Asianet Suvarna News Asianet Suvarna News

ಉರ್ಫಿ ಜಾವೇದ್‌ಗೆ ಎದೆಯ ಕೆಳಗಿದೆ! ಕಂಗನಾ ರಾಣಾವತ್‌ಗೆ ಬೆನ್ನಿನಲ್ಲಿದೆ! ಏನದು ಗೊತ್ತಾ?

ಕೆಲವೊಮ್ಮೆ ವಿಚಿತ್ರ ಸಂಗತಿಗಳು ಸಂಭವಿಸುತ್ತವೆ. ಬಾಲಿವುಡ್‌ ಸೆಲೆಬ್ರಿಟಿಗಳ ಒಂದೊಂದು ಅಂಗ, ಒಂದೊಂದು ಗುರುತು ಒಂದೊಂದು ಕತೆ ಹೇಳುತ್ತೆ. ಅಂಥಾ ವಿಶಿಷ್ಟ ಸಂಗತಿ ಇಲ್ಲಿದೆ.

 

Beautiful Tattoos and their stories of bollywood celebrities bni
Author
First Published Sep 8, 2024, 8:32 PM IST | Last Updated Sep 9, 2024, 9:18 AM IST

ಟ್ಯಾಟೂಗಳು ತಾರೆಯರಿಗೆ ಅವರವರ ವಿಶಿಷ್ಟ ಗುರುತು, ಅಸ್ಮಿತೆ ಮೆರೆಯಲು ಒಂದು ಸಾಧನವಾಗಿ ಬಳಕೆಯಾಗುತ್ತಿವೆ. ಹಾಗೇ ಇನ್ನು ಕೆಲವರು ತಮ್ಮ ಜೀವನದ ಒಂದೊಂದು ಪ್ರಮುಖ ಘಟ್ಟವನ್ನು ಬಿಂಬಿಸಲು ಟ್ಯಾಟೂ ಹಾಕಿಕೊಂಡವರೂ ಉಂಟು. ಅಂತೂ ಒಬ್ಬೊಬ್ಬ ಹೀರೋಯಿನ್‌ ಹಾಕಿಸಿಕೊಂಡಿರುವ ಟ್ಯಾಟೂ ಹಿಂದೆಯೂ ಒಂದೊಂದು ವಿಶಿಷ್ಟ ಸಂಗತಿಯಿರುವುದು ಖಚಿತ. ಅಂಥ ಕೆಲವರನ್ನು ನೋಡೋಣ.

