ಇತ್ತೀಚೆಗೆ ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ ಅವರ ಕುಟುಂಬದ ಸದಸ್ಯರ ಜೊತಗೇ ನಟಿ ತ್ರಿಷಾ ಕಾಣಿಸಿಕೊಂಡಿರುವ ಕಾರಣಕ್ಕೋ ಏನೋ ಎಂಬಂತೆ, ಈಗ ಈ ಸುದ್ದಿ ಭಾರೀ ಪ್ರಾಮುಖ್ಯತೆ ಪಡೆಯುತ್ತಿದೆ. ಮುಂದೇನು ಬೆಳವಣಿಗೆ ಆಗಬಹುದು? ಈ ಸ್ಟೋರಿ ನೋಡಿ..

ಏನಿದು ತ್ರಿಷಾ ಹೊಸ ವೈರಲ್ ಸುದ್ದಿ?

Add Asianetnews Kannada as a Preferred SourcegooglePreferred

ಸದ್ಯಕ್ಕೆ ತಮಿಳು ನಟ ದಳಪತಿ ವಿಜಯ್ (Vijay Joseph) ಮುಖ್ಯಮಂತ್ರಿ ಆಗಿರುವ ಸುದ್ದಿಯಷ್ಟೇ ಪ್ರಾಮುಖ್ಯತೆ ಪಡೆಯುತ್ತಿರುವುದು ನಟಿ ತ್ರಿಷಾ ಕೃಷ್ಣನ್ (Trisha Krishnan) ಹಾಗೂ ವಿಜಯ್ ಸ್ನೇಹ. ಪತ್ನಿ ಸಂಗೀತಾ ಹಾಗೂ ವಿಜಯ್ ಮಕ್ಕಳು ಗೈರಾಗಿದ್ದ ಸಿಎಂ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ನಟಿ ತ್ರಿಷಾ ಹಾಜರಾಗಿದ್ದರು. ಅಷ್ಟೇ ಅಲ್ಲ, ಗಣ್ಯರ ಮೊದಲ ಸಾಲಿನಲ್ಲಿ ಕುಳಿತಿದ್ದ ತ್ರಿಷಾ ಅದಕ್ಕೂ ಮೊದಲು ವಿಜಯ್ ತಾಯಿಯವರನ್ನು ಹಗ್ ಮಾಡಿ ಖುಷಿಖುಷಿಯಾಗಿ ಕುಳಿತಿದ್ದರು. ವಿಜಯ್ ಸಿಎಂ ಈವೆಂಟ್‌ಗಿಂತ ಒಂದು ಗ್ರಾಂ ತೂಕ ಹೆಚ್ಚೇ ಎನ್ನುವಂತೆ ನಟಿ ತ್ರಿಷಾ ಅಂದು ನ್ಯೂಸ್‌ಗಳಲ್ಲಿ ಹೈಲೈಟ್ ಆಗಿದ್ದರು.

ಅದಾದ ಬಳಿಕ, ನಟಿ ತ್ರಿಷಾ ಈಗ ಟಾಕ್ ಆಫ್ ದಿ ಟೌನ್ ಎಂಬಂತೆ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ತ್ರಿಷಾ ಮದುವೆಯಾಗಿಲ್ಲ. ಅವರ ಸ್ನೇಹಿತ ಎನ್ನಲಾಗಿರುವ ವಿಜಯ್ ಕೂಡ ಸದ್ಯ ವಿಚ್ಛೇದನದ ಪ್ರಕ್ರಿಯೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ತ್ರಿಷಾ ದೊಡ್ಡ ಅಪರಾಧ ಮಾಡುತ್ತಿದ್ದಾರೆ ಎನ್ನುವುದು ಎಷ್ಟರಮಟ್ಟಿಗೆ ಸರಿ? ಅದೇನೂ ಚರ್ಚೆಯ ಸಂಗತಿ ಆಗಬೇಕಿಲ್ಲ. ಅವರರವ ಜೀವನ, ಅವರವರ ಇಷ್ಟ.. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಅದೆಷ್ಟು ಪ್ರಾಮುಖ್ಯತೆ ಪಡೆಯುತ್ತಿದೆ ಎಂದರೆ ಈಗ ತ್ರಿಷಾರ ಹಳೆಯ ಬಾಯ್ ಫ್ರೆಂಡ್ಸ್ ಲಿಸ್ಟ್ ಎಲ್ಲವೂ ಹೊರಬಂದು ವೈರಲ್ ಆಗುತ್ತಿವೆ. ಹಾಗಿದ್ದರೆ ನಟಿ ತ್ರಿಷಾ ಜೊತೆ ಯಾವ್ಯಾವ ನಟರುಗಳ ಹೆಸರುಗಳು ಕೇಳಿಬರುತ್ತಿವೆ? ಮುಂದೆ ನೋಡಿ..

'ವರ್ಷಂ' ಸಿನಿಮಾದ ಸಮಯದಲ್ಲಿ

ಮೊಟ್ಟಮೊದಲನೆಯದು ನಟ ಪ್ರಭಾಸ್ ಹೆಸರು.. 2004ರಲ್ಲಿ ತೆರಗೆ ಬಂದಿದ್ದ 'ವರ್ಷಂ' ಸಿನಿಮಾದ ಸಮಯದಲ್ಲಿ ಪ್ರಭಾಸ್ (Prabhas) ಹಾಗೂ ತ್ರಿಷಾ ಪ್ರೇಮಿಗಳು ಎನ್ನಲಾಗಿತ್ತು. ಅದಕ್ಕೆ ಪುಷ್ಟಿ ಕೊಡುವಂತೆ ಪ್ರಭಾಸ್-ತ್ರಿಷಾ ಎಲ್ಲಾ ಕಡೆ ಒಟ್ಟೊಟ್ಟಿಗೇ ಓಡಾಡುತ್ತಿದ್ದರು. ಅವರಿಬ್ಬರೂ ಮದುವೆ ಆಗ್ತಾರೆ ಎಂಬ ಸುಸದ್ದಿ ಬಂದ ಬೆನ್ನಲ್ಲೇ 'ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್‌ ಅಷ್ಟೇ, ಮದುವೆ ಆಗ್ತಿಲ್ಲ' ಎಂದು ಅವರಿಬ್ಬರೂ ಸ್ವತಃ ಕ್ಲಾರಿಟಿ ಕೊಟ್ಟಿದ್ದಾರೆ. ಆ ಬಳಿಕ ಸುದ್ದಿ ತಣ್ಣಗಾಯ್ತು.

ಆ ಬಳಿಕ ತ್ರಿಷಾ ಜೊತೆ ಕೇಳಿ ಬಂದ ಮತ್ತೊಬ್ಬ ನಟನ ಹೆಸರು ಸಿಂಬು (Silambarasan TR), ಅಂದರೆ ತಮಿಳು ನಟ ಸಿಲಂಬರಸನ್. 2006ರಲ್ಲಿ ಸಿಂಬು-ತ್ರಿಷಾ ಲವರ್ಸ್ ಎಂಬ ವದಂತಿ ಹಬ್ಬಿತ್ತು. ಆದರೆ, ಈ ವದಂತಿ ಬಳಿಕ ನಿಧಾನಕ್ಕೆ ತಣ್ಣಗಾಗುತ್ತ ಬಂತು.

ನಟ ರಾಣಾ ಮಾತ್ರ ಸಂದರ್ಶನ

2010ರಲ್ಲಿ ನಟ ರಾಣಾ ದಗ್ಗುಬಾಟಿ (Rana Daggubati) ಜೊತೆ ತ್ರಿಷಾ ಹೆಸರು ಕೇಳಿ ಬಂತು. ಅವರಿಬ್ಬರೂ ಒಟ್ಟೊಟ್ಟಿಗೇ ಇದ್ದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸೋರಿಕೆ ಆಯ್ತು. ಆದರೆ ತ್ರಿಷಾ 'ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ, ಪ್ರೇಮಿಗಳಲ್ಲ' ಎಂದರು. ಆದರೆ, ನಟ ರಾಣಾ ಮಾತ್ರ ಸಂದರ್ಶನವೊಂದರಲ್ಲಿ 'ನಾನು ಹಾಗೂ ತ್ರಿಷಾ ಪ್ರೀತಿಸುತ್ತಿದ್ದೇವೆ' ಎಂದುಬಿಟ್ಟಿದ್ದರು. ಆದರೆ, ಆ ಬಳಿಕ ಅವರಿಬ್ಬರ ಲವ್ ಸುದ್ದಿಗೆ ಎಂಡ್ ಆಯ್ತು!

ಮುಂದೆ ನಟ ಧನುಷ್ (Dhanuh) ಜೊತೆ ನಟಿ ತ್ರಿಷಾ ಹೆಸರು ಕೇಳಿಬಂತು. ಅವರಿಬ್ಬರ ಸಾಕಷ್ಟು ಖಾಸಗಿ ಫೋಟೋಗಳೂ ಸೋರಿಕೆ ಆಗಿತ್ತು. ಆದರೆ ಈ ವಿಷಯ ಕೇಳಿಬಂದಷ್ಟೇ ವೇಗವಾಗಿ ಮಾಯವೂ ಆಯ್ತು.

ಆ ಬಳಿಕ ತ್ರಿಷಾ ಜೊತೆ ಕೇಳಿಬಂದಿರುವ ಹೆಸರು ನಟನದ್ದಲ್ಲ, ಬದಲಿಗೆ ಉದ್ಯಮಿಯಬ್ಬರದ್ದು, ಅವರ ಹೆಸರು ವರುಣ್ ಮಣಿಯನ್. ಅವರೊಂದಿಗೆ (Varun Maniyan) ತ್ರಿಷಾಗೆ ನಿಶ್ಚಿತಾರ್ಥವೂ ಆಗಿತ್ತು. ಆದರೆ, ಎಂಗೇಜ್ಮೆಂಟ್ ಆಗಿ 5-6 ತಿಂಗಳಲ್ಲಿ ನಟಿ ತ್ರಿಷಾ ಈ ಸಂಬಂಧವನ್ನು ಮುರಿದುಕೊಂಡು ಸ್ವತಂತ್ರ ಜೀವನಕ್ಕೆ ಮರಳಿದರು.

ಇವೆಲ್ಲ ಸುದ್ದಿಗಳ ಬಳಿಕ ಹಬ್ಬಿದ, ಈಗ ಬಲವಾಗಿ ಹಬ್ಬುತ್ತಿರುವ ಸುದ್ದಿಯಲ್ಲಿ ಕೇಳಿಬರುತ್ತಿರುವ ಹೆಸರು ದಳಪತಿ ವಿಜಯ್. 2022 ರಿಂದಲೂ ತ್ರಿಷಾ ಹಾಗೂ ವಿಜಯ್ (Thalapathy Vijay) ಮಧ್ಯೆ ಉತ್ತಮ ಸ್ನೇಹ-ಬಾಂಧವ್ಯ ಇದೆ ಎಂಬ ಮಾತಿದೆ. ಆದರೆ ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿಯ ಬೆನ್ನಲ್ಲೇ ತ್ರಿಷಾ-ವಿಜಯ್ ಸಂಬಂಧ ಬಹಳಷ್ಟು ಸೌಂಡ್ ಮಾಡುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರಿಬ್ಬರ ಓಟಾಟ-ಒಡನಾಟಗಳು ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಡುತ್ತಿವೆ.

ಇತ್ತೀಚೆಗೆ ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ ಅವರ ಕುಟುಂಬದ ಸದಸ್ಯರ ಜೊತಗೇ ನಟಿ ತ್ರಿಷಾ ಕಾಣಿಸಿಕೊಂಡಿರುವ ಕಾರಣಕ್ಕೋ ಏನೋ ಎಂಬಂತೆ, ಈಗ ಈ ಸುದ್ದಿ ಭಾರೀ ಪ್ರಾಮುಖ್ಯತೆ ಪಡೆಯುತ್ತಿದೆ. ಮುಂದೇನು ಬೆಳವಣಿಗೆ ಆಗಬಹುದು ಎಂಬ ಕುತೂಹಲ ಹಲವರಲ್ಲಿದೆ. ಆದರೆ, ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಷ್ಟೇ.

ಸದ್ಯಕ್ಕೆ ಸೋಷಿಯಲ್ ಮಿಡಿಯಾಗಳಲ್ಲಿ ನಟಿ ತ್ರಿಷಾರ ಹಳೆಯ ಸ್ನೇಹ, ಪ್ರೇಮಗಳ ಗಾಸಿಪ್‌ಗಳು ಸಖತ್ ಸದ್ದು-ಸುದ್ದಿ ಮಾಡುತ್ತಿವೆ.