Asianet Suvarna News Asianet Suvarna News

ಪ್ರಭಾಸ್​ಗೆ ಜೋಕರ್​ ಎಂದ ಬಾಲಿವುಡ್​ ನಟ ಅರ್ಷದ್​ ವಾರ್ಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಟಾಲಿವುಡ್!

ತೆಲುಗು ನಟ ಪ್ರಭಾಸ್ ಪ್ಯಾನ್ ಇಂಡಿಯಾ ನಟ ಅನ್ನೋದು ಬಹುತೇಕರಿಗೆ ಗೊತ್ತು. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿರುವ 'ಕಲ್ಕಿ' ಚಿತ್ರದ ಮೂಲಕ ನಟ ಪ್ರಭಾಸ್ ಮತ್ತೊಂದು ಹಂತಕ್ಕೆ ಮೇಲೇರಿದ್ದಾರೆ. ಅದಕ್ಕೂ ಮೊದಲು ಪ್ರಶಾಂತ್ ನೀಲ್..

Bollywood actor arshad warsi comment on darling prabhas kalki movi role srb
Author
First Published Aug 26, 2024, 5:05 PM IST | Last Updated Aug 26, 2024, 6:42 PM IST

ತೆಲುಗು ನಟ ಪ್ರಭಾಸ್ (Darling Prabhas) ಪ್ಯಾನ್ ಇಂಡಿಯಾ ನಟ ಅನ್ನೋದು ಬಹುತೇಕರಿಗೆ ಗೊತ್ತು. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ದಾಖಲಿಸಿರುವ 'ಕಲ್ಕಿ' ಚಿತ್ರದ ಮೂಲಕ ನಟ ಪ್ರಭಾಸ್ ಮತ್ತೊಂದು ಹಂತಕ್ಕೆ ಮೇಲೇರಿದ್ದಾರೆ. ಅದಕ್ಕೂ ಮೊದಲು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಇತ್ತೀಚೆಗೆ ಕಲ್ಕಿ ಗೆಲ್ಲುವ ಡಾರ್ಲಿಂಗ್ ಪ್ರಭಾಸ್ ಟಾಕ್ ಆಫ್ ದಿ ನೇಶನ್ ಆಗಿದ್ದಾರೆ. 

ಆದರೆ, ಇಂಥ ನಟ ಪ್ರಭಾಸ್‌ಗೆ ಇನ್ನೊಬ್ಬರು ನಟ ಟೀಕೆ ಮಾಡುವ ಮೂಲಕ ಸುದ್ದಿ ಆಗಿದ್ದಾರೆ. ಹೌದು, ಬಾಲಿವುಡ್ ನಟರೊಬ್ಬರು ಪ್ರಭಾಸ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ನಟ ಪ್ರಭಾಸ್​ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ಬಾಲಿವುಡ್​ ನಟ ಅರ್ಷದ್​ ವಾರ್ಸಿ ಮಾತನಾಡಿದ್ದಾರೆ. 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಪ್ರಭಾಸ್​ 'ಜೋಕರ್'​ ರೀತಿ ಕಾಣುತ್ತಾರೆ ಎಂದು ಅರ್ಷದ್​ ವಾರ್ಸಿ ಹೇಳಿದ್ದಾರೆ. ಇದೀಗ ಈ ವಿವಾದ ಎಬ್ಬಿಸಿದೆ. 

ರಾಕಿಂಗ್ ಸ್ಟಾರ್ ಜತೆಯಾದ ಹಾಲಿವುಡ್ ಹೀರೋ, ಟಾಕ್ಸಿಕ್‌ಗೆ ಬ್ರಿಟಿಷ್ ಸೂಪರ್ ಸ್ಟಾರ್ ಎಂಟ್ರಿ!

ಈ ಬಗ್ಗೆ ವಿವಾದ ಭುಗಿಲೆದ್ದಿದ್ದು, ತೆಲುಗು ಸಿನಿಮಾ ಕಲಾವಿದರ ಸಂಘ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಆ ಬಾಲಿವುಡ್ ನಟ ಅರ್ಷದ್​ ವಾರ್ಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಸೌತ್ ನಟರೊಬ್ಬರ ಬಗ್ಗೆ ಬಾಲಿವುಡ್‌ ಕಲಾವಿದರೊಬ್ಬರು ಟೀಕೆ ಮಾಡುವ ಮೂಲಕ ಒಂದಾಗಿ ಒಗ್ಗಟ್ಟಾಗಿ ಇರುವ ಭಾರತೀಯ ಚಿತ್ರರಂಗವನ್ನು ಒಡೆಯುವ ಹುನ್ನಾರ ಇದಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಟಾಲಿವುಡ್ ಚಿತ್ರರಂಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ನಟ ಪ್ರಭಾಸ್ ಅವರು ತೆಲುಗಿನ 'ವರ್ಷಂ' ಚಿತ್ರದ ಮೂಲಕ ಸಿನಿ ಕೆರಿಯರ್ ಪ್ರಾರಂಭಿಸಿದ್ದು, ಬಳಿಕ ಎಸ್‌ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಟನ ಪ್ರಭಾಸ್ ಅವರಿಗೆ ಅಲ್ಲಿನ ಪ್ರೇಕ್ಷಕರು ಅಷ್ಟೇನೂ ಎನ್‌ಕರೇಜ್ ಮಾಡಲಿಲ್ಲ. ಆದರೆ, ತೆಲುಗು ಚಿತ್ರದ ಮೂಲಕ ಮತ್ತೆ ಪ್ರಭಾಸ್ ಭಾರತವನ್ನೂ ಮೀರಿ ಬೆಳೆಯುತ್ತಿದ್ದಾರೆ ಎನ್ನಬಹುದು.

ಪ್ರಶ್ನೆಗೆ ಸುಧಾರಾಣಿ ಉತ್ತರ; ಸ್ವಲ್ಪ ತಲೆ ಎತ್ತಿದ್ರೆ ಸಾಕು, ನಮ್ಮಮ್ಮ ಮತ್ತೆ ತಲೆ ಎತ್ತೋಕೇ ಬಿಡ್ತಿರ್ಲಿಲ್ಲ! 

ಒಟ್ಟಿನಲ್ಲಿ, ಸೌತ್ ನಟರೊಬ್ಬರ ಬಗ್ಗೆ ಬಾಲಿವುಡ್‌ ನಟರೊಬ್ಬರ ಟೀಕೆ ಬಗ್ಗೆ ಸೃಷ್ಟಿಯಾಗಿರುವ ಆಕ್ರೋಶ ಮುಂದೆ ಯಾವ ಹಂತಕ್ಕೆ ಹೋಗಿ ತಲುಪಲಿದೆ ಎಂಬುದನ್ನು ಕಾಲವೇ ನಿರ್ಧರಿಸಿಬೇಕಿದೆ. ಸದ್ಯ ಪ್ರಭಾಸ್ ಈ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡದೇ ಮೌನ ವಹಿಸಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ!

Latest Videos
Follow Us:
Download App:
  • android
  • ios