ಹಿಂದಿ ಬಿಗ್ ಬಾಸ್ ಸೀಸನ್ 13ರ ಖ್ಯಾತಿಯ ಕಿರುತೆರೆ ನಟಿ ರಶ್ಮಿ ದೇಸಾಯಿ ಹೊಸ ಕಾರು ಖರೀಸಿದ್ದಾರೆ. ಅಷ್ಟೇ ಅಲ್ಲ ಕಾರನ್ನು ತಮ್ಮ ರಥ ಎಂದೂ ಕರೆದಿದ್ದಾರೆ. ಲಕ್ಷುರಿ ಕಾರ್ ತೆಗೆದುಕೊಂಡ ನಟಿ ಕಾರಿನೊಂದಿಗಿನ ತಮ್ಮ ಫೋಟೋ ಶೇರ್ ಮಾಡಿದ್ದಾರೆ. ರಶ್ಮಿ ಫ್ರೆಂಡ್ ಮೃನಾಲ್ ಜೈನ್ ಕೂಡಾ ರಶ್ನಿ ಮತ್ತು ಹೊಸ ಕಾರಿನ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಶುಭಾಶಯಗಳು ಎಂದು ತಿಳಿಸಿದ್ದಾರೆ.

ರಶ್ಮಿ ದೇಸಾಯಿಯ ಮ್ಯಾನೇಜರ್ ಮತ್ತು ಫ್ರೆಂಡ್ ನಿಧಿ, ಯಾಯ್.. ಹೊಸ ಕಾರಿಗಾಗಿ ಕಂಗ್ರಾಚುಲೇಷನ್ಸ್ ರಶು. ಹ್ಯಾಪಿ ಫಾರ್ ಎಂದು ಬರೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾರಿನ ಫೋಟೋ ಶೇರ್ ಮಾಡುತ್ತಲೇ ಇದ್ದ ನಟಿ ಕಾರು ಖರೀದಿಸಿರುವುದು ಈಗ ತಿಳಿದುಬಂದಿದೆ. ಸದ್ಯ ರಶ್ಮಿ ಸುಂದರ ಕಾರಿನ ಒಡತಿ.

ರಶ್ಮಿ ಮೊದಲೇ ಕಾರು ಖರೀದಿಸುವ ಪ್ಲಾನ್‌ನಲ್ಲಿದ್ದರು. ಆದರೆ ಕೊರೋನಾದಿಂದಾಗಿ ಸಾಧ್ಯವಾಗಿರಲಿಲ್ಲ. ಕೊರೋನಾ ಸಂದರ್ಭ ಎಲ್ಲರಿಗೂ ಆರ್ಥಿಕ ಸಮಸ್ಯೆಯಾಗಿತ್ತು. ಹಾಗಾಗಿ ಸರಿಯಾಗಿ ಪ್ಲಾನ್ ಮಾಡದಿದ್ದರೆ ಆರ್ಥಿಕ ತೊಂದರೆ ಉಂಟಾಗುಬಹುದೆಂದು ಕಾರು ಖರೀದಿಸುವ ಪ್ಲಾನ್ ಕೂಬಿಟ್ಟೆ ಎಂದಿದ್ದಾರೆ.

59 ಚೀನಾ ಆ್ಯಪ್ ಬ್ಯಾನ್; ನಟಿ ರಶ್ಮಿ ದೇಸಾಯಿ ಅದ್ಭುತ ಮಾತು

 ಬಿಗ್‌ಬಾಸ್‌ 13ರಿಂದ ಹೊರ ಬಂದಾಗಲೇ ಕಾರು ತೆಗೆದುಕೊಳ್ಳಬೇಕೆಂದಿದ್ದೆ. ಆದರೆ ನಂತರ ಜನ ನನ್ನನ್ನು ಕೆಲಸದಿಂದ ತಿಳಿದುಕೊಳ್ಳಬೇಕು. ನನ್ನಲ್ಲಿ ಏನಿದೆ ಎಂಬುದನ್ನು ನೋಡಿ ಅಲ್ಲ ಎಂದು ನಿರ್ಧರಿಸಿದೆ ಎಂದಿದ್ದಾರೆ.