Asianet Suvarna News Asianet Suvarna News

ಮಗಳ ಹೃದಯದಲ್ಲಿ ರಂಧ್ರ: ಶಾಕಿಂಗ್​ ವಿಷಯ ಬಹಿರಂಗಗೊಳಿಸಿದ ನಟಿ ಬಿಪಾಷಾ ಬಸು

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ತಮ್ಮ ಮಗಳ ಹೃದಯದಲ್ಲಿ ಎರಡು ರಂಧ್ರಗಳಿರುವ ಶಾಕಿಂಗ್​ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಟಿ ಹೇಳಿದ್ದೇನು? 
 

Bipasha Basu reveals daughter  was born with 2 holes in heart
Author
First Published Aug 6, 2023, 12:38 PM IST

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು (Bipasha Basu) 2016ರಲ್ಲಿ ಕರಣ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕಳೆದ ನವೆಂಬರ್​ 12ರಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  6 ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದು,  ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ಹೆಸರಿಟ್ಟಿದ್ದಾರೆ.  ಮಗು  ಹುಟ್ಟಿದಾಗಿನಿಂದಲೂ ಬಿಪಾಷಾ ಮಗುವಿನ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಪೋಸ್ಟ್​ ಮಾಡುತ್ತಲೇ ಇದ್ದಾರೆ. ಇದನ್ನು ನೋಡಿದವರು ನೀವೆಷ್ಟು ಲಕ್ಕಿ, ಕ್ಯೂಟ್​ ಪಾಪು ಎಂದೆಲ್ಲಾ ಹೇಳುತ್ತಾರೆ. ಆದರೆ ಬಿಪಾಷಾ ಮಗುವಿನ ಕುರಿತು ಆಘಾತಕಾರಿ ವಿಷಯವೊಂದನ್ನು ಈಗ ಬಹಿರಂಗಗೊಳಿಸಿದ್ದಾರೆ.  ಬಿಪಾಶಾ ಅವರು ನಟಿ ನೇಹಾ ಧೂಪಿಯಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಚಾಟ್ ಮಾಡುವಾಗ ತಮ್ಮ ಪುತ್ರಿಯ ಕುರಿತು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ತಮ್ಮ ಪುತ್ರಿ ದೇವಿ  ಜನಿಸಿದಾಗ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ (ವಿಎಸ್‌ಡಿ) ನಿಂದ ಬಳಲುತ್ತಿದ್ದಳು ಎಂದು ಬಿಪಾಷಾ ಬಹಿರಂಗಪಡಿಸಿದ್ದಾರೆ. ಇದರ ಅರ್ಥ ಪಾಪು ದೇವಿಯ  ಹೃದಯದಲ್ಲಿ ಎರಡು ರಂಧ್ರಗಳಿದ್ದವಂತೆ. ತಮ್ಮ ಮಗಳು  ಕೇವಲ ಮೂರು ತಿಂಗಳ ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂತು ಎಂದು ಕಣ್ಣೀರು ಹಾಕಿದ್ದಾರೆ.  

ತಾಯ್ತನದ ಬಗ್ಗೆ ಮಾತನಾಡಿದ ಬಿಪಾಶಾ ಬಸು ಅವರು, 'ನಮ್ಮ ಪ್ರಯಾಣವು ಯಾವುದೇ ಸಾಮಾನ್ಯ ತಾಯಿ-ತಂದೆಗಿಂತ ತುಂಬಾ ಭಿನ್ನವಾಗಿದೆ. ಇದೀಗ ನಾನು  ನಗುತ್ತಿದ್ದೇನೆ. ಆದರೆ ಪರಿಸ್ಥಿತಿ ನಿಜಕ್ಕೂ ಈ ನಗುವಿನಂತೆ ಇಲ್ಲ. ಜೀವನ  ತುಂಬಾ ಕಠಿಣವಾಗಿದೆ. ಯಾವ ತಾಯಿಗೂ ಹೀಗಾಗಬೇಕೆಂದು ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ.  ಮಗುವಾದ (Devi) ಮೂರನೇ ದಿನದಲ್ಲಿಯೇ  ಮಗುವಿನ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದರೆ ಅಮ್ಮನಿಗೆ ಹೇಗಾಗಬೇಡ? ಅಂಥ ಸ್ಥಿತಿ ನನಗೆ ಬಂದಿತ್ತು. ಈ ವಿಷಯವನ್ನು ಇಲ್ಲಿಯವರೆಗೆ ನಾನು ಯಾರ ಮುಂದೆಯೂ ಹಂಚಿಕೊಂಡಿರಲಿಲ್ಲ.  ಆದರೆ ನಾನು ಇದನ್ನು ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ನಟಿ ಬಿಪಾಷಾ.

