ಅದೊಂದು ದಿನ ನನ್ನನ್ನು ಬೆನ್ನುಮೂಳೆಯ ಸಮಸ್ಯೆ ಕಾರಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೋಕ್ಷಿಸಿದ ವೈದ್ಯರು 'ಈತ ನಟನಾಗುವುದು ಸಾಧ್ಯವೇ ಇಲ್ಲ. ಅದಿರಲಿ, ಆತನಿಗೆ ಡಾನ್ಸ್‌ ಮಾಡಲು ಸಹ ಅಸಾಧ್ಯ' ಎಂದಿದ್ದರು. 

ಬಾಲಿವುಡ್ ದೊಡ್ಡ ನಿರ್ಮಾಪಕರೊಬ್ಬರ ಮಗ. ಹುಟ್ಟು ಆಗರ್ಭ ಶ್ರೀಮಂತ, ಮನೆಯೇ ಸಿನಿಮಾ ನಿರ್ಮಾಣ ಸಂಸ್ಥೆ. ಆತ ಆಗಷ್ಟೇ ಸ್ಕೂಲಿಗೆ ಹೋಗುತ್ತಿದ್ದ ಹುಡುಗ. ಆದರೆ 'ಆತ ನಟನಾಗುವುದು ಹಾಗಿರಲಿ, ಡಾನ್ಸ್ ಮಾಡುವುದು ಕೂಡ ಅಸಾಧ್ಯ' ಎಂದು ಸ್ವತಃ ವೈದ್ಯರೇ ತಿಳಿಸಿದ್ದರು. ಆ ವಿಷಯ ಸ್ವತಃ ಸ್ಕೂಲ್ ಬಾಯ್‌ ಮಗುವಿಗೆ ತಿಳಿದಿತ್ತು ಮತ್ತು ಅದಕ್ಕಾಗಿ ಆತ ತುಂಬಾ ದುಃಖ ಪಡುತ್ತಿದ್ದ. ಮನಸು-ಕನಸು ಎಲ್ಲಾ ಕಡೆ ತಾನು ನಟನಾಗಬೇಕೆಂದು ಹಂಬಲಿಸಿದ್ದ ಆ ಕಗುವಿಗೆ ಈ ಸಂಗತಿ ದಿನಾ ಅಳುವಂತೆ ಮಾಡಿತ್ತು. ಈ ಬಗ್ಗೆ ಆ ನಟ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

'ಬಾಲಿವುಡ್ (Bollywood)ನಿರ್ಮಾಪಕರ ಮಗನಾದ ನಾನು ಸ್ಕೂಲಿಗೆ ಹೋಗುತ್ತಿದ್ದ. ಡೊಳ್ಳು-ಹೊಟ್ಟೆ, ಗೂನು ಬೆನ್ನಿನ ನಾನು ಅಷ್ಟು ಸಾಲದು ಎಂಬಂತೆ ಮಾತಾಡಲು ಸಮಸ್ಯೆ ಎದುರಿಸುತ್ತಿದ್ದೆ. ತೊದಲುವಿಕೆ ಅದೆಷ್ಟು ಇತ್ತು ಎಂದರೆ ಒಂದು ವಾಕ್ಯವನ್ನು ಹೇಳಲೂ ನಾನು ತುಂಬಾ ಕಷ್ಟಪಡುತ್ತಿದ್ದೆ.

ಸ್ಕೂಲಿನಲ್ಲಿ ನನಗೆ ಸ್ನೇಹಿತರಾಗಲೀ ಗರ್ಲ್‌ ಫ್ರೆಂಡ್ಸ್ ಇರಲಿಲ್ಲ. ಇಷ್ಟವಿಲ್ಲದೇ ಸ್ಕೂಲಿಗೆ ಹೋಗುತ್ತಿದ್ದ ನಾನು ಸ್ಕೂಲಿನಲ್ಲಿ ಏಕಾಂಗಿಯಾಗಿಯೇ ಕಳೆಯುತ್ತಿದ್ದೆ. ಮನೆಗೆ ಮರಳಿದ ತಕ್ಷಣ ಅಳುತ್ತಿದ್ದೆ. ನಾನು ನನ್ನ ಬಾಲ್ಯ ಹಾಗು ಸ್ಕೂಲ್ ಡೇಸ್‌ನಲ್ಲಿ ಅಳದೇ ಕಳೆದ ದಿನಗಳೇ ಇಲ್ಲವೆನ್ನಬಹುದು. 

