ಹೆರೋಫಂಥಿ ನಟ ಟೈಗರ್ ಶ್ರಾಫ್ ಅಂದರೆ ಫಸ್ಟ್ ನೆನಪಾಗೋದು ಆತನ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಮೈ ಕಟ್ಟು. ಅಪ್ಪ ಜಾಕಿಶ್ರಾಫ್ ಅತ್ಯುತ್ತಮ ಅಭಿನಯದ ಮೂಲಕ ಭೇಷ್ ಅನಿಸಿಕೊಂಡರೆ, ಮಗ ಟೈಗರ್ ತನ್ನ ಬಾಡಿ ಮೂಲಕವೇ ಕಮ್ಯೂನಿಕೇಟ್ ಮಾಡುವವರು. ಆದರೆ ಈ ಇಬ್ಬರಿಗಿಂತ ಭಿನ್ನವಾಗಿ ಜಾಕಿ ಮಗಳು ಕೃಷ್ಣಾ ಅರೆಬೆತ್ತಲೆ ಫೋಸ್‌ಗಳಿಂದಲೇ ಸುದ್ದಿಯಲ್ಲಿದ್ದವಳು. ಈಕೆಯ ಇನ್‌ಸ್ಟಾದ ತುಂಬ ಅರೆನಗ್ನಳಾಗಿ ಮಾದಕ ಭಂಗಿಯಲ್ಲಿ ಫೋಟೋಶೂಟ್ ಮಾಡಿರುವ ಫೋಟೋಗಳೇ ತುಂಬಿವೆ. ಸದ್ಯಕ್ಕೆ ಕೃಷ್ಣಾ ಸಿಡ್ನಿಗೆ ಹೋಗಿ ಅಲ್ಲಿ ತನ್ನ ಬಾಯ್‌ಫ್ರೆಂಡ್ ಇಬಾನ್ ಹಯಾಮ್ ಜೊತೆಗೆ ಕ್ವಾರಂಟೈನ್ ಆಗಿದ್ದಾಳೆ. 

 

 
 
 
 
 
 
 
 
 
 
 
 
 

Beach, please. 🏖

A post shared by Krishna Shroff (@kishushroff) on Jul 6, 2020 at 3:35am PDT

ಸಿಡ್ನಿಯ ಬೀಚ್‌ನಲ್ಲಿ ಬಿಕಿನಿ ಧರಿಸಿ ತನ್ನ ಬಾಯ್‌ಫ್ರೆಂಡ್‌ ಜೊತೆಗೆ ವೈನ್ ಹೀರುತ್ತಿರುವ ಬೋಲ್ಡ್ ಫೋಟೋವನ್ನು ಕೃಷ್ಣಾ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾಳೆ. ಈ ಹಿಂದೆ ತನ್ನ ಗರ್ಲ್ ಫ್ರೆಂಡ್ ಕೃಷ್ಣಾ ಮೀಟ್ ಮಾಡೋದಕ್ಕೆ ಇಬಾನ್ ಇಂಡಿಯಾಗೆ ಬಂದಿದ್ದ. ಆದ್ರೆ ಟೈಮ್‌ನಲ್ಲಿ ಕೊರೋನಾ ಬಂದು ಲಾಕ್‌ಡೌನ್‌ ಆಗಿ ಇಲ್ಲದ ಫಚೀತಿಯಾದಾಗ ತನ್ನ ಗರ್ಲ್ ಫ್ರೆಂಡ್ ಮನೆಯಲ್ಲೇ ಉಳಿದುಕೊಂಡಿದ್ದ. ಲಾಕ್‌ಡೌನ್‌ ಬಳಿಕ ಸಿಡ್ನಿಗೆ ಮರಳಿದ್ದ. ತನ್ನ ಬಾಯ್ ಫ್ರೆಂಡ್ ಹೋದ ಮೇಲೆ ಕೃಷ್ಣಾಗೆ ಸಿಕ್ಕಾಪಟ್ಟೆ ಬೇಜಾರಾಗಿ ಆಕೆಯೂ ಸಿಡ್ನಿಗೆ ಹೊರಟಳು. ಅಲ್ಲಿ ಬಾಯ್‌ಫ್ರೆಂಡ್ ಜೊತೆಗೆ ಕಳೆದು ಫೋಟೋಶೂಟ್ ಸಹ ಮಾಡಿಸಿಕೊಂಡಳು. ಅದನ್ನೀಗ ಸೋಷಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ತನ್ನ ಖಾಸಗಿ ಕ್ಷಣಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾಳೆ. ತನ್ನ ಈ ಫೋಟೋದ ಜೊತೆಗೆ ಕಳೆದವರ್ಷ ಜೂನ್ ತಿಂಗಳಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಫೋಟೋವನ್ನೂ ಶೇರ್ ಮಾಡಿದ್ದಾಳೆ. 

