ಒಟಿಟಿಯಲ್ಲಿ ಬಿಗ್‌ಬಾಸ್ ಶೋ ಪ್ರದರ್ಶನ ಸಲ್ಮಾನ್ ಖಾನ್ ಅಲ್ಲ, ಕರಣ್ ಜೋಹರ್ ಹೋಸ್ಟ್

ಟೆಲಿವಿಷನ್‌ನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮೊದಲ ಬಾರಿಗೆ ಒಟಿಟಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಆದರೆ ಚಾನೆಲ್‌ನಲ್ಲಿ ಅಲ್ಲ.

ಮೊದಲ ಆರು ವಾರಗಳವರೆಗೆ ಈ ಕಾರ್ಯಕ್ರಮವನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ನಡೆಸಿಕೊಲಿದ್ದಾರೆ. ಕಾಫಿ ವಿತ್ ಕರಣ್ ಹೋಸ್ಟ್ ಕರಣ್ ಜೋಹರ್ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ.

ಸಂಜಯ್ ದತ್ ಅವರ ಮುಂಬೈನ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

ವೂಟ್ ಇತ್ತೀಚೆಗೆ ಬಿಗ್ ಬಾಸ್ ಒಟಿಟಿಯ ಪ್ರಥಮ ಪ್ರದರ್ಶನವನ್ನು ಘೋಷಿಸಿದೆ. ಈ ಬಹು ನಿರೀಕ್ಷಿತ ರಿಯಾಲಿಟಿ ಶೋನ ಮೊದಲ ಆರು ವಾರಗಳು ಅಭಿಮಾನಿಗಳಿಗೆ 24X7 ಶೋ ವೀಕ್ಷಿಸಬಹುದು. ಈ ಶೋ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ.

ಸಲ್ಮಾನ್ ಖಾನ್ ಅವರ ಏಕೈಕ ಪ್ರೋಮೋ ಬಿಡುಗಡೆಯೊಂದಿಗೆ ನಿರೀಕ್ಷೆಯು ಎರಡು ಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ತನ್ನ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಿದರು.

View post on Instagram

ಅಲ್ಲಿ ಸಲ್ಮಾನ್ ಖಾನ್ ಸಂತೋಷದಿಂದ ಕುಣಿಯೋದನ್ನು ನಾವು ನೋಡಬಹುದು. ಅವರು ಘೋಷಿಸಿದಂತೆ ಪ್ರೇಕ್ಷಕರಿಗೆ ಇದುವರೆಗೆ ಅತ್ಯಂತ ಕ್ರೇಜಿಯಸ್, ಅತ್ಯಂತ ಸಂವೇದನಾಶೀಲ ಕಂತುವನ್ನು ನೋಡಲು ಸಜ್ಜಾಗುವಂತೆ ಸೂಚಿಸಿದ್ದಾರೆ.

View post on Instagram