ಬಿಗ್ ಬಾಸ್ ಸ್ಪರ್ಧಿ, ನಟಿ ತೀವ್ರ ಅಸ್ವಸ್ಥಗೊಂಡು ಸಿನಿಮಾ ಶೂಟಿಂಗ್‌ನಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ತಕ್ಷಣ ಅವರಿಗೆ ವೈದ್ಯಕೀಯ ನೆರವು ನೀಡಿದರೂ ಆತಂಕ ಹೆಚ್ಚಾಗಿತ್ತು.  

ಭೋಪಾಲ್(ಮಾ.08) ಬಿಗ್ ಬಾಸ್ ಮೂಲಕ ಭಾರಿ ಸದ್ದು ಮಾಡಿರುವ ನಟಿ ಸಿನಿಮಾ ಶೂಟಿಂಗ್‌ನಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಶೂಟಿಂಗ್ ನಡೆಯುತ್ತಿದ್ದ ವೇಳೆ ಅಸ್ವಸ್ಥಗೊಂಡ ನಟಿ ಕುಸಿದು ಬಿದ್ದ ಘಟನೆ ನಡೆದಿದೆ. ಕಪಿಲ್ ಶರ್ಮಾ ಅವರ ಕಿಸ್ ಕಿಸ್‌ಕೋ ಪ್ಯಾರ್ ಕರೋ 2 ಚಿತ್ರದ ಶೂಟಿಂಗ್‌ನಲ್ಲಿ ಈ ಘಟನೆ ನಡೆದಿದೆ. ಹಿಂದಿ ಬಿಗ್ ಬಾಸ್ 17ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಸ್ಪರ್ಧಿ ಆಯೇಷಾ ಖಾನ್ ಆರೋಗ್ಯದಲ್ಲಿ ಏರುಪೇರಾಗಿದೆ. ಘಟನೆ ವಿಡಿಯೋ ಆತಂಕ ಹೆಚ್ಚಿಸಿದೆ. 

ಕಿಸ್ ಕಿಸ್‌ಕೋ ಪ್ಯಾರ್ ಕರೋ 2 ಸಿನಿಮಾದಲ್ಲಿ ಕಾಮಿಡಿಯನ್ ಕಪಿಲ್ ಶರ್ಮಾ ಬ್ಯೂಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭೋಪಾಲ್‌ನಲ್ಲಿ ನಡೆಯುತ್ತಿದೆ. ಶೂಟಿಂಗ್ ಲೋಕೇಶನ್‌ ಈ ವಿಡಿಯೋ ಇದೀಗ ಸಂಚಲನ ಸೃಷ್ಟಿಸಿದೆ. ಕಪಿಲ್ ಶರ್ಮಾ ಜೊತೆ ನಟಿಸುತ್ತಿರುವ ಆಯೇಷಾ ಖಾನ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೋದಲ್ಲಿ ಸಹ ನಟ ನಟಿಯರು ಆಯೇಷ ಖಾನ್‌ಗೆ ವೈದ್ಯಕೀಯ ನೆರವು ನೀಡುತ್ತಿರುವ ದೃಶ್ಯವಿದೆ. 

ಎಲ್ರಿಗೂ ನಾನು ಸಿಕ್ತೀನಿ ಅಂತ ಹೇಳಿ ಅಡ್ರೆಸ್‌ ಕೊಟ್ಟ ನಟಿ

ಶೂಟಿಂಗ್ ಟೈಮ್‌ನಲ್ಲಿ ಬಿದ್ದೋದ್ರು ಆಯೇಷಾ ಖಾನ್
ಭೋಪಾಲಿ ಪಾಯಿಂಟ್ಸ್ ಇನ್‌ಸ್ಟಾಗ್ರಾಮ್ ಪೇಜ್‌‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆಯೇಷಾ ಖಾನ್ ಶೂಟಿಂಗ್ ವೇಳೆ ಕುಸಿದು ಬಿದ್ದಿದ್ದಾರೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಆಯೇಷಾ ಚೇರ್ ಮೇಲೆ ಕುಳಿತಿದ್ದಾರೆ. ಅವರ ತಂಡ, ಸಿನಿಮಾ ತಂಡ ಅವರಿಗೆ ನೆರವು ನೀಡುತ್ತಿರುವ ದೃಶ್ಯವಿದೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಯೇಷಾ ಖಾನ್ ಟ್ರೋಲ್ ಆಗಿದ್ದಾರೆ. 

