ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಮಗುವನ್ನು ದತ್ತು ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಬಾಲಿವುಡ್‌ನ ಯಾವುದೇ ಕಪಲ್ ಮದ್ವೆಯಾಗೋ ತನಕ ಯಾವಾಗ ಮದುವೆ ಅನ್ನೋ ಕುತೂಹಲ ಫ್ಯಾನ್ಸ್‌ಗಳಲ್ಲಿದ್ದರೆ ನಂತರ ಯಾವಾಗ ಮಕ್ಕಳು ಎಂಬ ಕುತೂಹಲವಿರುತ್ತದೆ.

ಹಾಗಾಗಿ ಸೆಲೆಬ್ರಿಟಿಗಳು ಮದುವೆಯಾಗೋವಾಗ್ಲೂ, ವಿಶೇಷ ಅಪ್‌ಡೇಟ್ ಇದ್ದಾಗ ಖುದ್ದಾಗಿ ಮಾಧ್ಯಮದ ಮುಂದೆ ಹೇಳುತ್ತಾರೆ. ಈ ನಡುವೆ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಮಗುವನ್ನು ದತ್ತು ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಬ್ಲಾಕ್ ಫ್ರೇಂ ಕನ್ನಡಕ, ಸಿಲ್ವರ್ ಜುಮ್ಕದಲ್ಲಿ ಇಲಿಯಾನ: 'ದಿ ಬಿಗ್‌ ಬುಲ್‌' ಲುಕ್ ವೈರಲ್

2016ರಲ್ಲಿ ಬಿಪಾಶಾ ಹಾಗೂ ಕರಣ್ ವಿವಾಹಿತರಾಗಿದ್ದರು. 4 ವರ್ಷಗಳಿಂದಲೂ ಕಪಲ್ ಹ್ಯಾಪಿಯಾಗಿ ಜೊತೆಯಾಗಿದ್ದಾರೆ. ಆದರೆ ಈವರೆಗೆ ಮಕ್ಕಳ ಬಗ್ಗೆ ಏನೂ ಮಾತನಾಡಿಲ್ಲ. 2019ರಲ್ಲಿ ನಿರ್ಮಾಪಕ ರಮೇಶ್ ಟೌರಾನಿ ಆಯೋಜಿಸಿದ ದೀಪಾವಳಿ ಪಾರ್ಟಿಯಲ್ಲಿ ಬಿಪಾಶಾ ಪ್ರೆಗ್ನೆಂಟ್ ಅನ್ನೋ ಸುದ್ದಿ ಕೆಳಿ ಬಂದಿತ್ತು. ಆದರೆ ಹೆವೀ ಲೆಹಂಗಾದಿಂದ ಅವರ ಹೊಟ್ಟೆ ಆ ರೀತಿ ಕಾಣುತ್ತಿತ್ತು ಎನ್ನಲಾಗಿದೆ.

ಎಲೋನ್ ಸಿನಿಮಾ ಸೆಟ್‌ನಲ್ಲಿ ಭೇಟಿಯಾಗಿದ್ದ ಇಬ್ಬರ ನಡುವೆ ಪ್ರೀತಿಯಾಗಿತ್ತು. 5 ವರ್ಷದ ನಂತರ ವೆಬ್ ಸಿರೀಸ್‌ನಲ್ಲಿ ಮತ್ತೆ ಜೊತೆಯಾಗಿದ್ದರು. ಇಂಟರ್‌ವ್ಯೂನಲ್ಲಿ ಮಕ್ಕಳ ಬಗ್ಗೆ ಕೇಳಿದಾಗ ದೇವರು ಏನು ಬಯಸುತ್ತಾನೋ ಅದು ಆಗುತ್ತದೆ ಎಂದಷ್ಟೇ ಉತ್ತರಿಸಿದ್ದರು.

ಭಾರೀ ಕ್ಲೋಸ್ ಇದ್ದ ಸಾರಾ-ಕಾರ್ತಿಕ್ ಆರ್ಯನ್ ಈಗ ಪರಸ್ಪರ ಫಾಲೋ ಮಾಡ್ತಿಲ್ಲ

ನ್ಯಾಚುರಲ್ ಆಗಿ ಮಕ್ಕಳಾಗದಿದ್ದರೂ ಹ್ಯಾಪಿಯಾಗಿ ಮಗುವನ್ನು ದತ್ತು ಪಡೆಯುವುದಾಗಿ ಅವರು ಹೇಳಿದ್ದಾರೆ. ಮಕ್ಕಳಾಗದಿದ್ದರೆ ಪರವಾಗಿಲ್ಲ, ನಮ್ಮ ದೇಶದಲ್ಲಿ ಬಹಳಷ್ಟು ಮಕ್ಕಳಿದ್ದಾರೆ. ನಾವು ಅವರನ್ನು ನೋಡಿಕೊಳ್ಳಬಹುದು ಎಂದಿದ್ದಾರೆ.