ಬಾಲಿವುಡ್ ನಿರ್ಮಾಪಕ ಮತ್ತು ನಿರ್ದೇಶಕ ಪ್ರಕಾಶ್ ಝಾ ಹಾಗೂ ನಟ ಬಾಬಿ ಡಿಯೋಲ್‌ಗೆ ರಾಜಸ್ಥಾನದ ಜೋಧಾಪುರ ಜಿಲ್ಲಾ ಸೆಷನ್ಸ್ ಕೋರ್ಟ್ ನೋಟಿಸ್ ಕಳುಹಿಸಿದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಇಬ್ಬರ ಕಾಂಬಿನೇಷನ್‌ನ ವೆಬ್ ಸಿರೀಸ್ ಆಶ್ರಮ್‌ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೇ ವಿಚಾರವಾಗಿ ನೋಟಿಸ್ ಕಳುಹಿಸಲಾಗಿದೆ.

ಅರ್ಜಿದಾರ ಅಡ್ವಕೇಟ್ ಖುಷ್ ಖಂಡೇವಾಲಾ ವೆಬ್ ಸಿರೀಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಇದರಲ್ಲಿ ಹಿಂದೂ ಗುರುಗಳನ್ನು ಅತ್ಯಾಚಾರಿಗಳು, ಡ್ರಗ್ಸ್ ಟ್ರಾಫಿಕ್‌ ಲೀಡರ್‌ಗಳಾಗಿ ಬಿಂಬಿಸಲಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ ಮಾಡಿದ ಎಲ್ಲಾ ಪ್ರಕರಣ ರೇಪ್ ಅಲ್ಲ; ಹೈಕೋರ್ಟ್!

ಕುಡಿ ಪೊಲೀಸ್ ಸ್ಟೇಷನ್‌ನಲ್ಲಿ ಕೇಸು ದಾಖಲಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣ ಜನವರಿ 11ರಂದು ವಿಚಾರಣೆಯಾಗಲಿದೆ. ಇದೀಗ #BanAshramWebseries ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ.

ಇಲ್ಲಿನ ಪಾತ್ರಗಳು ಕಾಲ್ಪನಿಕವಾಗಿವೆ ಮತ್ತು ಯಾವುದೇ ಧರ್ಮವನ್ನು ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ ಎಂದು ನಿರ್ದೇಶಕ ಸಮರ್ಥಿಸಿಕೊಂಡರು. ಪ್ರದರ್ಶನವು ಕೋಟಿ ಕೋಟಿ ವೀಕ್ಷಣೆ ಪಡೆದಿದೆ.  ಇದು ಅದರ ಜನಪ್ರಿಯತೆಗೆ ಸಾಕ್ಷಿ ಎಂದಿದ್ದಾರೆ.

15 ವರ್ಷವಾದ್ರೂ ಸಂತಾನ ಭಾಗ್ಯವಿಲ್ಲ: ಕರುವನ್ನು ಮಗನಾಗಿ ದತ್ತು ಸ್ವೀಕರಿಸಿದ ರೈತ ದಂಪತಿ

ಆಶ್ರಮವು ಸ್ವಯಂ ಘೋಷಿತ ದೇವಮಾನವ ಮತ್ತು ಡೇರಾ ಸಾಚಾ ಸೌದಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಆಧಾರಿತವಾಗಿದೆ. ಅವರು ಅತ್ಯಾಚಾರ ಮತ್ತು ಪತ್ರಕರ್ತನ ಹತ್ಯೆಗೆ ಶಿಕ್ಷೆಗೊಳಗಾಗಿದ್ದಾರೆ.