ನಟಿ ಶ್ರೀಲೀಲಾ ಹಾಗೂ ಕಾರ್ತಿಕ್‌ ಆರ್ಯನ್‌ ಅವರು ಪ್ರೀತಿಸ್ತಿದ್ದಾರಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಕಾರ್ತಿಕ್‌ ಆರ್ಯನ್‌ ಅವರು ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು, ʼನೀನೇ ನನ್ನ ಜೀವನʼ ಎಂದು ಹೇಳಿದ್ದಾರೆ. 

ʼಕಿಸ್ʼ‌ ಸಿನಿಮಾ ನಟಿ ಶ್ರೀಲೀಲಾ ಹಾಗೂ ನಟ ಕಾರ್ತಿಕ್‌ ಆರ್ಯನ್‌ ಅವರು ಪ್ರೀತಿ ಮಾಡುತ್ತಿದ್ದಾರಾ ಎಂಬ ಗಾಸಿಪ್‌ ಕೆಲ ದಿನಗಳಿಂದ ಹರಡುತ್ತಿದೆ. ಈ ಬಗ್ಗೆ ಇವರಿಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಕಾರ್ತಿಕ್‌ ಆರ್ಯನ್‌ ಅವರು ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು, “ನೀನೇ ನನ್ನ ಜೀವನ” ಎಂದು ಕ್ಯಾಪ್ಶನ್‌ ನೀಡಿದ್ದಾರೆ. 

ಇನ್ನೂ ಹೆಸರಿಟ್ಟಿಲ್ಲ! 
ಕಾರ್ತಿಕ್‌ ಆರ್ಯನ್‌ ಹಾಗೂ ಶ್ರೀಲೀಲಾ ಅವರು ಅನುರಾಗ್‌ ಬಸು ನಿರ್ದೇಶನದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪಕ್ಕಾ ಲವ್‌ಸ್ಟೋರಿ ಕಥೆ ಇರಲಿದೆಯಂತೆ. ಕೆಲವರು ಇದು ʼಆಶಿಕಿ 3ʼ ಆಗಬಹುದು ಎಂದು ಹೇಳುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಹೆಸರು ಇಟ್ಟಿಲ್ಲ. 

ನೆಟ್ಟಿಗರು ಹೇಳಿದ್ದೇನು?
ಕಾರ್ತಿಕ್‌ ಆರ್ಯನ್‌ ಅವರು ಸಿನಿಮಾ ಶೂಟ್‌ವೊಂದರ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವಾಗಲೇ ಅನೇಕರು “ನಾವು ಈ ಲವ್‌ಸ್ಟೋರಿಗೋಸ್ಕರ ಕಾಯುತ್ತಿದ್ದೇವೆ. ಇದೊಂದು ಬ್ಲಾಕ್‌ಬಸ್ಟರ್‌ ಆಗಲಿದೆ” ಎಂದು ಹೇಳಿದ್ದಾರೆ. ಸದ್ಯ ಡಾರ್ಜೆಲಿಂಗ್‌ನಲ್ಲಿ ಈ ಸಿನಿಮಾ ಶೂಟಿಂಗ್‌ ನಡೆಯುತ್ತಿದೆ. 

ಕಾರ್ತಿಕ್‌ ಆರ್ಯನ್‌ ಮನೆ ಗಣಪತಿ ಪೂಜೆಗೆ ದೊಡ್ಡ ಬಿಂದಿ ಇಟ್ಟು ಹೋದ ಸಾರಾ ಆಲಿ ಖಾನ್‌; ಮಾಜಿ ಪ್ರೇಮಿಗಳು ಒಂದಾದ್ರಾ?

ಪಾರ್ಟಿ ಮಾಡಿದ್ದ ಕಾರ್ತಿಕ್‌, ಶ್ರೀಲೀಲಾ! 
ಕಾರ್ತಿಕ್‌ ಆರ್ಯನ್‌ ಅವರ ಸಹೋದರಿ ಕೃತಿಕಾ ಮೆಡಿಕಲ್‌ ಫೀಲ್ಡ್‌ನಲ್ಲಿ ಸಾಧನೆ ಮಾಡಿದಳು ಎಂದು ತಿಂಗಳ ಹಿಂದೆ ಅವರ ಮನೆಯಲ್ಲಿ ಖಾಸಗಿಯಾಗಿ ಪಾರ್ಟಿ ಮಾಡಲಾಗಿತ್ತು. ಅಲ್ಲಿ ಶ್ರೀಲೀಲಾ ಡ್ಯಾನ್ಸ್‌ ಮಾಡಿದ್ದರು. ಶ್ರೀಲೀಲಾ ಸೇರಿದಂತೆ ಕೆಲವರು ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವನ್ನು ಸ್ವತಃ ಕಾರ್ತಿಕ್‌ ಆರ್ಯನ್‌ ವಿಡಿಯೋ ಮಾಡುತ್ತಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇವರಿಬ್ಬರಯ ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಲಿರೋದರಿಂದ ಪಾರ್ಟಿಗೆ ಬಂದಿರಬಹುದು ಎಂದು ಹೇಳಲಾಗಿದೆ. ಆದರೆ ಅನೇಕರು ಮಾತ್ರ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಧಾರಾವಾಹಿ, ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಕೂಡಲೇ ರಿಯಲ್‌ ಆಗಿ ಲವ್‌ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಏಳುವುದು. ಹಾಗೆ ಇಲ್ಲಿಯೂ ಕೂಡ ಇದೇ ರೀತಿ ಪ್ರಶ್ನೆ ಎದ್ದಿರಬಹುದು. 

