ಟರ್ಕಿ ಅಧ್ಯಕ್ಷರ ಪತ್ನಿಯನ್ನು ಮಾತನಾಡಿಸಿದ ಬಾಲಿವುಡ್ ನಟ ಈಗ ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟರ್ಕಿ ಅಧ್ಯಕ್ಷರ ಪತ್ನಿ ಎಮಿನ್ ಎರ್ಡೋಗನ್‌ ಅವರನ್ನು ಭೇಟಿಯಾಗಿದ್ದರು. ಸದಾ ಭಾರತವನ್ನು ಬೈಯ್ಯೋ ಟರ್ಕಿ ಅಧ್ಯಕ್ಷನ ಪತ್ನಿ ಜೊತೆ ಅಮೀರ್ ಮಾತನಾಡಿದ್ದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

ಫಾರೆಸ್ಟ್ ಗಂಪ್ ಸಿಮಾದ ರಿಮೇಕ್ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಶೂಟಿಂಗ್‌ಗಾಗಿ ಟರ್ಕಿಯಲ್ಲಿರುವ ಅಮೀರ್ ಖಾನ್ ಎಮಿನ್ ಅವರನ್ನು ಭೇಟಿಯಾಗಿದ್ದರು.

ಸೋನಾಲಿ ಬೆಂದ್ರೆಯನ್ನು ಕಿಡ್‌ನ್ಯಾಪ್‌ ಮಾಡಲು ಬಯಸಿದ್ದ ಪಾಕ್ ಕ್ರಿಕೆಟಿಗ !

ಇತ್ತೀಚಿನ ಟರ್ಕಿ ಹಾಗೂ ಭಾರತದ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ಭಾರತದಲ್ಲಿ ಹಿಂದೂಗಳಿಂದ ಮುಸ್ಲಿಮರ ಕಗ್ಗಲೆಯಾಗುತ್ತಿದೆ ಎಂದು ಟರ್ಕಿ ಅಧ್ಯಕ್ಷ ಎರ್ಡಗೋನ್ ದೆಹಲಿ ಗಲಭೆ ಬಗ್ಗೆ ಟೀಕಿಸಿದ್ದರು.

ಟರ್ಕಿ ಫಸ್ಟ್ ಲೇಡಿಯನ್ನು ಭೇಟಿಯಾದ ಲಗಾನ್ ನಟ ಅಮೀರ್ ಖಾನ್..!

ವಿಶ್ವಸಂಸ್ಥೆಯಲ್ಲಿಯೂ ಟರ್ಕಿ ಅಧ್ಯಕ್ಷ ಎರ್ಡಗೋನ್ ಕಾಶ್ಮೀರ ವಿಚಾರವಾಗಿ ಮಾತನಾಡಿದ್ದರು. ಭಾರತದ ಕಾಶ್ಮೀರದಲ್ಲಿ 8 ಮಿಲಿಯನ್ ಜನ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಅವರು ವಿಶ್ವಸಂಸ್ಥೆ ಭಾಷಣದಲ್ಲಿ ಆರೋಪಿಸಿದ್ದರು.

ಸಲ್ಮಾನ್ ಬೇಡ ಎಂದ ಫ್ಯಾನ್ಸ್: ಯಾರು ನಡೆಸಿ ಕೊಡ್ತಾರೆ ಹಿಂದಿ ಬಿಗ್‌ಬಾಸ್

ಈ ರೀತಿ ಭಾರತವನ್ನು ಟೀಕಿಸುತ್ತಲೇ ಇರುವ ಟರ್ಕಿ ಅಧ್ಯಕರ ಪತ್ನಿಯನ್ನು ಅಮೀರ್ ಮಾತಾಡಿಸುವ ಕೆಲಸವೇನಿತ್ತು..? ಮಾತಾಡುವುದಕ್ಕೇನಿದೆ, ಇದಕ್ಕೂ ಲಾಲ್‌ ಸಿಂಗ್ ಚಡ್ಡಾ ಸಿನಿಮಾಗೂ ಸಂಬಂಧ ಇದ್ಯಾ ಎಂದು ವ್ಯಂಗ್ಯ ಮಾಡಿದ್ದಾರೆ.