The Kashmir Files ಪ್ರತಿಯೊಬ್ಬ ಭಾರತೀಯನು ನೋಡಬೇಕಾದ ಸಿನಿಮಾ; ಆಮೀರ್ ಖಾನ್

ಭಾರತದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ನಟ ಆಮೀರ್ ಖಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಖಂಡಿತ ನೋಡುವುದಾಗಿ ಆಮೀರ್ ಖಾನ್ ಹೇಳಿದ್ದಾರೆ. 

Bollywood Actor Aamir Khan reacts to Vivek Agnihotris The Kashmir Files

ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಜೊತೆಗೆ ಒಂದಿಷ್ಟು ವಿವಾದ ಕೂಡ ಹುಟ್ಟಿಕೊಂಡಿದೆ. ಈಗಾಗಲೇ 100 ಕೋಟಿ ಕ್ಲಬ್ ದಾಟಿ ಮುನ್ನುಗ್ಗುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ((Vivek Agnihotri) ಸಾರಥ್ಯದಲ್ಲಿ ಬಂದ ಈ ಚಿತ್ರಕ್ಕೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಸಿನಿಮಾ ಬಿಡುಗಡೆಯಾಗಿ ವಾರ ಕಳೆದರು ಜನರು ಆಸಕ್ತಿಯಿಂದ ಸಿನಿಮಾ ವೀಕ್ಷಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಅನೇಕರು ಹಾಡಿಹೊಗಳುತ್ತಿದ್ದಾರೆ. ಎಂತಹ ಸಿನಿಮಾ ನೀಡಿದ್ದೀರಿ ಎಂದು ಅಗ್ನಿಹೋತ್ರಿಗೆ ಗಣ್ಯಾತಿಗಣ್ಯರು ಶಹಭಾಷ್ ಗಿರಿ ನೀಡುತ್ತಿದ್ದಾರೆ.

ಇದೀಗ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್(Aamir Khan) ಪ್ರತಿಕ್ರಿಯೆ ನೀಡಿದ್ದಾರೆ. ಖಂಡಿತವಾಗಿಯೂ ಈ ಸಿನಿಮಾ ನೋಡುತ್ತೇನೆ ಎಂದು ಆಮೀರ್ ಖಾನ್ ಹೇಳಿದ್ದಾರೆ. 'ನಾನು ಈ ಸಿನಿಮಾವನ್ನು ಖಂಡಿತವಾಗಿಯೂ ನೋಡುತ್ತೇನೆ. ಈ ಕತೆ ನಮ್ಮ ಇತಿಹಾಸದ ಒಂದು ಭಾಗವಾಗಿದೆ. ಕಾಶ್ಮೀರಿ ಪಂಡಿತರಿಗೆ ಏನಾಯಿತು ಎನ್ನುವುದು ನಿಜಕ್ಕೂ ದುಃಖಕರವಾಗಿದೆ. ಅಂತಹ ವಿಷಯದ ಮೇಲೆ ಯಾವುದೇ ಸಿನಿಮಾ ಬಂದರೂ ಭಾರತೀಯರು ನೋಡಬೇಕು' ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಆಮೀರ್ ಖಾನ್, 'ಈ ಚಿತ್ರ ಮಾನವೀತೆಯ ಇರುವ ಎಲ್ಲಾ ಜನರ ಭಾವನೆಗಳನ್ನು ಮುಟ್ಟಿದೆ. ನಾನು ಖಂಡಿತವಾಗಿ ಸಿನಿಮಾ ವೀಕ್ಷಿಸುತ್ತೇನೆ. ಈ ಸಿನಿಮಾ ಯಶಸ್ವಿಯಾಗಿರುವುದು ನೋಡಿ ನನಗೆ ತುಂಬಾ ಸಂತೋಷವಾಗಿದೆ' ಎಂದು ಹೇಳಿದರು.

Aamir Khan; ಕುಡಿತದ ಚಟದಿಂದ ಹೊರಬಂದ ಬಗ್ಗೆ ಬಹಿರಂಗ ಪಡಿಸಿದ ಮಿಸ್ಟರ್ ಪರ್ಫೆಕ್ಷನಿಸ್ಟ್

ಇನ್ನು ಇತ್ತೀಚಿಗೆ ನಟಿ ಸ್ವರಾ ಭಾಸ್ಕರ್, ಪ್ರಕಾಶ್ ರಾಜ್ ಸೇರಿದಂತೆ ಕೆಲವು ಕಲಾವಿದರು ಸಿನಿಮಾ ವಿರುದ್ಧ ವ್ಯಂಗ್ಯ ಆಡಿದ್ದರು. ಬಳಿಕ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಕೆಲವರ ವಿರೋದದ ನಡುವೆಯೂ ಈ ಸಿನಿಮಾವನ್ನು ಅನೇಕರು ಹಾಡಿಹೊಗಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅನೇಕ ರಾಜಕೀಯ ಗಣ್ಯರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್‌ ಲವ್‌ ಲೈಫ್‌ ವಿವರ!

ಸಿನಿಮಾ ಬಿಡುಗಡೆ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ(Vivek Agnihotri) ಗೃಹ ಸಚಿವಾಲಯವು ವೈ ಕೆಟಗರಿ ಭದ್ರತೆ(Y security) ನೀಡಲಾಗಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾಗಿ ವಾರದ ಬಳಿಕ ತಮ್ಮ ಕುಟುಂಬಕ್ಕೆ ಬೆದರಿಕೆ ಇದು ಎಂದು ನಿರ್ದೇಶಕ ಅಗ್ನಿಹೋತ್ರಿ ಹೇಳಿದ್ದರು. ಇನ್ನು ಸಿನಿಮಾ ಬಿಡುಗಡೆಗೂ ಮೊದಲು ನಿರ್ದೇಶಕ ಅಗ್ನಿಹೋತ್ರಿ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು, ಅಲ್ಲದೆ ಈ ಸಿನಿಮಾ ಬಿಡುಗಡೆ ಮಾಡದಂತೆ ಬೆದರಿಕೆ ಕರೆಗಳು ಬಂದಿತ್ತು ಮತ್ತು ಅಸಭ್ಯ ಕರೆಗಳು ಬರುತ್ತಿದ್ದವು ಎಂದು ಅಗ್ನಿಹೋತ್ರಿ ಹೇಳಿಕೊಂಡಿದ್ದರು. ಇದೀಗ ಸಿನಿಮಾ ಬಿಡುಗಡೆಯಾಗಿ ಅನೇಕ ದಿನಗಳ ಬಳಿಕ ನಿರ್ದೇಶಕರಿಗೆ ಭದ್ರತೆ ನೀಡಲಾಗಿದೆ.

Latest Videos
Follow Us:
Download App:
  • android
  • ios