ಬಾಲಿವುಡ್ ನಟ ಅಮಿರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಅಥವಾ ವೃತ್ತಿ ಜೀವನ ಬಗ್ಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳದೆ ಇರಬಹುದು. ಆದರೆ ತಪ್ಪದೇ ಅಭಿಮಾನಿಗಳಿಗೆ ಯಾವುದಾದರೂ ಒಂದು ವಿಚಾರದ ಬಗ್ಗೆ ತಿಳಿಸಿ, ಚರ್ಚಿಸಿ ಹಾಗೂ ಮನೋರಂಜಿಸುತ್ತಿರುತ್ತಾರೆ.

ಪಾಕ್ ದೋಸ್ತಿ ದೇಶಕ್ಕೆ ಅಮೀರ್ ಭೇಟಿ, ಸ್ವಾಮಿ ಕೊಟ್ಟ ಭರ್ಜರಿ ಏಟು!

ಶಿಕ್ಷಕರ ದಿನಾಚರಣೆ ಹಿಂದಿನ ದಿನ ನಟ ಅಮಿರ್ ಖಾನ್‌ ತಮ್ಮ ನೆಚ್ಚಿನ ಮರಾಠಿ ಟೀಚರ್‌ನನ್ನು ಕಳೆದುಕೊಂಡಿದ್ದಾರೆ. ಟ್ಟೀಟರ್‌ನಲ್ಲಿ ಸಂತಾಪ ಸೂಚಿಸಿದ  ಆಮೀರ್‌, ಅವರೊಟ್ಟಿಗೆ ಕಳೆದ ಸುಮಧುರ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದಾರೆ.

 

'ನನ್ನ ಫೇವರೇಟ್‌ ಮರಾಠಿ ಟೀಚರ್‌ ಸರ್ ಮಿಸ್ಟರ್‌ ಸುಹಾಸ್‌ ಅಗಲಿದ್ದಾರೆ. ಸರ್‌ ನೀವು ನನ್ನ ಜೀವನದ ಬೆಸ್ಟ್ ಟೇಚರ್‌. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣವೂ ಮೆಮೋರೇಬಲ್. ನಿಮ್ಮ ಕುತೂಹಲ, ಪ್ರತಿ ಹೊಸ ವಿಚಾರಗಳನ್ನು ಕಲಿಯಬೇಕು ಎಂಬ ಆಸೆ, ನಿಮ್ಮ ಪ್ರಾಮಾಣಿಕ ಗುಣವೇ ನಿಮ್ಮನ್ನು ಬೆಸ್ಟ್‌ ಗುರುವಾಗಿ ಮಾಡಿದೆ. 4ಕ್ಕೂ ಹೆಚ್ಚು ವರ್ಷಗಳ ಕಾಲ ನಿಮ್ಮಿಂದ ಕಲಿತಿದ್ದೇನೆ. ನಿಮ್ಮ ಶಿಕ್ಷಣದಲ್ಲಿದೆ, ಮರಾಠಿ ಭಾಷೆ ಮಾತ್ರವಲ್ಲದೇ ಜೀವನದ ಅನೇಕ ವಿಚಾರಗಳ ಬಗ್ಗೆ ಪಾಠ ಮಾಡಿದ್ದೀರಿ.  ಥ್ಯಾಂಕ್ಸ್' ಎಂದು ಅಮಿರ್‌ ಅಗಲಿದೆ ಗುರುವಿಗೆ ನಮನ ಸಲ್ಲಿಸಿದ್ದಾರೆ. 

ಭಾರತವನ್ನು ಸದಾ ಬೈಯ್ಯೋ ಟರ್ಕಿ ಅಧ್ಯಕ್ಷನ ಪತ್ನಿ ಜೊತೆ ಅಮೀರ್ ಖಾನ್ ಮಾತು..! 

ಅಮಿರ್‌ ಖಾನ್‌ ಸದ್ಯಕ್ಕೆ ಕರೀನಾ ಕಪೂರ್ ಜೊತೆ 'ಲಾಲ್‌ ಸಿಂಗ್ ಚಡ್ಡಾ' ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಹಾಲಿವುಡ್‌ನ 'ಫಾರೆಸ್ಟ್‌ ಗ್ರಂಪ್' ಆಧಾರಿತ ಕಥೆ ಇದಾಗಿದ್ದು ಅಮಿರ್ ಅವರನ್ನು ಡಿಫರೆಂಟ್‌ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.