ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ದಿ ಬಿಗ್ ಬುಲ್ ಸಿನಿಮಾದಲ್ಲಿ ನಟಿ ಇಲಯಾನ ಡಿಕ್ರೂಜ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ಧರಿಸಿ, ಕಪ್ಪು ಫ್ರೇಮ್‌ನ ಕನ್ನಡಕದ ಜೊತೆ ಸಿಲ್ವರ್ ಜುಮ್ಕಾ ಧರಿಸಿದ ಇಲಿಯಾನ ಲುಕ್ ವೈರಲ್ ಆಗಿದೆ.

ಟ್ವಟರ್‌ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಅಭಿಷೇಕ್, ದಿ ಬಿಗ್ ಬುಲ್ ಸಿನಿಮಾದಲ್ಲಿ ಇಲಿಯಾನ ಡಿಕ್ರೂಜ ಅವರ ಫಸ್ಟ್ ಲುಕ್ ಇಲ್ಲಿದೆ ನೋಡಿ. ಕ್ರೈಂ ಸಿನಿಮಾ ಶೀಘ್ರದಲ್ಲಿಯೇ ಹಾಟ್‌ಸ್ಟಾರ್‌ನಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.

'ಆದಿಪುರುಷ್‌' ಪೋಸ್ಟರ್ ವೈರಲ್!

ಇಲಿಯಾನ ಕೂಡಾ ಪೋಸ್ಟ್ ಶೇರ್ ಮಾಡಿದ್ದು, ಬಿಗ್ ಬುಲ್ ಸಿನಿಮಾ ಭಾಗವಾಗಿದ್ದಕ್ಕೆ ಖುಷಿ ಇದೆ ಎಂದು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾ ಹಲವಾರು ಆರ್ಥಿಕ ಅಪರಾಧಗಳನ್ನು ಮಾಡಿದ ಸ್ಟಾಕ್ ಬ್ರೋಕರ್ ಹರ್ಷ ಮೆಹ್ತಾ ಬಗ್ಗೆ ಇದೆ ಎನ್ನಲಾಗುತ್ತಿದೆ.