ಬಾಲಿವುಡ್ ನಟ ಹೃತಿಕ್ ರೋಷನ್ ಅಜ್ಜಿ ನಿಧನ
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಅಜ್ಜಿ ನಿಧನರಾಗಿದ್ದಾರೆ. ಹೃತಿಕ್ ರೋಷನ್ ಅವರ ತಾಯಿಯ ತಾಯಿ ಆಗಿರುವ ಪದ್ಮ ರಾಣಿ ಓಂ ಪ್ರಕಾಶ್ ಅವರು ಮುಂಬೈನ ನಿವಾಸದಲ್ಲಿ ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು.
ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಅಜ್ಜಿ ನಿಧನರಾಗಿದ್ದಾರೆ. ಹೃತಿಕ್ ರೋಷನ್ ಅವರ ತಾಯಿಯ ತಾಯಿ ಆಗಿರುವ ಪದ್ಮ ರಾಣಿ ಓಂ ಪ್ರಕಾಶ್ ಅವರು ಮುಂಬೈನ ನಿವಾಸದಲ್ಲಿ ನಿಧನರಾಗಿದ್ದು, ಅವರಿಗೆ 91 ವರ್ಷ ವಯಸ್ಸಾಗಿತ್ತು. ಹೃತಿಕ್ ತಂದೆ ರಾಕೇಶ್ ರೋಷನ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಪದ್ಮ ರಾಣಿ ಓಂ ಪ್ರಕಾಶ್ ಅವರು ಸಿನಿಮಾ ನಿರ್ಮಾಪಕ ದಿವಂಗತ ಓಂ ಪ್ರಕಾಶ್ ಜಾ ಅವರ ಪತ್ನಿಯಾಗಿದ್ದರು.
ನಟ ಹೃತಿಕ್ ರೋಷನ್ (Hrithik Roshan) ಅವರ ತಾಯಿಯ ತಾಯಿ ಆಗಿರುವ ಪದ್ಮಾ ರಾಣಿ ಓಂಪ್ರಕಾಶ್ (Padma Rani Omprakash) ಗುರುವಾರ ಸಂಜೆ (ಜೂನ್ 16) ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸಿಗೆ ಹಿಡಿದಿದ್ದರು ಎಂದು ವರದಿಯಾಗಿದೆ. ಗುರುವಾರ ಸಂಜೆಯಿಂದಲೇ ಆಕೆಯ ಸಾವಿನ ಕುರಿತಾದ ವರದಿಗಳು ಹರಿದಾಡಲಾರಂಭಿಸಿದವು. ಈ ಬಗ್ಗೆ ಪದ್ಮಾ ರಾಣಿ ಓಂಪ್ರಕಾಶ್ ಅವರ ಅಳಿಯನೂ ಆಗಿರುವ ಚಲನಚಿತ್ರ ನಿರ್ಮಾಪಕ ರಾಕೇಶ್ ರೋಷನ್ (Rakesh Roshan) ಅವರನ್ನು ಸಂಪರ್ಕಿಸಿದಾಗ ಅವರು ಈ ವಿಚಾರವನ್ನು ಖಚಿತಪಡಿಸಿದರು. ದುರದೃಷ್ಟವಶಾತ್ ಸುದ್ದಿ ನಿಜ. ಓಂ ಶಾಂತಿ ಎಂದು ಅವರು ಹೇಳಿದರು ಎಂದು ರೋಷನ್ ಹೇಳಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಹಾಟ್ ಸಹೋದರಿ ಪಶ್ಮಿನಾ ಫೋಟೋ ರಿವೀಲ್ ಮಾಡಿದ ಹೃತಿಕ ರೋಷನ್!
ವರದಿಗಳ ಪ್ರಕಾರ ಆಕೆಯ ಸಾವಿಗೆ ವಯೋ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾರಣ ಎಂದು ತಿಳಿದು ಬಂದಿದೆ. ಪದ್ಮಾ ಅವರು ಹೃತಿಕ್ ಅವರ ತಾಯಿ ಪಿಂಕಿ ರೋಷನ್ (Pinky Roshan) ಅವರ ತಂದೆಯಾಗಿದ್ದ ಚಲನಚಿತ್ರ ನಿರ್ಮಾಪಕ ಜೆ ಓಂ ಪ್ರಕಾಶ್ (J Om Prakash) ಅವರ ಪತ್ನಿ. ಪದ್ಮಾ ಕಳೆದ ಎರಡು ವರ್ಷಗಳಿಂದ ರೋಷನ್ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆಕೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹಾಸಿಗೆ ಹಿಡಿದಿದ್ದ ಪದ್ಮಾ ಅವರೊಂದಿಗೆ ಪಿಂಕಿ ಅವರು ಸದಾಕಾಲ ಫೋಟೋಗಳನ್ನು ತೆಗೆಸಿಕೊಂಡು ಶೇರ್ ಮಾಡುತ್ತಿದ್ದರು.
Hrithik Roshan ಹಂಚಿ ಕೊಂಡ ಹಾಟ್ ಬೆಡಗಿಯ ಫೋಟೋ ಯಾರದ್ದು
ಜೆ ಓಂಪ್ರಕಾಶ್ ಅವರು 1974 ರಲ್ಲಿ ರಾಜೇಶ್ ಖನ್ನಾ ಅವರ ಆಪ್ ಕಿ ಕಸಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಪ್ನಾ ಬನಾ ಲೋ (1982), ಅಪ್ನಾಪನ್ (1977), ಆಶಾ (1980), ಅರ್ಪಣ್ (1983) ಮತ್ತು ಆದ್ಮಿ ಖಿಲೋನಾ ಹೈ (1993) ಮುಂತಾದ ಸಿನಿಮಾಗಳಲ್ಲಿ ಬಾಲಿವುಡ್ ಖ್ಯಾತ ನಟ ಜೀತೇಂದ್ರ ಅವರೊಂದಿಗೆ ಕೆಲಸ ಮಾಡಿದ್ದಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದರು. ಅವರು ಆಯೀ ಮಿಲನ್ ಕಿ ಬೇಲಾ (1964), ಆಸ್ ಕಾ ಪಂಚಿ (1961), ಆಯೇ ದಿನ್ ಬಹರ್ ಕೆ (1966), ಆಂಖೋನ್ ಆಂಖೋನ್ ಮೇ ಮತ್ತು ಆಯಾ ಸಾವನ್ ಜೂಮ್ ಕೆ (1969) ನಂತಹ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದರು. ಅವರು ಆಗಸ್ಟ್ 07, 2019 ರಂದು ನಿಧನರಾಗಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.