Asianet Suvarna News Asianet Suvarna News

ಹೊಸ ಗೆಳೆಯ, ಹೊಸ ನಗು: ಶಿಲ್ಪಾ ಶೆಟ್ಟಿ ತಂಗಿ ಶಮಿತಾರ ಡಿನ್ನರ್ ಡೇಟ್

  • ಬಾಲಿವುಡ್‌ ನಟಿ ಶಮಿತಾ ಶೆಟ್ಟಿ ಡಿನ್ನರ್ ಡೇಟ್
  • ಶಿಲ್ಪಾ ಶೆಟ್ಟಿ ತಂಗಿಗೆ ಹೊಸ ಬಾಯ್‌ಫ್ರೆಂಡ್
  • ರಾಕೇಶ್ ಬಪತ್ ಜೊತೆ ರೊಮ್ಯಾಂಟಿಕ್ ಡಿನ್ನರ್
Bigg Boss OTT couple Shamita Shetty Raqesh Bapat step out for first date dpl
Author
Bangalore, First Published Sep 25, 2021, 1:07 PM IST
  • Facebook
  • Twitter
  • Whatsapp

ತಮ್ಮ ಕೆಮೆಸ್ಟ್ರಿಯಿಂದಲೇ ಬಿಗ್‌ಬಾಸ್ ಒಟಿಟಿ(OTT) ಮನೆಯಲ್ಲಿ ಸುದ್ದಿಯಾದ ನಟಿ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಪತ್ ಮನೆಯ ಹೊರಗೂ ತಮ್ಮ ಸಂಬಂಧವನ್ನು ಕಂಟಿನ್ಯೂ ಮಾಡಿದ್ದಾರೆ. ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದುಕೊಂಡು ಸುದ್ದಿಯಾಗಿದ್ದ ಜೋಡಿ ಈಗ ರೊಮ್ಯಾಂಟಿಕ್ ಡಿನ್ನರ್ ಮೂಲಕ ಸುದ್ದಿಯಾಗಿದ್ದಾರೆ.

Bigg Boss OTT couple Shamita Shetty Raqesh Bapat step out for first date dpl

ಕಳೆದ ವಾರ ಬಿಗ್ ಬಾಸ್(Biggboss) ಒಟಿಟಿ ಮನೆಯಿಂದ ಹೊರಬಂದ ನಂತರ ಮೊದಲ ಬಾರಿಗೆ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಪತ್ ಶುಕ್ರವಾರ ನೈಟ್‌ ಡೇಟ್‌ಗಾಗಿ ಹೊರಗೆ ಬಂದಿದ್ದಾರೆ. ತನ್ನ ಮತ್ತು ಶಮಿತಾ ಕೈ ಹಿಡಿದಿರುವ ಫೋಟೋವನ್ನು ರಾಕೇಶ್ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಶೇರ್ ಮಾಡಿದ್ದಾರೆ.

ಮೊದಲ ಬಾಯ್‌ಫ್ರೆಂಡ್ ಆ್ಯಕ್ಸಿಡೆಂಟ್‌ನಲ್ಲಿ ಸಾವು: ನೆನೆದು ಕಣ್ಣೀರಿಟ್ಟ ಶಮಿತಾ

ಫೋಟೋವನ್ನು ಶೇರ್ ಮಾಡಿದ ರಾಕೇಶ್ ಯು & ಮಿ ಎಂದು ಬರೆದಿದ್ದಾರೆ. ಅವರ ಅಭಿಮಾನಿಗಳು ರಚಿಸಿದ ಜನಪ್ರಿಯ ಅಡ್ಡ ಹೆಸರಿನೊಂದಿಗೆ ಹೃದಯ ಎಮೋಜಿಯನ್ನು ಸೇರಿಸಿ ಶಾರಾ ಎಂದು ಪೋಸ್ಟ್ ಮಾಡಿದ್ದರು. ಫೋಟೋದಲ್ಲಿ ಅವರ ಊಟದ ಟೇಬಲ್ ಬಳಿ ವೈನ್ ಗ್ಲಾಸ್ ಮತ್ತು ಕೆಲವು ಚಾಪ್‌ಸ್ಟಿಕ್‌ಗಳನ್ನು ತೋರಸಿದೆ.

Bigg Boss OTT couple Shamita Shetty Raqesh Bapat step out for first date dpl

ರೆಸ್ಟೋರೆಂಟ್ ಹೊರಗಡೆ ಹೆಚ್ಚಿನ ಪಾಪರಾಜಿಗಳಿದ್ದು  ಅವರು ಒಟ್ಟಿಗೆ ಪೋಸ್ ನೀಡಿದಾಗ ಕ್ಯಾಮೆರಾ ನೋಡಿ ಸ್ಮೈಲ್ ಮಾಡಿದ್ದಾರೆ. ಶಮಿತಾ ಬ್ಲಶ್ ಪಿಂಕ್ ಟಾಪ್ ಮತ್ತು ಸ್ಕರ್ಟ್ ಕಾಂಬೊ ಧರಿಸಿದ್ದರೆ, ರಾಕೇಶ್ ನೀಲಿ ಜೀನ್ಸ್ ನ ಕಪ್ಪು ಶರ್ಟ್ ಧರಿಸಿದ್ದರು. ಪಾಪರಾಜಿ ತಮ್ಮ ಫೊಟೋ ಕ್ಲಿಕ್ ಮಾಡಿದಂತೆ, ಜೋಡಿ ಒಬ್ಬರನ್ನೊಬ್ಬರು ನೋಡಿ ಮುಗುಳ್ನಕ್ಕಿದ್ದಾರೆ. ರಾಕೇಶ್ ಮತ್ತು ಶಮಿತಾ ಆಗಸ್ಟ್ ನಲ್ಲಿ ಬಿಗ್ ಬಾಸ್ ಒಟಿಟಿ ಮನೆಯೊಳಗೆ ಭೇಟಿಯಾದರು.

 
 
 
 
 
 
 
 
 
 
 
 
 
 
 

A post shared by Chipku Media (@chipkumedia)

Follow Us:
Download App:
  • android
  • ios