ತಲಾ ಅಜಿತ್ ಮಗಳಾಗಿ ನಟಿಸಿದ ಹುಡುಗಿಯ ಆಸೆ ಕೇಳಿದ್ರೆ ದಂಗಾಗ್ತೀರ! 
ಹಾಗಂತ ಸಿಡ್ನಿಗೆ ಹೋದ ತಕ್ಷಣ ಅವಳಿಗೆ ಬಾಯ್‌ಫ್ರೆಂಡ್ ಮೀಟ್ ಮಾಡೋದಕ್ಕೆ ಆಗಿಲ್ಲ. ಕಡ್ಡಾಯ ಕ್ವಾರೆಂಟೈನ್‌ಗೆ ಒಳಗಾಗಲೇ ಬೇಕಿತ್ತು. ಆ ಟೈಮ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಇನ್ನಿಲ್ಲದಂತೆ ತನ್ನ ಕಾಡಿಸುತ್ತಿದ್ದಾನೆ ಅಂತ ಕೃಷ್ಣಾ ಹೇಳಿದ್ದಳು. ಕ್ವಾರಂಟೈನ್ ಕಾರಣಕ್ಕೆ ಆತ ಈಕೆಯಿಂದ ದೂರ ಇದ್ದದ್ದೇ ಈಕೆಯ ವೇದನೆ ಹೆಚ್ಚಾಯ್ತು. ಇದನ್ನರಿತ ಇಬಾನ್ ಈಕೆಯ ಫೇವರೆಟ್ ತಿಂಡಿಗಳನ್ನೆಲ್ಲ ಈಕೆ ಇರೋ ಜಾಗಕ್ಕೇ ಕಳುಹಿಸಿಕೊಟ್ಟಿದ್ದಾನೆ. ಆದರೂ ವಿರಹ ತಡೆದಿಲ್ಲ. ಕೊನೆಗೂ ಈ ಜೋಡಿಗಳು ಕ್ವಾರೆಂಟೈನ್ ಬಳಿಕ ಒಂದಾಗಿದ್ದಾರೆ, ಬೀಜ್ ಗಳಲ್ಲಿ ಅರೆಬೆತ್ತಲಾಗಿ ಓಡಾಡ್ತಾ, ವೈನ್ ಹೀರುತ್ತಾ ಮಜವಾಗಿ ಕಳೆಯುತ್ತಿದ್ದಾರೆ. 
ಇತ್ತೀಚೆಗೆ ಇವರಿಬ್ಬರೂ ತಮ್ಮ ಡೇಟಿಂಗ್ ಆನಿವರ್ಸರಿಯನ್ನು ಆಚರಿಸಿಕೊಂಡಿದ್ದರು. ಅದಕ್ಕೂ ಮೊದಲು ಈ ಜೋಡಿ ಪಬ್ಲಿಕ್ ನಲ್ಲಿ ಲಿಪ್ ಲಾಕ್ ಮಾಡ್ತಿರೋ ಫೋಟೋ ಸಖತ್ ವೈರಲ್ ಆಗಿತ್ತು. 

ಈ ಸೆಲೆಬ್ರಿಟಿಗಳು ರಿಯಲ್‌ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್ 
ಇದೆಲ್ಲ ಸರಿ, ಆದರೆ ಈ ಮಟ್ಟದ ಅರೆಬೆತ್ತಲೆ ಫೋಸ್ ಯಾಕೆ ಅಂತ ಈ ಹಿಂದೆ ಸಾಕಷ್ಟು ಸಂದರ್ಶಕರು ಕೃಷ್ಣಾಳನ್ನು, ಆಕೆಯ ತಂದೆ ಜಾಕಿ ಶ್ರಾಪ್ ಅವರನ್ನು ಪ್ರಶ್ನೆ ಮಾಡಿದ್ದರು. ಆ ಹೊತ್ತಿಗೆ ಕೃಷ್ಣಾ ಟಾಪ್ ಲೆಸ್ ಫೋಟೋ ಹಾಕಿ ಸುದ್ದಿಯಲ್ಲಿದ್ದಳು. 'ಮಕ್ಕಳಿಗೆ ನಾನು ಸಾಕಷ್ಟು ಸ್ವತಂತ್ರ್ಯ ಕೊಟ್ಟಿದ್ದೇನೆ. ಅವರ ಲೈಫ್ ಅವರಿಷ್ಟ. ನಾನು ಅವರ ಖಾಸಗಿತನದ ಬಗ್ಗೆ ಪ್ರಶ್ನೆ ಮಾಡಲ್ಲ. ನೀವೂ ಮಾಡಬಾರದು' ಅಂತ ಜಾಕಿ ಜಾಣ್ಮೆಯಿಂದ ಉತ್ತರಿಸಿದ್ದರು. 

ಬೆತ್ತಲೆ ದೇಹದ ಸ್ಟಾರ್‌ನ ರುಚಿಕರ ಅಡುಗೆ! 
ಇಷ್ಟೆಲ್ಲ ಮಾಡಿಯೂ ಕೃಷ್ಣಾ ತಿಂದುಂಡು ಷೋಕಿ ಮಾಡ್ತಾಳಷ್ಟೇ ಅಂತ ಅಂದುಕೊಳ್ಳಬೇಡಿ. ಈಕೆ ಫಿಟ್ ನೆಸ್‌ ಟ್ರೈನರ್ ಆಗಿರೋ ಜೊತೆಗೆ ಜಿಮ್‌ಅನ್ನೂ ನಡೆಸುತ್ತಿದ್ದಾಳೆ. ಎಂಎಂಎ ಮ್ಯಾಟ್ರಿಕ್ಸ್ ಅಂತ ಆ ಜಿಮ್‌ನ ಹೆಸರು. ಆದರೂ ೨೭ ವರ್ಷದ ಈ ಮಾಡರ್ನ್ ಲೇಡಿ ಬಗ್ಗೆ ನೆಗೆಟಿವ್ ಕಮೆಂಟ್‌ಗಳೇ ಯಾಕೆ ಪಾಸಾಗ್ತಿದೆ ಅನ್ನೋದು ಸ್ವತಃ ಕೃಷ್ಣಾಗೂ ಗೊತ್ತಿಲ್ವಂತೆ.