ರಾಂಚಿ (ಸೆ. 01): ಇಲ್ಲಿನ ರಿಮ್ಸ್‌ ನಲ್ಲಿಚಿಕಿತ್ಸೆ ಪಡೆಯುತ್ತಿರುವ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್‌ ಆರೋಗ್ಯ ತೀವ್ರ ಬಿಗಡಾಯಿಸಿದೆ ಎಂದು ಆಸ್ಪತ್ರೆ ಹೇಳಿದೆ. ಶನಿವಾರ ಲಾಲೂ ಆರೋಗ್ಯದ ಕುರಿತು ರಿಮ್ಸ್‌ ವೈದ್ಯಕೀಯ ಪ್ರಕಟಣೆ ಹೊರಡಿಸಿದ್ದು, ಮೈಮೇಲಿದ್ದ ಬಾವು ದೊಡ್ಡ ಗಾಯವಾಗಿ ಪರಿವರ್ತನೆ ಹೊಂದಿದ್ದು, ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಅಲ್ಲದೇ ಲಾಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದ್ದು, ರಕ್ತದ ಸೋಂಕು ಹೆಚ್ಚಾಗಿ ರಕ್ತದೊತ್ತಡ ಕಡಿಮೆಯಾಗಿದೆ. ಕಿಡ್ನಿ ಸೋಂಕು ಕೂಡ ಉಂಟಾಗಿದ್ದು, ಶೇ.37 ರಷ್ಟುಮಾತ್ರ ಮೂತ್ರಪಿಂಡ ಕಾರ್ಯ ನಿರ್ವಹಿಸುತ್ತಿದೆ. ಭಾರೀ ಅನಾರೋಗ್ಯದಿಂದ ನಡೆಯಲೂ ಕೂಡ ಅಸಾಧ್ಯವಾಗಿದ್ದು, ವೈದ್ಯರು ಲಾಲೂ ಆರೋಗ್ಯದ ಮೇಳೆ ನಿಗಾ ವಹಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಬಹುಕೋಟಿ ಮೇವು ಹಗರಣದಲ್ಲಿ ದೋಷಿಯಾಗಿರುವ ಲಾಲೂ ಜಾಮೀನಿನ ಮೇಲೆ ಹೊರಗಿದ್ದಾರೆ.