ಬರೇಲಿ(ಡಿ.17): ಮದುವೆಯಾಗಿ 15 ವರ್ಷವಾದರೂ ಮಕ್ಕಳಾಗದ ಈ ರೈತ ಜೋಡಿ ಮಗನನ್ನು ದತ್ತು ಸ್ವೀಕರಿಸಲು ನಿರ್ಧರಿಸಿದ್ದರು. ಉತ್ತರ ಪ್ರದೇಶದ ಹಳ್ಳಿಯ ಈ ಸಾಮಾನ್ಯ ರೈತ ದಂಪತಿ ಲಾಲ್ಟು ಬಾಬ ಎಂದು ಹೆಸರಿಸಿ ಕರುವನ್ನು ದತ್ತು ಸ್ವೀಕರಿಸಿದ್ದಾರೆ.

ವಿಜಯ್‌ಪಾಲ್ ಹಾಗೂ ರಾಜೇಶ್ವರಿ ದೇವಿ ಲಾಲ್ಟು ಬಾಬುವಿನ ಕೇಶ ಮುಂಡನಕ್ಕೆ ಸುಮಾರು 500 ಜನರನ್ನು ಆಹ್ವಾನಿಸಿದ್ದಾರೆ.ಲಾಲ್ಟು ಬಾಬಾವನ್ನು ಲಾಲ್ಟು ಘಾಟ್‌ಗೆ ಕರೆದೊಯ್ದು ಗೋಮತಿ ನದೀ ತೀರದಲ್ಲಿ ಕೇಶಮುಂಡನ ಸಂಪ್ರದಾಯ ನೆರವೇರಸಿದ್ದಾರೆ. ಪುರೋಹಿತರು ಹಸು ಹಾಗೂ ಅದರ ಪೋಷಕರನ್ನು ಹರಸಿದ್ದಾರೆ.

ಸಾವಿನಲ್ಲೂ ಐವರಿಗೆ ಬದುಕು ಕೊಟ್ಟ ಎರಡೂವರೆ ವರ್ಷದ ಕಂದಮ್ಮ

ನಂತರ ಸಂಭ್ರಮ ಆಚರಣೆ ನಡೆದು ಗ್ರಾಮಸ್ಥರು ಭಿನ್ನವಾದ ಉಡುಗೊರೆಗಳೊಂದಿಗೆ ಬಂದಿದ್ದರು. ಲಾಲ್ಟುನನ್ನು ಮಗನಂತೆಯೇ ಸಾಕಿದ್ದೇನೆ. ಅದು ಹುಟ್ಟಿದಾಗಿನಿಂದಲೂ ನಮ್ಮ ಜೊತೆಗೇ ಇದೆ. ನಮ್ಮನ್ನು ಹಚ್ಚಿಕೊಂಡಿದೆ ಎಂದಿದ್ದಾರೆ ವಿಜಯ್ ಪಾಲ್.

ನಮಗೆ ಕೇಶ ಮುಂಡನದ ಆಮಂತ್ರಣ ನೋಡಿ ಅಚ್ಚರಿಯಾಯಿತು. ಬಹಳಷ್ಟು ಗ್ರಾಮಸ್ಥರು ಬಂದಿದ್ದರು. ನಾವೆಲ್ಲರೂ ಈ ಘಟನೆ ಬಗ್ಗೆ ಖುಷಿಯಾಗಿದ್ದೇವೆ ಎಂದಿದ್ದಾರೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಥಳೀಯ ವ್ಯಕ್ತಿ.

ಕಾಂಗ್ರೆಸ್‌ನಲ್ಲಿ ಅಧ್ಯಕ್ಷಗಿರಿ ತಿಕ್ಕಾಟ, ನಾಯಕನ ಮಾತಿನಿಂದ ಬಿಜೆಪಿಗೆ ಸಂಕಟ; ಡಿ.17ರ ಟಾಪ್ 10 ಸುದ್ದಿ!

ಪೋಷಕರ ಸಾವಿನಿಂದ ವಿಜಯ್‌ಪಾಲ್ ಒಂಟಿಯಾಗಿದ್ದರು. ಸಹೋದರಿಯರ ಮದುವೆಯಾದ ಮೇಲಂತೂ ಇನ್ನಷ್ಟು ಒಂಟಿ ಎನಿಸುತ್ತಿತ್ತು. ಲಾಲ್ಟುವಿನ ತಾಯಿಯನ್ನು ವಿಜಯ್‌ನ ತಂದೆ ಸಾಕಿದ್ದರು. ಹಸುವಿನ ತಾಯಿಯೂ ಅಸುನೀಗಿತ್ತು. ಹಸುವೂ ಒಂಟಿಯಾಯಿತು. ಹಾಗಾಗಿ ಅದನ್ನು ದತ್ತು ಸ್ವೀಕರಿಸಲು ನಿರ್ಧರಿಸಿದ್ದರು ವಿಜಯ್‌ಪಾಲ್.

ನಾವು ಗೋವನ್ನು ಮಾತೆ ಎಂದು ಸ್ವೀಕರಿಸುವಾಗ ಅದನ್ನೇ ನಮ್ಮ ಪುತ್ರ ಎಂದು ಯಾಕೆ ಸ್ವೀಕರಿಸಬಾರದು ಎನ್ನುತ್ತಾರೆ ವಿಜಯ್. ಅಚ್ಚರಿ ಎನಿಸಿದರೂ ಎಷ್ಟು ಅರ್ಥಪೂರ್ಣ ಅಲ್ವಾ..?