Asianet Suvarna News Asianet Suvarna News

ರಾಖಿ ಸಾವಂತ್‌ನ ಬಾಯ್ತುಂಬ ಹೊಗಳಿದ ಬಾಲಿವುಡ್ ನಿರ್ದೇಶಕಿ

  • ರಾಖಿ ಸಾವಂತ್‌ನ ಬಾಯ್ತುಂಬ ಹೊಗಳಿದ ಬಾಲಿವುಡ್ ನಿರ್ದೇಶಕಿ
  • ಸೆಟ್‌ನಲ್ಲಿ ಗೌರವಯುತ ಹೆಣ್ಣು ರಾಖಿ ಎಂದ ಫರಾ ಖಾನ್
Deepika Padukone and Rakhi Sawant Farah Khan says she has given two megastars to the Hindi film industry dpl
Author
Bangalore, First Published Aug 28, 2021, 3:16 PM IST
  • Facebook
  • Twitter
  • Whatsapp

ಬಾಲಿವುಡ್ ಚಲನಚಿತ್ರ ನಿರ್ಮಾಪಕಿ ಮತ್ತು ನೃತ್ಯ ನಿರ್ದೇಶಕಿ ಫರಾ ಖಾನ್ ಅವರು ಇತ್ತೀಚೆಗೆ ಹಿಂದಿ ಚಿತ್ರರಂಗಕ್ಕೆ ಇಬ್ಬರು 'ಮೆಗಾಸ್ಟಾರ್'ಗಳನ್ನು ನೀಡಿದ್ದಾಗಿ ಹೇಳಿದ್ದಾರೆ. ಒಬ್ಬರು ದೀಪಿಕಾ ಪಡುಕೋಣೆ, ಮತ್ತು ಇನ್ನೊಬ್ಬರು ರಾಖಿ ಸಾವಂತ್ ಎಂದು ಹೇಳಿದ್ದಾರೆ ಫರಾ.

ಪ್ರಸ್ತುತ ಕಾಮಿಡಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ಫರಾ ರಾಖಿ ವಿಶೇಷ ಅತಿಥಿಯಾಗಿ ಬಂದಿದ್ದಾಗ ಈ ಬಗ್ಗೆ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಕಾಂಟ್ರವರ್ಸಿ ಕ್ವೀನ್ ತನ್ನ ಜೀವನದ ಹೋರಾಟವನ್ನು ವಿವರಿಸಿದ್ದಾರೆ. ಕಾರ್ಯಕ್ರಮದಲ್ಲಿ, ರಾಖಿ ಫರಾಳಿಂದ ಬಂದ ಕರೆ ತನ್ನ ಜೀವನವನ್ನು ಹೇಗೆ ಬದಲಾಯಿಸಿತು ಎಂಬುದನ್ನು ಹಂಚಿಕೊಂಡಿದ್ದಾರೆ.

ಸ್ಪೈಡರ್ ವುಮನ್ ಆದ ರಾಖಿ ಸಾವಂತ್: ಇದೆಂಥಾ ವೇಷ ?

ಇದನ್ನು ಕೇಳಿದ ಫರಾ ನಟಿಯನ್ನು ಶ್ಲಾಘಿಸಿದ್ದಾರೆ. ನಾನು ಉದ್ಯಮಕ್ಕೆ ಇಬ್ಬರು ಮೆಗಾಸ್ಟಾರ್‌ಗಳನ್ನು ನೀಡಿದ್ದೇನೆ, ಒಬ್ಬರು ದೀಪಿಕಾ ಪಡುಕೋಣೆ, ಮತ್ತು ಇನ್ನೊಬ್ಬರು ರಾಖಿ ಸಾವಂತ್. ಇಬ್ಬರೂ ಶ್ರೇಷ್ಠ ನಟಿಯರು, ರಾಖಿ ಅತ್ಯಂತ ಸಮಯಪ್ರಜ್ಞೆ ಉಳ್ಳವರು ಎಂದು ಹೇಳಬೇಕು. ಕಷ್ಟಪಟ್ಟು ಕೆಲಸ ಮಾಡುವ, ಉತ್ತಮ ನಡವಳಿಕೆಯ, ಮತ್ತು 'ಮೈನ್ ಹೂ ನಾ' ಚಿತ್ರದ ಸೆಟ್‌ಗಳಲ್ಲಿ ಗೌರವಾನ್ವಿತ ಹುಡುಗಿ ಮತ್ತು ಅದಕ್ಕಾಗಿ ನಾನು ಅವಳನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.

ರಾಖಿ 2004 ರ 'ಮೈನ್ ಹೂ ನಾ' ಚಿತ್ರದಲ್ಲಿ ಮಿನಿ ಎಂಬ ವಿದ್ಯಾರ್ಥಿಯ ಪಾತ್ರವನ್ನು ಮಾಡಿದ್ದರು. ಮತ್ತೊಂದೆಡೆ, 2007 ರಲ್ಲಿ ಫರಾ ಖಾನ್ ಅವರ 'ಓಂ ಶಾಂತಿ ಓಂ' ಚಿತ್ರದ ಮೂಲಕ ದೀಪಿಕಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಶಾರುಖ್ ಖಾನ್, ಅರ್ಜುನ್ ರಾಂಪಾಲ್, ಶ್ರೇಯಸ್ ತಲ್ಪಡೆ, ಕಿರೋನ್ ಖೇರ್, ಬಿಂದು ಮತ್ತು ಸತೀಶ್ ಶಾ ಅವರೊಂದಿಗೆ ನಟಿಸಿದರು.

Follow Us:
Download App:
  • android
  • ios