Asianet Suvarna News Asianet Suvarna News

ಹುಡುಗರು ತಮ್ಮ D***ನೇರಕ್ಕೆ ಯೋಚಿಸುತ್ತಾರೆ: ಅಶ್ಲೀಲ ಪದ ಬಳಸಿದ ಉರ್ಫಿ, ಹೇಳಿಕೆ ವೈರಲ್!

ಗಂಡಸರು ಯೋಚನೆ ಮಾಡುವ ರೀತಿ ತುಂಬಾ ವಿಭಿನ್ನವಾಗಿರುತ್ತದೆ. ಹೆಣ್ಣು ಮಕ್ಕಳು ನನ್ನ ಜೊತೆ ಮಾತನಾಡಲು ಹೆದರಿಕೊಳ್ಳುತ್ತಾರೆ ಎಂದು ಉರ್ಫಿ. 

Bigg Boss Urfi Javed talks about ban and men mindset vcs
Author
First Published Jun 15, 2023, 1:31 PM IST | Last Updated Jun 15, 2023, 1:31 PM IST

ಬಾಲಿವುಡ್ ಸ್ಟೈಲ್ ಕ್ರಿಯೇಟರ್, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಮೊದಲ ಸಲ ತಮಗೆ ಬೇಸರ ಮಾಡುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಪದೇ ಪದೇ ಟ್ರೋಲ್‌ಗೆ ಗುರಿಯಾಗುವ ನಟಿ ಬೇಸರ ಮಾಡಿಕೊಳ್ಳುತ್ತಾರಾ? ಜನರು ಬ್ಯಾನ್ ಎಂದು ಹೇಳುವುದಕ್ಕೆ ಹೇಗೆ ಅನಿಸುತ್ತದೆ? ಗಂಡಸರು ಯಾವ ರೀತಿ ಯೋಚನೆ ಮಾಡುತ್ತಾರೆಂದು ಉರ್ಫಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

'ಗಂಡಸರು ತಲೆ ಬಳಸಿ ಯೋಚನೆ ಮಾಡುವುದಿಲ್ಲ ಮೊದಲು ತಮ್ಮ D*** ನೇರ ಯೋಚನೆ ಮಾಡುತ್ತಾರೆ ಆನಂತರ ತಲೆ ಬಳಸುತ್ತಾರೆ. ಎಲ್ಲಾ ಗಂಡಸರು ಒಂದೇ ರೀತಿ ಎಂದು ನಾನು ಹೇಳುವುದಿಲ್ಲ ಆದರೆ ಕೆಲವು ಹಾಗೆ ಇರುವುದು ಅಂತವರನ್ನು ನಾನು ಭೇಟಿ ಮಾಡಿರುವೆ. ಪ್ರತಿಯೊಬ್ಬರು ಸೇಮ್ ಆಲ್ಲ. ಒಂದು ವಯಸ್ಸಿನವರೆಗೂ **** ನೇರ ಯೋಚನೆ ಮಾಡುತ್ತಾರೆ ಆನಂತರ ಜವಾಬ್ದಾರಿಗಳು ಅವರನ್ನು ಬದಲಾಯಿಸುತ್ತದೆ. ಗಂಡಸರಲ್ಲಿ ಕೆಲವರು 50 ವರ್ಷಕ್ಕೆ ದೊಡ್ಡವರಾಗುತ್ತಾರೆ ಕೆಲವರು 13 ವರ್ಷಕ್ಕೆ ದೊಡ್ಡವರಾಗುತ್ತಾರೆ. ನಾನು ಏನೇ ಮಾಡಿದ್ದರೂ ಅದನ್ನು ವೈರಲ್ ಮಾಡಿ ನನ್ನನ್ನು ಕ್ಯಾನ್ಸಲ್ ಮಾಡಲು ಮುಂದಾಗುತ್ತಾರೆ. ಆರಂಭದಲ್ಲಿ ಉರ್ಫಿ ಮಾಡಿರುವುದನ್ನು ಕ್ಯಾನ್ಸಲ್ ಮಾಡಿ ಎನ್ನುತ್ತಾರೆ ಆನಂತರ ಉರ್ಫಿನಾ ಬ್ಯಾನ್ ಮಾಡಿ ಎನ್ನುತ್ತಾರೆ. ಎಲ್ಲಿಂದ ನನ್ನನ್ನು ಬ್ಯಾನ್ ಮಾಡುತ್ತೀರಾ ಅನ್ನೋದು ನನ್ನ ಪ್ರಶ್ನೆ. ನನ್ನ ಮನೆಯಿಂದಲೇ ನನ್ನನ್ನು ಬ್ಯಾನ್ ಮಾಡಬೇಕಾ ನೀವು?  ಬ್ಯಾನ್ ಉರ್ಫಿ ಅನ್ನೋದೇ ಒಂದು ದೊಡ್ಡ ಟ್ರೆಂಡ್ ಆಗಿದೆ. ಈ ರೀತಿ ಬ್ಯಾನ್ ಕ್ಯಾನ್ಸಲ್‌ ಟ್ರೋಲ್ ಮಾಡುವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ರಣವೀರ್ ಯುಟ್ಯೂಬ್ ಸಂದರ್ಶನದಲ್ಲಿ ಉರ್ಫಿ ಮಾತನಾಡಿದ್ದಾರೆ.