ಪ್ರಸವದ ನಂತರವೂ ಫಿಟ್ ಆಗಿರೋದು ಹೇಗೆ? ವಿಡಿಯೋ ಮೂಲಕ ನಟಿ ಬಿಪಾಶಾ ಬಸು ಸೀಕ್ರೆಟ್​ ರಿವೀಲ್​

 ಮಗುವಿಗೆ ಮೂರು ದಿನವಿರುವಾಗಲೇ ನಿಮ್ಮ ಮಗುವಿಗೆ  ವಿಎಸ್‌ಡಿಯಿದೆ (VSD) ಎಂದು ವೈದ್ಯರು ಹೇಳಿದರು. ಇದೇನೆಂದು ನನಗೆ ಅರ್ಥವಾಗಲಿಲ್ಲ. ನಂತರ ತಿಳಿದದ್ದು,  ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್ ಎಂದು. ನಾವು ಇದನ್ನು  ನಮ್ಮ ಮನೆಯವರೊಂದಿಗೆ  ಚರ್ಚಿಸಲಿಲ್ಲ, ಜೀವನದಲ್ಲಿ ಕತ್ತಲು ಕವಿದ ಅನುಭವವಾಗಿತ್ತು. ಅದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ.  ಮೊದಲು ಐದು ತಿಂಗಳು ತುಂಬಾ ಕಷ್ಟವಾಗಿತ್ತು. ಆದರೆ ಈಗ ಮಗಳು ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ಬಿಪಾಷಾ ಹೇಳಿದ್ದಾರೆ. ಇದೊಂದು ರೀತಿಯಲ್ಲಿ ಸಂಘರ್ಷದ ಜೀವನವಾಗಿದೆ. ಮಗುವಿಗೆ  ತೆರೆದ ಹೃದಯ ಶಸ್ತ್ರಚಿಕಿತ್ಸೆ (Heart Operation) ಮಾಡುವಾಗ ಅಮ್ಮ-ಅಪ್ಪನಿಗೆ ಆಗುವ ನೋವನ್ನು ಬರಿ ಬಾಯಿ ಮಾತಿನಿಂದ ಹೇಳುವುದು ಸಾಧ್ಯವಿಲ್ಲ ಎಂದಿದ್ದಾರೆ. ಮಗುವಿಗೆ ಮೂರನೆಯ ತಿಂಗಳಿನಲ್ಲಿ ಸ್ಕ್ಯಾನ್​ ಮಾಡಲು ಹೋದಾಗ ವಿಷಯ ತಿಳಿಯಿತು. ಈ ಬಗ್ಗೆ ನಾನು ಸಾಕಷ್ಟು ಅಧ್ಯಯನ ಮಾಡಿದೆ.  ಶಸ್ತ್ರಚಿಕಿತ್ಸಕರನ್ನು ಭೇಟಿ ಮಾಡಿದೆ. ಶಸ್ತ್ರಚಿಕಿತ್ಸೆಗೆ ನಾನು ಒಂದು ರೀತಿಯಲ್ಲಿ ಸಿದ್ಧಳಾದೆ, ಆದರೆ ಕರಣ್ ಸಿದ್ಧನಾಗಿರಲಿಲ್ಲ. ಆದರೆ ಮಗಳು ಸರಿಯಾಗಬೇಕಾದರೆ ಇದು ಆಗಲೇಬೇಕು ಎಂದು ನಾನು ದೃಢವಾಗಿ ನಿಶ್ಚಯಿಸಿದ್ದೆ. ಈಗ ಮಗಳು ಸುಧಾರಿಸುತ್ತಿದ್ದಾಳೆ ಎಂದಿದ್ದಾರೆ ಬಿಪಾಷಾ.
 

ಬಿಪಾಶಾ ಬಸು ಅವರಿಗೆ ವಯಸ್ಸು 44 ಆದರೂ ಫಿಟ್​ನೆಸ್​ ಕಾಪಾಡಿಕೊಂಡಿದ್ದಾರೆ.  ಅಜನಬಿ,  ರಾಜ್‌, ಧೂಮ್‌ 2 ಮುಂತಾದ ಹಿಟ್‌ ಚಿತ್ರಗಳನ್ನು ನೀಡಿರೋ ಬಿಪಾಶಾ ಅಂದಿನಿಂದ ಇಂದಿನವರೆಗೂ  ಬ್ಯೂಟಿ ಹಾಗೂ ಫಿಟ್‌ನೆಸ್‌ಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಲೇ ಬಂದಿದ್ದಾರೆ.  ಅವರು ಗರ್ಭಿಣಿಯಾಗಿದ್ದಾಗ ಸಹಜವಾಗಿ ಅವರ ತೂಕದಲ್ಲಿ  ಏರಿಕೆಯಾಗಿತ್ತು. ಗರ್ಭಿಣಿ (Pregnancy) ಇರುವಾಗಲೂ ನಿತ್ಯ ವ್ಯಾಯಾಮ ಹಾಗೂ ಯೋಗ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಇದರ ಹೊರತಾಗಿಯೂ ತೂಕ ಹೆಚ್ಚಾಗಿತ್ತು ಎಂದಿದ್ದ ನಟಿ, ಬಾಣಂತನದ ನಂತರ ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದರು. ಗರ್ಭಿಣಿ ಇರುವಾಗ ಅವರು ಮಾಡಿಸಿಕೊಂಡಿದ್ದ ಫೋಟೋಶೂಟ್​ ಸಕತ್​ ಟ್ರೋಲ್​ ಆಗಿತ್ತು. ತೀರಾ ಅಶ್ಲೀಲ ಎನ್ನುವ ರೀತಿಯಲ್ಲಿ ಫೋಟೋಶೂಟ್​ ಮಾಡಿಸುವ ಅಗತ್ಯವೇನಿದೆ ಎಂದು ಹಲವರು ಆಡಿಕೊಂಡಿದ್ದರು. ತಾಯ್ತನಕ್ಕೆ ಅದರದ್ದೇ ಆದ  ಮಹತ್ವವಿದೆ. ಅದನ್ನು ಬಿಟ್ಟು ಗರ್ಭಿಣಿಯಾದಾಕೆ ತನ್ನ ಸರ್ವ ಅಂಗಾಂಗ ಪ್ರದರ್ಶನ ಮಾಡುವುದು ಎಷ್ಟು ಸರಿ ಎಂದು ಟೀಕಿಸಿದ್ದರು. 

ಚಿಕಿತ್ಸೆಗಾಗಿ ಸಮಂತಾ 25 ಕೋಟಿ ಸಾಲ ಪಡೆದದ್ದು ನಿಜನಾ? ನಟಿ ಹೇಳಿದ್ದೇನು?

Follow Us:
Download App:
  • android
  • ios