ಬಾಲಿವುಡ್‌ ಸ್ಟೈಲ್ ಐಕಾನ್‌ ರಣವೀರ್‌ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಏನಾದರೂ ವಿಭಿನ್ನವಾಗಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಸದಾ ಎಂಗೇಜಾಗಿಟ್ಟುಕೊಂಡಿರುತ್ತಾರೆ. ಆದರೆ ಈ ಬಾರಿ ಅವರ ಒಂದು ವಿಡಿಯೋಗೆ  ನೆಟ್ಟಿಗರಿಂದ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಫೋಟೋ ಬೇಕೆಂದ ಅಭಿಮಾನಿ ಮೇಲೆ ಸಿಟ್ಟಾಗಿ ಬೈದ್ರು ದೀಪಿಕಾ-ರಣವೀರ್..!

ರಣವೀರ್‌ ಸಿಂಗ್ ಕಾರಿನಲ್ಲಿ ತಮ್ಮ ನೆಚ್ಚಿನ ಹಾಡನ್ನು ಕೇಳುತ್ತಾ ಪ್ರಯಾಣಿಸುವಾಗ ಸೆರೆ ಹಿಡಿದ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋಗೆ ಬಂದ ನೆಟ್ಟಿಗರ ಕಾಮೆಂಟ್ ಹಾಗೂ ಟ್ರೋಲ್‌ ನೋಡಿ ಸಿಂಗ್ ಗರಂ ಆಗಿದ್ದಾರೆ.  'ಮ್ಯೂಸಿಕ್ ಆಫ್‌ ಮಾಡು ಜೋಕರ್‌', 'ಜೋಕರ್ ನ್ಯೂ ಲುಕ್‌' ಎಂದು ಕಾಮೆಂಟ್‌ ಮಾಡಿದ್ದಾರೆ.ಅಲ್ಲದೆ ವಿಡಿಯೋ ಫೋಸ್ಟ್‌ ಡಿಲೀಟ್‌ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.

ಆದರೆ ಕೆಲ ಮಾಹಿತಿಗಳ ಪ್ರಕಾರ ಇದು ತುಂಬಾನೇ ಹಳೆ ವಿಡಿಯೋ ಆಗಿದ್ದು ರಣವೀರ್‌ ಬಗ್ಗೆ ಸುದ್ದಿ ಮಾಡಲು ನೆಟ್ಟಿಗರು ಮತ್ತೆ ಹಳೆ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ರಣವೀರ್ ಮಾತ್ರವಲ್ಲದೆ ಲಾಕ್‌ಡೌನ್‌ ದಿನಗಳಲ್ಲಿ ದೀಪಿಕಾ ಪಡುಕೋಣೆ ಕೂಡ ಸೋಷಿಯಲ್‌ ಮೀಡಿಯಾ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದರು. ತಮ್ಮ ಸಿನಿಮಾಗಳ ಬಗ್ಗೆ ಹೊರತುಪಡಿಸಿ ಫೋಟೋ ಶೇರ್ ಮಾಡುತ್ತಿದದ್ದನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದರು.