ಶಾರೂಖ್ ಕುಟುಂಬಕ್ಕೆ ಡಬಲ್ ಸಂಭ್ರಮ ತಂದಿದೆ.
Shahrukh Khan ಹೇಗಾಗಿದ್ದಾರೆ ನೋಡಿ; ಕಿಂಗ್ ಖಾನ್ ಗುರುತೇ ಸಿಗೋಲ್ಲ!
ಆರಂಭದಲ್ಲಿ ಶಾರುಖ್ ಫೌಜಿ’ ಹಾಗೂ ‘ಸರ್ಕಸ್’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. 1992ರಲ್ಲಿ ದಿವ್ಯಾ ಭಾರತಿ ಎದುರು ‘ದೀವಾನಾ’ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಶಾರುಖ್, ‘ನಿನ್ನೆಯೇ ಬಾಲಿವುಡ್ ಸೇರಿದಂತೆ ಎನಿಸುತ್ತಿದೆ. 30 ವರ್ಷಗಳ ಕಾಲ ಹಿಂದಿ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಮುಂಬೈಗೆ ಬಂದಾಗ ಒಂದೆರಡು ವರ್ಷ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಬೇಕು, 5-7 ಚಿತ್ರಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೆ ಎಂದಿದ್ದರು. ‘ನಟನಾಗುವ ಅವಕಾಶ ಸಿಗದಿದ್ದರೆ, ಸಿನಿಮಾದಲ್ಲಿ ಬೆಳಕು ಅಥವಾ ಧ್ವನಿ ವಿಭಾಗದಲ್ಲಿ ಕೆಲಸ ಮಾಡುತ್ತಿದೆ. ನನಗೆ ಸಿನಿಮಾ ಎಂದರೆ ಪಂಚಪ್ರಾಣ, ಸಿನಿಮಾ ನನ್ನನ್ನು ಪ್ರೋತ್ಸಾಹಿಸುತ್ತದೆ. ಸಂತೋಷ ನೀಡುತ್ತದೆ. ಅಭಿಮಾನಿಗಳ ಪ್ರೀತಿ ಕಳೆದ 30 ವರ್ಷದಿಂದ ದಣಿಯದೇ ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಪ್ರೋತ್ಸಾಹಿಸಿದೆ’ ಎಂದಿದ್ದರು.
