ಎಲ್ರಿಗೂ ನಾನು ಸಿಕ್ತೀನಿ ಅಂತ ಹೇಳಿ ಅಡ್ರೆಸ್ ಕೊಟ್ಟ ನಟಿ
ಆಯೇಷಾ ಖಾನ್ ಯಾರಿಗೆ ಗೊತ್ತಿಲ್ಲ. ತನ್ನ ಮೈಮಾಟದ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ನಟಿ, ಈಗ ಓಂ ಭೀಮ್ ಬುಷ್ ಸಿನಿಮಾದ ಮೂಲಕ ತೆಲುಗು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ನಟಿ ಆಯೇಷಾ ಖಾನ್ ಹೊಸ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚೆಬ್ಬಿಸಿದ್ದಾರೆ. ಬಿಳಿ ಸೀರೆಯುಟ್ಟು ಅವರು ಪೋಸ್ಟ್ ಮಾಡಿರುವ ಫೋಟೋಗಳು ಬಹಳ ಮಾದಕವಾಗಿವೆ.
ಬಿಳಿ ಸೀರೆಯುಟ್ಟು ಆಕೆ ಒಟ್ಟು ಐದು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.'ನಿಮ್ಮೆಲ್ಲರಗೂ ನಾನು ಕನಸಿನಲ್ಲಿ ಸಿಗ್ತೇನೆ..' ಎಂದು ಅವರು ಕ್ಯಾಪ್ಠನ್ ಹಾಕಿದ್ದಾರೆ.
ತಮ್ಮ ಮೈಮಾಟದ ಕಾರಣದಿಂದಾಗಿ ಆಯೇಷಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಕರ್ಷಕ ಬಿಳಿ ಬಣ್ಣದ ಸೀರೆ ಹಾಗೂ ಅದಕ್ಕೆ ಒಪ್ಪುವಂತ ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಆಕೆ ಪೋಸ್ಟ್ ಮಾಡಿರುವ ಫೋಟೋಗಳನ್ನು ಕಂಡು ಅಭಿಮಾನಿಗಳು ಬಹಳ ಮೆಚ್ಚಿದ್ದಾರೆ.
ಅದಕ್ಕೆ ಆಕೆ ಧರಿಸಿರುವ ನಕ್ಲೇಸ್‌ಗಳು ಹಾಗೂ ಕಿವಿಯೋಲೆಗಳು ಅಂದವನ್ನು ಹೆಚ್ಚಿಸಿವೆ. ಹೈ ಬನ್ ಕಟ್ಟಿರುವ ಆಕೆ, ಬ್ರೌನ್ ಲಿಪ್‌ಸ್ಟಿಕ್ ಹಾಗೂ ಬ್ಲ್ಯಾಕ್ ಮಸ್ಕರಾ ಧರಿಸಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಮಾದಕ ನಟನೆಯ ಕಾರಣದಿಂದಾಗಿ ಕೆಲವೇ ದಿನಗಳಲ್ಲಿಯೇ ಆಯೇಷಾ ಖಾನ್ ಟಾಲಿವುಡ್‌ನ ಹಾಟ್ ನಟಿ ಎನಿಸಿಕೊಂಡಿದ್ದಾರೆ. ಪರದೆಯ ಮೇಲೆ ಈಕೆ ಬರೋದನ್ನು ಪ್ರೇಕ್ಷಕರು ಮೊದಲ ಸಿನಿಮಾದಲ್ಲಿಯೇ ಮೆಚ್ಚಿದ್ದಾರೆ.
ಓಂ ಭೂಮ್ ಬುಶ್ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದರೂ, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ತಮ್ಮ ಮುಂದಿನ ಸಿನಿಮಾ ಮನ್‌ಮೇಯ್‌ನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ತನ್ನ ನೋಟ ಹಾಗೂ ಚರಿಷ್ಮಾದ ಕಾರಣದಿಂದಾಗಿಯೇ ಖ್ಯಾತಿಯನ್ನು ಪಡೆದಿರುವ ಅಯೇಷಾ, ಬೆಳ್ಳಿಪರದೆಯಲ್ಲಿ ಸಣ್ಣ ಪಾತ್ರಗಳ ಮೂಲಕವೇ ಈವರೆಗೂ ಪ್ರೇಕ್ಷಕರಿಗೆ ಪರಿಚಿತವಾಗಿದ್ದಾರೆ.
ಬಿಗ್‌ಬಾಸ್ 17ನಲ್ಲಿ ಭಾಗವಹಿಸಿದ್ದ ಆಯೇಷಾ ಖಾನ್, ಅಲ್ಲಿ ಮುನಾವರ್ ಜೊತೆಗಿನ ಆತ್ಮೀಯ ಸ್ನೇಹದ ಕಾರಣದಿಂದಾಗಿಯೇ ಸುದ್ದಿಯಲ್ಲಿದ್ದರು.
ಇತ್ತೀಚೆಗೆ ಟಾಲಿವುಡ್‌ನ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದಲ್ಲಿ ಆಯೇಷಾ ಖಾನ್ ಅವರ ಐಟಂ ಡಾನ್ಸ್ ಸಾಕಷ್ಟು ಸ್ದದು ಮಾಡಿತ್ತು.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ವಿಚಾರ ಹಾಗೂ ರಿಲೇಷನ್‌ಷಿಪ್‌ಗಳ ಬಗ್ಗೆ ಅವರು ಬಹಳ ಮುಕ್ತವಾಗಿ ಮಾತನಾಡುತ್ತಾರೆ.