ಸಿನಿಮಾ ಚಿತ್ರೀಕರಣದಲ್ಲಿದ್ದ ಭೋಜ್‌ಪುರಿ ನಟ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನ
ಭೋಜ್‌ಪುರಿ ನಟ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 'ಪಾರೋ ಪಟ್ನಾ ವಾಲಿ ಚಿತ್ರದ ಶೂಟಿಂಗ್‌ನಲ್ಲಿದ್ದ ನಟ ಹಠಾತ್ ನಿಧನರಾಗಿದ್ದಾರೆ.
ಮುಂಬೈ(ಜ.15) ಭೋಜ್‌ಪುರಿ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಪಾರೋ ಪಟ್ನಾ ವಾಲಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ಭೋಜ್‌ಪುರಿ ನಟ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮುಂಬರುವ ಚಿತ್ರದ ಶೂಟಿಂಗ್‌ನಲ್ಲಿ ಸಕ್ರಿಯವಾಗಿದ್ದ ಸುದೀಪ್ ಪಾಂಡೆ ಎದೆನೋವಿನಿಂದ ಬಳಲಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಸುದೀಪ್ ಪಾಂಡೆ ನಿಧನರಾಗಿದ್ದರೆ. ಸುದೀಪ್ ಪಾಂಡೆ ನಿಧನ ಸುದ್ದಿ ಭೋಜ್‌ಪುರಿ ಚಿತ್ರರಂಗದಲ್ಲಿ ಆಘಾತ ತಂದಿದೆ. ಇತ್ತ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಜನವರಿ 15ರಂದು ಮುಂಬೈನಲ್ಲಿ ಸುದೀಪ್ ಪಾಂಡೆ ನಿಧನರಾಗಿದ್ದಾರೆ.
ಸುದೀಪ್ ಪಾಂಡೆ ಭೋಜಪುರಿ ಸಿನಿಮಾ ಮಾತ್ರವಲ್ಲ, ಹಿಂದಿ ಸಿನಿಮಾದಲ್ಲೂ ಸುದೀಪ್ ಪಾಂಡೆ ಅಭಿನಯಿಸಿದ್ದಾರೆ. ನಟನಾಗಿ, ನಿರ್ದೇಶಕನಾಗಿಯೂ ಸುದೀಪ್ ಪಾಂಡೆ ಅಭಿಮಾನಿ ಬಳಗ ಸೃಷ್ಟಿಸಿದ್ದಾರೆ. ಭೋಜ್‌ಪುರಿಯಲ್ಲಿ ಖೂನಿ ದಂಗಲ್, ಭೋಜ್‌ಪುರಿ ಭಯ್ಯಾ, ಬಹಿನಿಯಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸುದೀಪ್ ಪಾಂಡೆ ನಟನಾ ಕ್ಷೇತ್ರಕ್ಕೆ ಬರುವ ಮೊದಲು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರ ನಟನಾ ಹವ್ಯಾಸ ಅವರನ್ನು ಚಿತ್ರರಂಗಕ್ಕೆ ಕರೆತಂದಿತು.