ಉರ್ಫಿ ಜಾವೇದ್‌

ಸದ್ಯ ತನ್ನ ವಿಶಿಷ್ಟ ಮ್ಯಾನರಿಸಂಗಳಿಂದ ಗಮನ ಸೆಳೆಯುತ್ತಿರುವಾಕೆ ಉರ್ಫಿ ಜಾವೇದ್‌. ಈಕೆಯೂ ಹಲವು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಅವುಗಳಲ್ಲಿ ಒಂದು, ಎದೆಯಿಂದ ಸ್ವಲ್ಪ ಕೆಳಗಿರುವ, ಎಡ ಪಕ್ಕೆಲುಬಿನ ಬಳಿ ಇರುವ ಹಕ್ಕಿಗರಿಯ ಟ್ಯಾಟೂ. ಇದು ಮೆಣಸಿನಕಾಯಿಯ ಟ್ಯಾಟೂ ಅನ್ನುವವರೂ ಇದ್ದಾರೆ. ಮೆಣಸಿನಕಾಯಿಯಷ್ಟೇ ಖಾರವಾಗಿರುವ ಈಕೆ ಅದನ್ನು ಹಾಕಿಸಿಕೊಂಡಿದ್ದರೆ ಅಚ್ಚರಿಯಿಲ್ಲ. ಆದರೆ ಹಕ್ಕಿಗರಿಯಷ್ಟೇ ಹಗುರಾಗಿ ಮುದ್ದಾಗಿರುವ ಉರ್ಫಿಗೆ ಹಕ್ಕಿಗರಿ ಸೂಕ್ತ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕ ಚೋಪ್ರಾಳ ಬಲಗೈ ಮಣಿಕಟ್ಟಿನ ಉದ್ದಕ್ಕೂ ಗಮನಿಸಿ. ಅಲ್ಲಿ ನೀವು "ಡ್ಯಾಡೀಸ್‌ ಲಿಲ್ ಗರ್ಲ್" ಎಂದು ಬರೆದಿರುವ ಟ್ಯಾಟೂ ನೋಡಬಹುದು. ಆಕೆಯ ತಂದೆ ಅಶೋಕ್ ಚೋಪ್ರಾ ಅವರ ಕೈಬರಹದಲ್ಲಿ ಬರೆದದ್ದಂತೆ ಈ ಪದಗಳು. ಅವರು 2013ರಲ್ಲಿ ನಿಧನರಾದರು. ಪ್ರಿಯಾಂಕಗೆ ತನ್ನ ತಂದೆಯೊಂದಿಗೆ ವಿಶೇಷ ಬಾಂಧವ್ಯ. ಅದನ್ನು ಹಚ್ಚೆ ನೆನಪಿಸುತ್ತವೆ. "ನನ್ನ ತಂದೆ ನನ್ನ ದೊಡ್ಡ ಚೀರ್‌ಲೀಡರ್. ಯಾವುದೇ ಪ್ರಶಸ್ತಿ, ನಾನು ಏನನ್ನಾದರೂ ಗೆದ್ದಾಗಲೆಲ್ಲಾ ಅವನು ನನ್ನ ಚಿಯರ್‌ಲೀಡರ್‌ ಆಗುತ್ತಿದ್ದ" ಎಂದಿದ್ದಳು.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ 'RK' ಟ್ಯಾಟೂ ಹಾಕಿಸಿಕೊಂಡಿದ್ದಳು. ಇದು ಆಕೆಯ ಲವರ್‌ ರಣಬೀರ್‌ ಕಪೂರ್‌ಗೆ ಮೀಸಲಾದದ್ದಾಗಿತ್ತು. ನಂತರ ಅದನ್ನು ರಿಮೂವ್‌ ಮಾಡಿದಳು. ಆದರೆ ಅದು ಪಡುಕೋಣೆಯ ಏಕೈಕ ಟ್ಯಾಟೂ ಆಗಿರಲಿಲ್ಲ. ದೀಪಿಕಾ ನಟಿ ತನ್ನ ಎಡ ಪಾದದ ಸುತ್ತಲೂ ಸೂಕ್ಷ್ಮವಾದ ಬಳ್ಳಿಯ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಅದು ಅವಳ ಪಾದದ ಮೇಲೆ ತನ್ನದೇ ಹೆಸರಿನ ಮೊದಲಕ್ಷರವಾದ 'ಡಿಪಿ'ಯೊಂದಿಗೆ ಕೊನೆಗೊಳ್ಳುತ್ತದೆ.

ಕಂಗನಾ ರಣಾವತ್

ಕಂಗನಾ ರಣಾವತ್‌ ಆಕೆಯ ನಿರ್ಭೀತ ವ್ಯಕ್ತಿತ್ವಕ್ಕೆ ಹೆಸರುವಾಸಿ. ಈಕೆ ತನ್ನ ಕತ್ತಿನ ಹಿಂಭಾಗದಲ್ಲಿ ಒಂದು ಬೃಹತ್‌ ಹಚ್ಚೆಯನ್ನು ಹಾಕಿಸಿಕೊಂಡಿದ್ದಾಳೆ. ಇದನ್ನು ಅವಳು ಮೂಲತಃ ಹದಿಹರೆಯದವಳಾಗಿದ್ದಾಗಲೇ ಹಾಕಿದ್ದಳು. ಇದರಲ್ಲಿ ಮೂರು ಪ್ರಮುಖ ಅಂಶಗಳಿವೆ. ಕಿರೀಟ, ಶಕ್ತಿಯನ್ನು ಪ್ರತಿನಿಧಿಸುವ ರೆಕ್ಕೆಗಳು ಮತ್ತು ಖಡ್ಗ. ಇದು ಗಡಿಗಳನ್ನು ಮುರಿದು ಗುರಿಗಳನ್ನು ಅವಳ ಕನಸುಗಳ ಪ್ರತೀಕ ಎಂದಿದ್ದಾಳೆ ಆಕೆ. ಇಷ್ಟೆ ಅಲ್ಲ; ರಾನೌತ್ ತನ್ನ ಎಡ ಪಾದದ ಮೇಲೆ ಪುಟ್ಟ ದೇವತೆಯ ಹಚ್ಚೆ ಹಾಕಿಸಿಕೊಂಡಿದ್ದಾಳೆ.

