ಬಾಲಿವುಡ್ ನಟ ಜಾನ್ ಅಬ್ರಹಾಂ ತಮ್ಮ ನೆಕ್ಸ್ಟ್ ಫಿಲ್ಮ್ ಸತ್ಯ ಮೇವ ಜಯತೆ 2 ಸಿನಿಮಾದ ಪೋಸ್ಟರ್ ಶೇರ್ ಮಾಡಿದ್ದಾರೆ. ನಟ ಇತ್ತೀಚಿನ ಸಿನಿಮಾಗಳಲ್ಲಿ ಕಂಡಂತೆ ಈ ಸಿನಿಮಾ ಪೋಸ್ಟರ್‌ನಲ್ಲಿಯೂ ತ್ರಿರಂಗ ಹೈಲೈಟ್ ಆಗಿದೆ.

ಪೋಸ್ಟರ್ ಶೇರ್ ಮಾಡಿದ ನಟ, ಯಾವ ದೇಶದ ತಾಯಿ ಗಂಗೆಯೋ ಆ ದೇಶದ ರಕ್ತವೂ ತ್ರಿರಂಗವೇ.. ಸತ್ಯಮೇವ ಜತೆ 2 12 ಮೇ 2021ಗೆ ನಿಮ್ಮ ಮುಂದೆ.. ಎಂದು ಬರೆದಿದ್ದಾರೆ.

ಹ್ಯಾಪಿ ಬರ್ತ್‌ಡೇ ಬೇಬೂ: ಕರೀನಾ 40ರ ಬರ್ತ್‌ಡೇ ಪಾರ್ಟಿ ಹೀಗಿತ್ತು..!

ರಗಡ್ ಅವತಾರದಲ್ಲಿರುವ ನಟ ಕೈಯಲ್ಲಿ ನೇಗಿಲು ಹಿಡಿದಿರುವ ಫೋಟೋ ಪೋಸ್ಟರ್‌ನಲ್ಲಿದೆ. ನಟನ ದೇಹದ ಗಾಯದಿಂದ ತ್ರಿರಂಗದ ರಕ್ತ ಹೊರ ಬರುತ್ತಿರುತ್ತದೆ. ಸಿನಿಮಾ 2021 ಮೇಯಲ್ಲಿ ರಿಲೀಸ್ ಆಗಲಿದೆ.

2018ರ ಸತ್ಯಮೇವ ಜಯತೆ ಸಿನಿಮಾದ ಎರಡನೇ ಭಾಗ ಇದಾಗಿದೆ. ಇದನ್ನು ಲಕ್ನೋದಲ್ಲಿ ಶೂಟ್ ಮಾಡಲಿದ್ದು ಮುಂಬೈನಲ್ಲಿ ಶೂಟ್ ಮಾಡುತ್ತಿಲ್ಲ. ಸಿನಿಮಾ ಮುಂಬೈನಲ್ಲಿ ಶೂಟ್ ಮಾಡುವುದೆಂದು ಹೇಳಿದ್ದೆವು. ಈಗ ಕಥೆ ಡೆವಲ್ ಮಾಡಲಾಗಿದೆ.

'ಲಾಕ್ ಮಾಡಿ ಗುಪ್ತಾಂಗ ತೋರಿಸಿದ್ದಾರೆ' ಕಂಗನಾ ಬೋಲ್ಡ್ ಆರೋಪ ಯಾರ ಮೇಲೆ!

ಇದಕ್ಕೆ ಲಕ್ನೋ ಸರಿಯಾಗುತ್ತದೆ ಎಂದು ನಿರ್ಮಾಪಕ ಮಧು ಭೋಜ್ವಾನಿ ಹೇಳಿದ್ದಾರೆ. ಸಿನಿಮಾ ಎಪ್ರಿಲ್‌ನಲ್ಲಿ ಶೂಟ್ ಆರಂಭಿಸಿ ಅಕ್ಟೋಬರ್‌ಗೆ ರಿಲೀಸ್ ಆಗಬೇಕಿತ್ತು. ಆದರೆ ಕೊರೋನಾದಿಂದಾಗಿ ಸಾಧ್ಯವಾಗಿಲ್ಲ.