ಬಲಿಯಾ (ಉತ್ತರ ಪ್ರದೇಶ) (ಅ.31):  ಹಲವು ರಾಜಕೀಯ ನಾಯಕರು ಮತ್ತು ಸೆಲೆಬ್ರಿಟಿಗಳ ಜೀವನ ಆಧಾರಿತ ಚಿತ್ರಗಳು ತೆರೆ ಕಂಡಿವೆ. ಇದರ ಸಾಲಿಗೆ ಈಗ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್‌ ಯಾದವ್‌ ಅವರ ಜೀವನ ಆಧಾರಿತ ಚಿತ್ರ ಕೂಡ ಸೇರ್ಪಡೆ ಆಗಲಿದೆ. ಆರ್‌ಜೆಡಿ ಚಿಹ್ನೆ ಆದ ‘ಲಾಟೀನ್‌’ ಶೀರ್ಷಿಕೆಯಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.

ಭೋಜ್‌ಪುರಿ ನಟ ಯಶ್‌ ಕುಮಾರ್‌ ಲಾಲು ಯಾದವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಮೃತಿ ಸಿನ್ಹಾ ಯಾದವ್‌ ಪತ್ನಿ ರಾಬ್ಡೀ ದೇವಿ ಪಾತ್ರ ನಿರ್ವಹಿಸಲಿದ್ದಾರೆ. ಲಾಲು ಪ್ರಸಾದ್‌ ಅವರ ಜೀವನದ ವಿವಿಧ ಆಯಾಮಗಳನ್ನು ಆಸಕ್ತಿಕರ ರೀತಿಯಲ್ಲಿ ಚಿತ್ರ ತೆರೆದಿಡಲಿದೆ. ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಲಾಲು ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬರಿ ದೇವಿ ಪಾತ್ರದಲ್ಲಿ ಸ್ಮೃತಿ ಸಿನ್ಹಾ ಕಾಣಿಸಿಕೊಳ್ಳಲಿದ್ದಾರೆ.

ಲಾಲು ಜೀವನ ಯಾತ್ರೆ

ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್, ರೈಲ್ವೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರೈಲ್ವೆ ಸಚಿವರಾಗಿದ್ದಾಗ ಜಾರಿಗೊಳಿಸಿದ ಕೆಲವು ಪರಿಸರ ಸ್ನೇಹಿ ಯೋಜನೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿವೆ. 1977ರಲ್ಲಿ ಅತ್ಯಂತ ಕಿರಿಯ ಸಂಸದನಾಗಿ ಆಯ್ಕೆಯಾದ ಲಾಲು ವಿದ್ಯಾರ್ಥಿ ಜೀವನದಲ್ಲಿಯೇ ರಾಜಕೀಯವಾಗಿ ಸಕ್ರಿಯವಾಗಿದ್ದವರು. 

ಲಾಲು ಆರೋಗ್ಯ ಸ್ಥಿತಿ ಕ್ಷೀಣ

ಹಲವಾರು ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಲಾಲು ವಿರುದ್ಧ ಸಿಬಿಐ ಹಲವು ಪ್ರಕರಣಗಳನ್ನು ದಾಖಲಿಸಿದ್ದು, ಮೇವು ಹಗರಣದಿಂದ ಇದೀಗ ಜೈಲು ವಾಸ ಅನುಭವಿಸುತ್ತಿದ್ದಾರೆ. ಪತ್ನಿ ರಾಬರಿ ದೇವಿಯೂ ಲಾಲು ಅನುಪಸ್ಥಿತಿಯಲ್ಲಿ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದು, ಇವರ ಇಬ್ಬರು ಪುತ್ರರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. 

ಎಲ್‌ಎಲ್‌ಬಿ ಪದವೀಧರರಾಗಿರುವ ಲಾಲು ಪಾಟ್ನಾ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಪಾಟ್ನಾದ ವೆಟರಿನರಿ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸಿದ್ದಾರೆ ಲಾಲು. ರಾಬಡಿ ದೇವಿಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಲಾಲು ಪ್ರಸಾದ್ ಯಾದವ್‌ಗೆ ಏಳು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬರಲ್ಲಿ ತೇಜ್ ಪ್ರತಾಪ್ ಯಾದವ್ ಬಿಹಾರದ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರೆ, ತೇಜಸ್ವಿ ಪ್ರತಾಪ್ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದರು. ಇವರು ಕ್ರಿಕೆಟಿಗರೂ ಹೌದು. ಆರ್‌ಜೆಡಿಯಿಂದ ಮಗಳು ಮೀಸಾ ಭಾರತಿ ರಾಜ್ಯ ಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. 

ಆಡ್ವಾಣಿಯನ್ನು ಬಂಧಿಸಿದ ಲಾಲು: ಫೋಟೋ ಏಕಿಲ್ಲ?

ಜಿಡೆಯುನ ನಿತೀಶ್ ಕುಮಾರ್ ಅವರೊಂದಿಗೆ ಕೈ ಜೋಡಿಸಿದ್ದ ಲಾಲುಗೆ ಇದೀಗ ನಿತೀಶ್ ಅವರೇ ರಾಜಕೀಯ ಎದುರಾಳಿ.