View post on Instagram

ಆಯೇಷಾ ಖಾನ್ ಟ್ರೋಲ್
ಆಯೇಷಾ ಆರೋಗ್ಯ, ತೀವ್ರ ಅಸ್ವಸ್ಥತೆಯಿಂದ ಕುಸಿದು ಬಿದ್ದಿದ್ದಾರೆ ಎಂದು ವಿಡಿಯೋ ಹೇಳುತ್ತಿದೆ. ಆದರೆ ನೆಟ್ಟಿಗರು ಇದು ಶೂಟಿಂಗ್ ಸೆಟ್‌ನಲ್ಲಿ ನಡೆಯುವ ಸಾಮಾನ್ಯ ನಾಟಕ ಎಂದಿದ್ದಾರೆ. ವಿಡಿಯೋ ವೈರಲ್ ಆಗಲು, ಸಿನಿಮಾಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಈ ಪ್ರಯತ್ನಗಳು ನಡೆಯುತ್ತಿದೆ. ಆದರೆ ಈ ನಾಟಕದಲ್ಲಿ ಆಯೇಷಾ ಖಾನ್ ನಟನೆ ಸಾಲದು ಎಂದು ಹಲವರು ಕಮೆಂಟ್ ಮಾಡಿದ್ದಾರೆ.ಈ ನಾಟ ಬಿಗ್‌ಬಾಸ್‌ನಲ್ಲಿ ಪ್ರತಿ ದಿನ ನಡೆಯುತ್ತಿತ್ತು. ಇದೀಗ ಬಹಳ ದಿನಗಳ ಬಳಿಕ ಮತ್ತೆ ಆಯೇಷ ಖಾನ್‌ಗೆ ಮತ್ತೊಂದು ಅವಕಾಶ ಒದಗಿ ಬಂದಿದೆ ಎಂದಿದ್ದಾರೆ. ಇದೇ ವೇಳೆ ಮತ್ತೆ ಹಲವರು ಲೋ ಬಿಪಿ ಸಮಸ್ಯೆ ಆಗಿರಬಹುದು. ಸದ್ಯದ ಬಿಸಿಲು, ತಾಪಮಾನಕ್ಕೆ ಎಷ್ಟೇ ಆರೋಗ್ಯವಂತರಾಗಿದ್ದರೂ ಆಸ್ವಸ್ಥರಾಗುವ ಸಾಧ್ಯತೆ ಇದೆ ಎಂದಿದ್ದಾರೆ. 

ಕಪಿಲ್ ಶರ್ಮಾ ಅವರ ಹೀರೋಯಿನ್ ಆಯೇಷಾ ಖಾನ್ ಯಾರು?
22 ವರ್ಷದ ಆಯೇಷಾ ಖಾನ್ 2020ರಿಂದ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಸಕ್ರಿಯವಾಗಿದ್ದಾರೆ. ಏಕ್ತಾ ಕಪೂರ್ ಅವರ 'ಕಸೌಟಿ ಜಿಂದಗಿ ಕಿ' ಶೋನಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಆಮೇಲೆ ಅವರು 'ಬಾಲ್‌ವೀರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆಯೇಷಾ ಖಾನ್ 'ಬಿಗ್ ಬಾಸ್'ನ 17ನೇ ಸೀಸನ್‌ನಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದರು. ತೆಲುಗು ಸಿನಿಮಾಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಆಯೇಷಾ ಖಾನ್, ಹಿಂದಿಯಲ್ಲಿ ದಿ ಘೋಸ್ಟ್, ಜಾಟ್ ಸೇರಿದಂತೆ ಕೆಲ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

'ಡ್ರೆಸ್‌ ಅಡ್ಜಸ್ಟ್‌ ಮಾಡ್ಕೊಂಡ್ರೂ ಜೂಮ್‌ ಮಾಡ್ತೀರಲ್ಲ..' ಪಾಪರಾಜಿ ವಿರುದ್ಧ ಬಿಗ್‌ಬಾಸ್‌ ಸ್ಪರ್ಧಿ ಕೆಂಡಾಮಂಡಲ!