ನನ್ನನ್ನು 'ಆ' ರೀತಿ ನೋಡ್ತಾರೆ, ಒಬ್ಬ ಹುಡ್ಗನೂ ಧೈರ್ಯ ಮಾಡಿಲ್ಲ: ಉರ್ಫಿ ಜಾವೇಜ್ ಕೆರಳಿಸುವ ಹೇಳಿಕೆ ವೈರಲ್!

ಏನಾದರೂ ಒಂದು ಆರ್ಟಿಕಲ್ ಓದಿದರೆ ಮಾತ್ರ ನನಗೆ ಬೇಸರ ಆಗುವುದು. 6 ತಿಂಗಳಿನಲ್ಲಿ ಕೇವಲ ಒಂದೆರಡು ದಿನ ಬೇಸರ ಆಗುತ್ತದೆ. ಒಂದೊಂದು ತಿಂಗಳು ಬೇಸರ ಇರುತ್ತದೆ ಆಮೇಲೆ ನನ್ನ ಇನ್‌ಸ್ಟಾಗ್ರಾಂ ನೋಡಿ ಗುರು ನನಗೆ ಬೇಕಿರುವುದು ಹೆಸರು ಅದು ಸಿಗುತ್ತಿದೆ ಎಂದು ಖುಷಿ ಪಡುವೆ. ಫೇಮ್‌ ಗಳಿಸುವುದು ಅಷ್ಟೆ ನನ್ನ ಗುರಿ. ಬಾಲ್ಯದಿಂದ ನನಗೆ ಸರಿಯಾಗಿ ಅಟೆನ್ಶನ್‌ ಸಿಕ್ಕಿಲ್ಲ ನನ್ನ ಬಳಿ ಹಣ ಇರಲಿಲ್ಲ ..ಈಗ ನನಗೆ ಅದೆಲ್ಲಾ ಬೇಕು. ಜನರು ಓಡಿ ಬಂದು ಸೆಲ್ಫಿ ಕೇಳಿದಾಗ ಖುಷಿಯಾಗುತ್ತದೆ ಎಂದು ಉರ್ಫಿ ಹೇಳಿದ್ದಾರೆ.

ಉರ್ಫಿ ಗೊಂಬೆಗಳ ಜಾಕೆಟ್; ಕಿತ್ತುಕೊಳ್ಳಲು ನಾ ಮುಂದು ತಾ ಮುಂದು ಎಂದ ಮಕ್ಕಳು

ಬೇಸರ ಆದರೆ ಅದು ಟ್ರೋಲ್‌ಗಳಿಂದ ಹೊರತು ಮತ್ತೇನು ಅಲ್ಲ. ಮಹಿಳೆ ಆಗಿರುವುದಕ್ಕೆ ಈಕೆಗೆ ಅರ್ಹತೆ ಇಲ್ಲ  ನನ್ನಿಂದ ಅನೇಕರು ತಪ್ಪು ದಾರಿ ಹಿಯುತ್ತಿದ್ದಾರೆ. ಕೆಲವೊಂದು ಟ್ರೋಲ್‌ಗಳು ನನ್ನ ಬಗ್ಗೆ ಕೆಟ್ಟ ಕಾಮೆಂಟ್ ಮಾಡುತ್ತಾರೆ ಆ ರೀತಿ ಮಹಿಳೆ ಎನ್ನುತ್ತಾರೆ. ನಾನು ಮಾಡಿರುವುದು ಎಲ್ಲಾ ಮಾಡಿರುವೆ. ಏನು ಮಾಡಿದ್ದೀನಿ ಅದು ಇಂಟರ್‌ನೆಟ್‌ನಲ್ಲಿ ಉಳಿಯುತ್ತದೆ ಅದರಲ್ಲಿ ತಪ್ಪೇನು? ನಾನು ಯೋಚನೆ ಮಾಡಿ ಪ್ಲ್ಯಾನ್ ಮಾಡಿನೇ ದಾರಿ ಆಯ್ಕೆ ಮಾಡಿಕೊಂಡಿರುವುದು. ಕೆಲವೊಮ್ಮೆ ನನ್ನನ್ನು ಯಾರು ಮದುವೆ ಮಾಡಿಕೊಳ್ಳುವುದಿಲ್ಲ ಹಾಗೆ ಹೀಗೆ ಅನಿಸುತ್ತದೆ. ಕೆಲವೊಮ್ಮೆ ಹೆಣ್ಣುಮಕ್ಕಳು ನನ್ನ ಆಯ್ಕೆ ಇಷ್ಟ ಪಡುತ್ತಾರೆ ಆದರೆ ಕೆಲವೊಮ್ಮೆ ನೆಗೆಟಿವ್ ಮಾತನಾಡಿ ಹೋಗುತ್ತಾರೆ ಎಂದಿದ್ದಾರೆ ಉರ್ಫಿ. 

Latest Videos
Follow Us:
Download App:
  • android
  • ios