ನಟಿ ಸೌಂದರ್ಯ ಸಾಯುತ್ತಾರೆ ಎಂಬ ವಿಷಯ ಈ ಒಬ್ಬ ವ್ಯಕ್ತಿಗೆ ಮಾತ್ರ ತಿಳಿದಿತ್ತು: ಯಾರವರು, ಇದರಲ್ಲಿ ಸತ್ಯವೆಷ್ಟು?

ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಆಕೆಯ ಎಡ ಪಾದದ ಸುತ್ತ ಹಚ್ಚೆ ಹಾಕಿಸಿಕೊಂಡಿರುವ ಮತ್ತೊಬ್ಬ ಬಾಲಿವುಡ್ ನಟಿ. ಸಿನ್ಹಾ ತನ್ನ ಪಾದದ ಮೇಲೆ ಡೂಡ್ಲಿಂಗ್ ಮಾಡುವಾಗ ಗೊಂಚಲು ಹೋಲುವ ಟ್ಯಾಟೂವನ್ನು ಹಾಕಿಸಿಕೊಂಡಳು. ಇದನ್ನು ಅವಳು ಹಾಕಿಸಿಕೊಂಡದ್ದು ಬುಡಾಪೆಸ್ಟ್‌ನಲ್ಲಿ. ಏಕೆಂದರೆ ಆಕೆ ಅದನ್ನು ಅಲ್ಲಿ ತುಂಬಾ ಇಷ್ಟಪಟ್ಟಿದ್ದಳು ಮತ್ತು ಅಲ್ಲಿನ ಆಕೆಯ ವಾಸ್ತವ್ಯ ನೆನಪಿಟ್ಟುಕೊಳ್ಳಲು ಬಯಸಿದ್ದಳು. ಜೊತೆಗೆ ಸಿನ್ಹಾ ತನ್ನ ಕಾಲರ್‌ಬೋನ್‌ನಲ್ಲಿ ಚಿಕ್ಕ ನಕ್ಷತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ.

ಜಾಹ್ನವಿ ಕಪೂರ್‌

ಜಾಹ್ನವಿ ಕಪೂರ್‌ ತನ್ನ ಕೈಯಲ್ಲಿ ತನ್ನ ತಾಯಿಯ ನೆನಪನ್ನು ಶಾಶ್ವತವಾಗಿ ಹಚ್ಚೆಯಾಗಿಸಿಕೊಂಡಿದ್ದಾಳೆ. ಆಕೆ ತನ್ನ ತೋಳಿನಲ್ಲಿ ʼI Love you my Labbu' ಎಂದು ಟ್ಯಾಟೂ ಬರೆಸಿಕೊಂಡಿದ್ದಾಳೆ. ಆಕೆಯ ತಾಯಿ ತನ್ನ ಮುದ್ದಿನ ಮಗಳನ್ನು ಕರೆಯುತ್ತಿದ್ದುದು ಹಾಗೆ. ಜೊತೆಗೆ ಅದು ಶ್ರೀದೇವಿಯ ಹ್ಯಾಂಡ್‌ರೈಟಿಂಗ್‌ನಲ್ಲೇ ಇದೆಯಂತೆ.

ನೀವು ರೆಡಿ ಇದ್ರೆ ದಿನಕ್ಕೆ 12 ಲಕ್ಷ ರೂ. ಸಂಬಳ! ಟಿ.ವಿ, ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಇದ್ಯಾವ ಕೆಲಸ ಅಂತೀರಾ?
 

Latest Videos
Follow Us:
Download App:
  • android
  • ios