ಪೋರ್ನ್‌ ನಟಿಯೆಂದು ಸನ್ನಿ ಲಿಯೋನ್‌ಳನ್ನು ಹೀಗಳೆಯುವಂತಿಲ್ಲ. ಈಕೆಯ ಬಾಳಿನ ಅನೇಕ ವಿಚಾರಗಳು ನಮಗೊಂದು ಪಾಠ 

- ಕರೇನ್ ಜಿತ್ ಕೌರ್‌ ವೋಹ್ರಾ ಅಂದರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ಸನ್ನಿ ಲಿಯೋನ್ ಅಂದರೆ ಎಲ್ಲರಿಗೂ ಗೊತ್ತಾಗುತ್ತೆ. ಒಂದು ಕಾಲದಲ್ಲಿ ಪೋರ್ನ್ ನಟಿಯಾಗಿದ್ದ ಈಕೆ ಭಾರತಕ್ಕೆ ಮೊದಲ ಸಲ ಬಂದಾಗ ಅಮಿತಾಭ್‌ ಬಚ್ಚನ್‌ರಂಥಾ ನಟರೂ ಆಕೆಯನ್ನು ಬಹಳ ಆತ್ಮೀಯವಾಗಿ ಸ್ವಾಗತಿಸಿದರು. ಬಾಲಿವುಡ್ ನಟಿಯಾಗಿ ಮಾಡಿರುವ ಹೆಸರಿಗಿಂತ ಎಷ್ಟೋ ಹೆಚ್ಚಿನ ಪ್ರಸಿದ್ಧಿ ಮತ್ತು ಹಣ ಆಕೆಗೆ ನೀಲಿ ಚಿತ್ರಗಳಿಂದ ಬಂದಿತ್ತು. ಆದರೆ ಆಕೆ ಎಷ್ಟು ಕಷ್ಟವಾದರೂ ಸರಿ, ತನ್ನ ಕರಿಯರ್‌ನಲ್ಲಿ ಒಂದು ಬದಲಾವಣೆ ಮಾಡಿಯೇ ಸಿದ್ಧ ಎಂಬ ಹಠದಿಂದ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದಳು. ನಟಿಸಿದಳು, ಕೆಲವು ಸಿನಿಮಾಗಳು ಗೆದ್ದವು. ಬಾಲಿವುಡ್‌ ನಟಿಯಾಗಿ ನೆಲೆನಿಂತಳು. ಕರಿಯರ್ ಬದಲಾಯಿಸುವಲ್ಲಿ ಈಕೆಯ ರಿಸ್ಕ್‌ ಟೇಕಿಂಗ್‌, ನಂತರದ ಆಕೆಯ ಪರಿಶ್ರಮ ಎಲ್ಲರಿಗೂ ಮಾದರಿ. 
- ಬದಲಾವಣೆ ಪ್ರತಿಯೊಬ್ಬನ ಬದುಕಿನಲ್ಲೂ ಆಗುತ್ತದೆ. ಅದನ್ನು ಧನಾತ್ಮಕವಾಗಿಸಬೇಕು. ಇಂದು ಸನ್ನಿ ಅಮೆರಿಕದಲ್ಲೂ ಭಾರತದಲ್ಲೂ ಅತ್ಯಂತ ಗ್ಲಾಮರಸ್, ಚಾರ್ಮ್‌ ಹುಡುಗಿಯಾಗಿರಬಹುದು. ಆದರೆ ಹೈಸ್ಕೂಲ್‌ನಲ್ಲಿ ಆಕೆ ಸಾಮಾನ್ಯ, ಕೃಷ್ಣವರ್ಣದ ಹುಡುಗಿಯಾಗಿದ್ದಳು. ಆಕೆಯನ್ನು ಎಲ್ಲರೂ ರೇಗಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆಗ ಒಬ್ಬ ಬಿಳಿ ಹುಡುಗನನ್ನು ಈಕೆ ಪ್ರೀತಿಸಿದ್ದಳು, ಆದರೆ ಆತ ಆಕೆಯನ್ನು ತಿರಸ್ಕರಿಸಿದ್ದ. ಮೊದಲ ಬಾರಿ ಪೋರ್ನ್‌ ಸಿನಿಮಾದಲ್ಲಿ ನಟಿಸಿದ್ದು, ಅದನ್ನು ನೋಡಿದಾಗ, ಅಯ್ಯೋ ಇದೆಂಥ ಹೇಸಿಗೆ ಕೆಲಸ ಎನಿಸಿತ್ತಂತೆ. ಇಂಥ ಅವಮಾನ, ಸೋಲುಗಳನ್ನು ಆಕೆ ಮುಂದೆ ಬದುಕಿನಲ್ಲಿ ಗೆಲುವಾಗಿ ಪರಿವರ್ತಿಸಿಕೊಂಡಳು. 

ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ ಸನ್ನಿ ಲಿಯೋನ್; ಹೇಗೆ ಸಾಧ್ಯವಾಯ್ತು? ...

- ಈಕೆಯ ಪತಿ ಡೇನಿಯಲ್‌ ವೆಬರ್‌, ಈಕೆಯ ಬ್ಯುಸಿನೆಸ್‌ ಮ್ಯಾನೇಜರ್‌ ಕೂಡ ಹೌದು. ಆತ ಸ್ವತಃ ಕಲಾವಿದ ಕೂಡ. ಆಕೆ ಪೋರ್ನ್‌ ಚಿತ್ರಗಳಲ್ಲಿ ಬೇರೆ ನಟರೊಂದಿಗೆ ನಟಿಸಿದಾಗ ಆತ ಜೆಲಸ್ ಪಡಲಿಲ್ಲ. ಆಕೆಯನ್ನು ಮಾಡೆಲಿಂಗ್‌ನಲ್ಲಿ ಪ್ರಮೋಟ್‌ ಮಾಡಿದ. ಯಶಸ್ವಿ ಗಂಡಸಿನ ಹಿಂದೆ ಹೆಣ್ಣು ಇರುತ್ತಾಳೆ ಅನ್ನುತ್ತಾರೆ. ಆದರೆ ಇಲ್ಲಿ ಯಶಸ್ವಿ ಸನ್ನಿಯ ಹಿಂದೆ ಆಕೆಯ ಗಂಡ ವೆಬರ್‌ ಇದ್ದಾನೆ. ಇಂಥ ಒಬ್ಬ ಬಾಳ ಗೆಳೆಯ, ಅರ್ಥ ಮಾಡಿಕೊಳ್ಳುವ ಸ್ನೇಹಿತ ಎಲ್ಲರಿಗೂ ಇರಬೇಕು. ಆಗ ಬಾಳು ಸುಗಮವಾಗುತ್ತದೆ. 
- ಮೂವತ್ತೆಂಟು ವರ್ಷದ ಸನ್ನಿ ಮೊದಲ ಮಗು 2017ರಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದರು. ಈಕೆ ಲಾತೂರ್‌ನ ಭೂಕಂಪ ಸಂತ್ರಸ್ತ ಕುಟುಂಬವೊಂದರ ಮಗು. ಇದಾದ ಮರುವರ್ಷವೇ ಬಾಡಿಗೆ ಗರ್ಭದ ಮೂಲಕ ಅವಳಿ ಮಕ್ಕಳ ತಾಯಿಯಾದರು. ನೋಹ್ ಎಂಬ ಮಗ ಹಾಗೂ ಆಶರ್ ಎಂಬ ಮಗಳು. ಮೂವರು ಮಕ್ಕಳನ್ನೂ ಸಮಾನ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಶ್ರೀಮಂತ ನಟರು ನಟಿಯರು ಬಾಲಿವುಡ್‌ನಲ್ಲಿ ಸಾಕಷ್ಟಿದ್ದಾರೆ. ಆದರೆ ಮಕ್ಕಳನ್ನು ದತ್ತು ಪಡೆದು ಪ್ರೀತಿಯಿಂದ ಸಾಕುವವರು ಎಷ್ಟಿದ್ದಾರೆ? ಸನ್ನಿಯೊಳಗೆ ಒಬ್ಬ ಅಪ್ಪಟ ತಾಯಿಯೂ ಇದ್ದಾಳೆ. ಸನ್ನಿ ನೀಲಿತಾರೆ ಅಂತ ಇಂದಿಗೂ ಅವಳನ್ನ ಲೇವಡಿ ಮಾಡುವ, ಕೇವಲವಾಗಿ ನೋಡುವ ಜನ ಬಹಳ ಮಂದಿ ಇದ್ದಾರೆ. ಆದರೆ ಈಕೆ ಅವೆಲ್ಲವನ್ನೂ ಮೀರಿ ಅಪ್ಪಟ ಅಮ್ಮನಾಗಿ ಬದುಕುತ್ತಿರುವುದು ಅಚ್ಚರಿ ಮೂಡಿಸುತ್ತದೆ. 

