Asianet Suvarna News Asianet Suvarna News

ಕ್ರಿಶ್, ಕೋಯಿ ಮಿಲ್‌ ಗಯಾ ಚಿತ್ರದ ನಟ ಮಿಥಿಲೇಶ್‌ ಚತುರ್ವೇದಿ ನಿಧನ

ಹೃದಯಘಾತದಿಂದ ಕೊನೆ ಉಸಿರೆಳೆದ ನಟ ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ.

Bollywood actor Mithilesh Chaturvedi passes away due to heart attack vcs
Author
Bangalore, First Published Aug 4, 2022, 1:35 PM IST

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ಹೃದಯಘಾತದಿಂದ ಮುಂಬೈನಲ್ಲಿ ಅಗಲಿದ್ದಾರೆ ಎಂದು ಅವರ ಅಳಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೋಯಿ ಮಿಲ್ ಗಯಾ, ಗದರ್‌ ಎಕ್‌ ಪ್ರೇಮ್‌ ಕಥಾ, ಸತ್ಯ, ಬಂಟಿ ಔರ್‌ ಬಬ್ಲಿ, ಕ್ರಿಶ್, ಅಶೋಕ್, ಫಿಜಾ, ರೆಡಿ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಮಿಥಿಲೇಶ್ ಅಭಿನಯಿಸಿದ್ದಾರೆ. ಜುಲೈ 3ರಂದು ಅಗಲಿದ್ದು ಇಂದು ಅಂತ್ಯಕ್ರಿಯೆ ನಡೆಯಲಿದೆ.

ಮಿಥಿಲೇಶ್ ಅಳಿಯಾ ಆಶಿಶ್ ಫೇಸ್‌ಬುಕ್‌ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡು 'ಈ ಪ್ರಪಂಚದಲ್ಲಿ ನೀವು ದಿ ಬೆಸ್ಟ್‌ ತಂದೆಯಾಗಿದ್ದವರು. ನೀವು ನನಗೆ ತುಂಬಾ ಪ್ರೀತಿ ತೋರಿಸಿದ್ದೀರಿ, ತಂದೆಯಾಗಲ್ಲ ಬದಲಿಗೆ ಮಗನಾಗಿದೆ.ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುವೆ' ಎಂದು ಬರೆದುಕೊಂಡಿದ್ದಾರೆ. 

ಮಿಥಿಲೇಶ್ ಚತುರ್ವೇದಿ ಜೊತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಿಲ್ ರಸ್ತೂಗಿ ಹಲವು ವರ್ಷಗಳಿಂದ ಸ್ನೇಹಿತರು. ಲಕ್ನೋದಲ್ಲಿ ದರ್ಪಣ್ ಥಿಯೇಟರ್ ಗ್ರೂಪ್‌ನಲ್ಲೂ ಸಾವಿನ ವಿಚಾರ ಹರಿದಾಡುತ್ತಿತ್ತು. 'ಕಳೆದು ಎರಡು ದಿನಗಳಿಂದ ಮಿಥಿಲೇಶ್‌ ಆಸ್ಪತ್ರೆಯಲ್ಲಿದ್ದರು. ಹೃದಯಘಾತ ಚಿಕಿತ್ಸೆ ಪಡೆಯುತ್ತಿದ್ದರು' ಎಂದು ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Bollywood actor Mithilesh Chaturvedi passes away due to heart attack vcs

1997ರಲ್ಲಿ ಭಾಯಿ ಭಾಯ್ ಸಿನಿಮಾ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಮಿಥಿಲೇಶ್ ಅವರು ತಾಲ್ (1999), ಫಿಜಾ (2000), ಅಕ್ಸ್ (2001), ಕಿಸ್ನಾ: ದಿ ವಾರಿಯರ್ ಪೊಯೆಟ್ ಮತ್ತು ಬಂಟಿ ಔರ್ ಬಬ್ಲಿ (2005) ಇತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಥಿಲೇಶ್‌ ಅವರ ಕಯಾಮತ್ ಮತ್ತು ಸಿಂದೂರ್ ತೇರೆ ನಾಮ್ ಕಾ ಎಂಬ ದೂರದರ್ಶನ ಸರಣಿಯ ಭಾಗವಾಗಿದ್ದರು. 1992ರಲ್ಲಿ ಸ್ಕ್ಯಾಮ್‌ ಹೆಸರಿನ ವೆಬ್ ಸೀರಿಸ್‌ನಲ್ಲಿ ಅಭಿನಯಿಸಿದ್ದರು.

ಚಿಯಾನ್ ವಿಕ್ರಮ್ ಈಸ್ ಬ್ಯಾಕ್; 'ಕೋಬ್ರಾ' ಈವೆಂಟ್‌ನಲ್ಲಿ ಭಾಗಿಯಾದ ಸ್ಟಾರ್ ನಟ ಹೇಳಿದ್ದೇನು?

'ಪ್ರತಿಷ್ಠಿತ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ಹೃದಯಘಾತದಿಂದ ಅಗಲಿರುವ ವಿಚಾರ ಕೇಳಿ ಬೇಸರವಾಗಿದೆ. ಆವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರು ಈ ನೋವನ್ನು ಮರೆಯುವ ಶಕ್ತಿ ಕೊಡಲಿ ಭಗವಂತ' ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. 

Follow Us:
Download App:
  • android
  • ios