ಹೃತಿಕ್‌ ರೋಷನ್‌ ಕಸಿನ್‌ ಜೊತೆ ಸಂಬಂಧದ ಬಗ್ಗೆ ಬಾಯಿಬಿಟ್ಟ ಕಾರ್ತಿಕ್‌ ಆರ್ಯನ್‌

ಲವ್‌ ಲೈಫ್‌ ಬಗ್ಗೆ ಏನು ಹೇಳಿದ್ರು?

ಕಾರ್ತಿಕ್‌ ಆರ್ಯನ್‌ ಅವರು ಸಾರಾ ಅಲಿ ಖಾನ್‌, ಅನನ್ಯಾ ಪಾಂಡೆ ಜೊತೆಗೆ ಲವ್‌ನಲ್ಲಿದ್ದರು ಎನ್ನಲಾಗಿತ್ತು. ಇವರಿಬ್ಬರು ಅಧಿಕೃತವಾಗಿ ಮಾತ್ರ ಪ್ರೀತಿ ವಿಷಯ ಹೇಳಿಕೊಂಡಿರಲಿಲ್ಲ. ಆದರೆ ಕಾರ್ತಿಕ್‌ ಅವರು ಬ್ರೇಕಪ್‌ ಬಗ್ಗೆ ಮಾತನಾಡಿದ್ದರು. ವರ್ಷಗಳ ಹಿಂದೆ ಲವ್‌ ಲೈಫ್‌ ಬಗ್ಗೆ ಮಾತನಾಡಿದ್ದ ಕಾರ್ತಿಕ್‌ ಅವರು, “ಕೆಲಸದ ಸಲುವಾಗಿ ನಾವು ಸುಮಾರು ಜನರನ್ನು ಭೇಟಿ ಮಾಡುತ್ತೀರಿ. ಹೀಗೆ ದಿನ ಕಳೆಯುತ್ತದೆ. ನಾವು ಸಾಕಷ್ಟು ದುಡಿದು, ಹೆಸರು ಗಳಿಸಬಹುದು. ಆದರೆ ಪ್ರೀತಿಯನ್ನು ಖರೀದಿಸಲು ಸಾಧ್ಯವಿಲ್ಲ. ನಾನೀಗ ಯಾರನ್ನೂ ಡೇಟ್‌ ಮಾಡುತ್ತಿಲ್ಲ. ನಾನು ಸಿನಿಮಾದಲ್ಲಿ ರೊಮ್ಯಾಂಟಿಕ್‌ ಹೀರೋ ಆಗಬಹುದು. ಆದರೆ ರಿಯಲ್‌ ಆಗಿ ಲವ್‌ ವಿಚಾರದಲ್ಲಿ ದುರಾದೃಷ್ಟವಂತ. ಟೈಮ್ ಬಂದಾಗ ಸರಿಯಾದ ಸಂಗಾತಿ ಹುಡುಕಿಕೊಳ್ತೀನಿ” ಎಂದು ಹೇಳಿದ್ದಾರೆ. 


ಸಿನಿಮಾಗಳಲ್ಲಿ ನಟನೆ!
ʼಕಿಸ್ʼ‌ ಸಿನಿಮಾ ನಂತರದಲ್ಲಿ ಬೇರೆ ಭಾಷೆಯತ್ತ ಮುಖ ಮಾಡಿದ ಶ್ರೀಲೀಲಾ ಈಗ ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೇರೆ ಭಾಷೆಯ ಸ್ಟಾರ್‌ ನಟರ ಜೊತೆ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಐಟಮ್‌ ಸಾಂಗ್‌ ಕೂಡ ಮಾಡುತ್ತಿದ್ದಾರೆ. ಹೆಜ್ಜೆ ಇಟ್ಟಿರುವ ಶ್ರೀಲೀಲಾ ಈಗ ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್‌ ನಟನೆಯ ʼಪುಷ್ಪ 2ʼ ಸಿನಿಮಾದಲ್ಲಿ ವಿಶೇಷ ಹಾಡಿಗೆ ಅವರು ಡ್ಯಾನ್ಸ್‌ ಮಾಡಿದ್ದರು. ಈಗ ಶ್ರೀಲೀಲಾ ಅವರು 3 ತೆಲುಗು ಸಿನಿಮಾ, 1 ಹಿಂದಿ, 1 ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.