ಮಕ್ಕಳಿಗೆ ಮಾಸ್ಕ್ ಪಾಠ! ಕೊರೋನಾ ವಿರುದ್ಧ ಸನ್ನಿ ಲಿಯೋನ್ ಹೋರಾಟ! ...

- ಇವರ ಮನೆಯಲ್ಲಿ ಯಾವ ಧರ್ಮವನ್ನೂ ಆಚರಿಸುವುದಿಲ್ಲ. ಆದರೆ ಸನ್ನಿ ಲಿಯೋನ್‌ಗೆ ಆಧ್ಯಾತ್ಮದಲ್ಲಿ ಬಹಳ ನಂಬಿಕೆ. ಕರ್ಮ ಸಿದ್ಧಾಂತವನ್ನು ಅವರು ಬಹಳ ನಂಬುತ್ತಾರೆ. ಭಗವಂತನಲ್ಲಿ ಮೂವರು ಮಕ್ಕಳಿಗೆ ಒಳಿತನ್ನು ಮಾಡು ಎಂದು ಬೇಡಿಕೊಳ್ಳುತ್ತಾರೆ. ಅಷ್ಟೊಂದು ಶ್ರೀಮಂತೆ, ಕೀರ್ತಿವಂತೆಯಾದರೂ ದೇವರನ್ನು ಮರೆತಲ್ಲ.
- ಈಕೆ ಪೋರ್ನ್‌ ನಟಿಯಾಗುವ ಮುನ್ನ ಹಲವು ಕೆರಿಯರ್‌ಗಳನ್ನು ದಾಟಿ ಬಂದವಳು, ಬೇಕರಿಯಲ್ಲಿ ಕೆಲಸ ಮಾಡಿದಳು. ಟ್ಯಾಕ್ಸ್ ಮತ್ತು ರಿಟೈರ್‌ಮೆಂಟ್‌ ಸಂಸ್ಥೆಯೊಂದರಲ್ಲಿ ದುಡಿದಳು. ಇದಕ್ಕೂ ಮುನ್ನ ಪೀಡಿಯಾಟ್ರಿಕ್‌ ನರ್ಸ್ ಆಗಬೇಕೆಂದು ಬಯಸಿ ಆ ಕೋರ್ಸ್ ಮಾಡಿದ್ದಳು. ಆದರೆ ಇದ್ಯಾವುದೂ ಆಗಲಿಲ್ಲ. ಪೋರ್ನ್‌ ಇಂಡಸ್ಟ್ರಿ ಕೈಬೀಸಿ ಕರೆಯಿತು. ಬಯಸಿದ ಕೆಲಸ ಸಿಗದಿದ್ದಾಗ, ಸಿಕ್ಕಿದ ಕೆಲಸವನ್ನೇ ಅತ್ಯುತ್ತಮವಾಗಿ ಮಾಡಬೇಕು ಎಂಬುದಕ್ಕೆ ನಿದರ್ಶನ ಈಕೆ.

ಗೂಗಲ್ ಸರ್ಚ್: ಸನ್ನಿ ಲಿಯೋನ್ ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ ...