ಸ್ಕಾಟ್ಲೆಂಡ್‌ನಲ್ಲಿ ಅಕ್ಷಯ್ ಕುಮಾರ್ ಬೆಲ್ ಬಾಟಂ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡೋ ನಟ ಇದೀಗ 18 ವರ್ಷದ ನಂತರ ತಮ್ಮ ರೂಲ್ಸ್ ಮುರಿದಿದ್ದಾರೆ. ಅದೂ ಬೆಲ್ ಬಾಟಂ ಸಿನಿಮಾಗಾಗಿ.

ಅಕ್ಷಯ್ ಕುಮಾರ್ ಬೆಲ್ ಬಾಟಂ ಸಿನಿಮಾ ಶೂಟಿಂಗ್ ಆರಂಭಿಸಿದ್ದು ಎಲ್ರಿಗೂ ಗೊತ್ತು. ಆದರೆ ಈ ಸಿನಿಮಾಗಾಗಿ 18 ವರ್ಷಗಳ ನಿಯಮವೊಂದನ್ನು ಅಕ್ಕಿ ಮುರಿದಿದ್ದಾರೆ. ಏನು ಗೊತ್ತಾ

ಬ್ಯಾಡ್ಮಿಂಟನ್, ನೋ ಲೇಟ್ ನೈಟ್, ನೋ ಮೂವೀಸ್, ಅದು ನನ್ನ ಬದುಕು ಎಂದು ದೀಪಿಕಾ

ನಿರ್ಮಾಪಕರಿಗೆ ಅವರ ಹಣ ಉಳಿತಾಯ ಮಾಡಲು ಅಕ್ಕಿ ದಿನಕ್ಕೆ ಎರಡು ಶಿಫ್ಟ್ ಕೆಲಸ ಮಾಡೋಕೆ ನಿರ್ಧರಿಸಿದ್ದು ಎಲ್ಲರಿಗೂ ಸದ್ಯ ಅಚ್ಚರಿಯ ವಿಚಾರ. ಕೊರೋನಾ ಸಮಯವಾದ್ದರಿಂದ ಸ್ಕಾಟ್ಲೆಂಡ್‌ನಲ್ಲಿರುವ ತಂಡ ದಿನದ ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದೆ. ಸಿಗುವ ಸಮಯದಲ್ಲೇ ಹೆಚ್ಚು ಕವರ್ ಮಾಡಿ ಮುಗಿಸಲು ಸಿನಿಮಾ ತಂಡ ಪ್ರಯತ್ನಿಸುತ್ತಿದೆ.

ಅಕ್ಷಯ್ ಕುಮಾರ್ ನಿಜಕ್ಕೂ ನಿರ್ಮಾಪಕ ಸ್ನೇಹಿ ನಟ. ಅವರೊಂದಿಗೆ ಕೆಲಸ ಮಾಡುತ್ತಿರುವುದು ಅದೃಷ್ಟ. ಎಲ್ಲರ ಬಗ್ಗೆ ಎಲ್ಲದರ ಬಗ್ಗೆ ನಟ ಚಿಂತಿಸುತ್ತಾರೆ.  ಸುರಕ್ಷಾ ಕ್ರಮಗಳಿಂದ ಹಿಡಿದು, ಶೂಟಿಂಗ್ ವೇಳಪಟ್ಟಿ, ನಿರ್ಮಾಪಕರ ಸವಾಲಿನ ಬಗ್ಗೆಯೂ ಯೂಚಿಸುತ್ತಾರೆ. ಅವರು ಅಪ್ಪಟ ಚಿನ್ನ ಎಂದಿದ್ದಾರೆ ಜಾಕಿ ಭಗ್ನಾನಿ.

ದೇಹದ ರಕ್ತ ಕೆಂಪಲ್ಲ, ತ್ರಿರಂಗ..! ಸತ್ಯಮೇವ ಜಯತೆ 2 ಪೋಸ್ಟರ್ ರಿಲೀಸ್

ಕಳೆದ 18 ವರ್ಷಗಳಲ್ಲಿಯೇ ನಟ ಮೊದಲ ಬಾರಿ ಡಬಲ್ ಶಿಫ್ಟ್ ಮಾಡುತ್ತಿದ್ದಾರೆ. ಅವರು ಈ ವಿಚಾರ ಹೇಳಿದಾಗ ನಿಜಕ್ಕೂ ಅಚ್ಚರಿಯಾಯಿತು. ನಟನ ಸಮಯದ ಕುರಿತ ಯೋಚನೆಯಿಂದ ಎಲ್ಲರೂ ಎಕ್ಸೈಟ್ ಆಗಿದ್ದಾರೆ ಎಂದಿದ್ದಾರೆ. ಸಿನಿಮಾದಲ್ಲಿ ವಾಣಿ ಕಪೂರ್, ಲಾರಾ ದತ್ತಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.