ಹೆಂಡತಿ-ಮಗನ ಮುಂದೆ ಯಾಕೆ 'ಭಯ'ದ ಬಗ್ಗೆ ಮಾತನಾಡಿದ್ರು ನಟ ವಿಜಯ್ ಸೇತುಪತಿ?

ಅದೊಂದು ದಿನ ನನ್ನನ್ನು ಬೆನ್ನುಮೂಳೆಯ ಸಮಸ್ಯೆ ಕಾರಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೋಕ್ಷಿಸಿದ ವೈದ್ಯರು 'ಈತ ನಟನಾಗುವುದು ಸಾಧ್ಯವೇ ಇಲ್ಲ. ಅದಿರಲಿ, ಆತನಿಗೆ ಡಾನ್ಸ್‌ ಮಾಡಲು ಸಹ ಅಸಾಧ್ಯ' ಎಂದಿದ್ದರು. ನನಗೆ ಆಕಾಶವೇ ತಲೆಮೇಲೆ ಕಳಚಿ ಬಿದ್ದಹಾಗೆ ಆಗಿತ್ತು.

ನಟನಾಗದ ನನ್ನ ಬದುಕನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿರಲಿಲ್ಲ. ಆದರೆ, ಆಗುವುದಿಲ್ಲ ಎಂದರೆ ನಾನೇನು ಮಾಡಲು ಸಾಧ್ಯ ಎಂಬುದು ಅಂದು ನನಗೆ ಗೊತ್ತಿರಲಿಲ್ಲ. ಆದರೆ, ನಾನು ಬೇರೆ ಹುಡುಗರ ತರಹ ಅಲ್ಲ, ನನಗೆ ತುಂಬಾ ಸಮಸ್ಯೆಗಳು ಇವೆ ಎಂಬುದು ನನಗೆ ಗೊತ್ತಾಗಿತ್ತು' ಎಂದಿದ್ದಾರೆ ನಟ ಹೃತಿಕ್ ರೋಶನ್ (Hrithik Roshan). 

ಭಾರತಿಗಿಂತ ಮೊದಲು ನಟ ವಿಷ್ಣುವರ್ಧನ್ ಬಾಳಲ್ಲಿ ಆ ಹುಡುಗಿ ಬಂದಿದ್ದರು; ಆದ್ರೆ ಯಾಕೆ ಮದುವೆಯಾಗಲಿಲ್ಲ?

ಸ್ಕೂಲ್ ಬಾಯ್ ಆಗಿದ್ದಾಗ ಅಷ್ಟೆಲ್ಲಾ ಸಮಸ್ಯೆ ಹೊಂದಿದ್ದ ಹುಡುಗ ಬೇರಾರೂ ಅಲ್ಲ, ಇಂದು ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದ ನಟ ಹೃತಿಕ್ ರೋಶನ್. ಅಪ್ಪ ರಾಕೇಶ್ ರೋಶನ್ ಆಗ ಬಾಲಿವುಡ್‌ನ ದೊಡ್ಡ ನಿರ್ಮಾಪಕ. ಆದರೆ ಮಗ ಹೃತಿಕ್ ರೋಶನ್ ಸಾಕಷ್ಟು ಸಮಸ್ಯೆ ಹೊಂದಿದ್ದ ಹುಡುಗನಾಗಿದ್ದ. ಬೆಳೆಯುತ್ತ ಹೋದಂತೆಲ್ಲ ಆತನಿಗಿದ್ದ ಒಂದೊಂದೇ ಸಮಸ್ಯೆಗಳು ಪರಿಹಾರವಾಗುತ್ತ ಹೋಯ್ತು. ಇಂದು ಆತ ಭಾರತ ಹಾಗು ಜಗತ್ತು ಕಂಡ ಅತ್ಯುತ್ತಮ ಡಾನ್ಸರ್‌ ಮತ್ತು ಆಕ್ಟರ್‌ಗಳಲ್ಲಿ ಒಬ್ಬರು. ನಟ ಹೃತಿಕ್ ರೋಶನ್ ಇಂದು 3000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. 

ಮಹೇಶ್ ಬಾಬು ಮಗಳು ಸಿತಾರಾ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಶಾಕ್ ಆಗಿ ಗಲಿಬಿಲಿಗೊಂಡ್ರಾ?