Asianet Suvarna News Asianet Suvarna News

ಎಲ್ಲಿದ್ದೇವೆ ಅನ್ನೋದನ್ನೂ ಮರೆತು ದೀಪಿಕಾಗೆ ರಣವೀರ್ ಕಿಸ್​​: ಪಬ್ಲಿಸಿಟಿ ಹುಚ್ಚು ಬಿಟ್ಟಿಲ್ವಾ ಅಂತಿದ್ದಾರೆ ಫ್ಯಾನ್ಸ್​!

ಎಲ್ಲಿದ್ದೇವೆ ಅನ್ನೋದನ್ನೂ ಮರೆತು ದೀಪಿಕಾಗೆ ರಣವೀರ್ ಕಿಸ್​​ ಕೊಟ್ಟಿದ್ದಾರೆ. ಇದಕ್ಕೆ ಸಕತ್​ ಟ್ರೋಲ್​ ಆಗುತ್ತಿದ್ದು, ಎಲ್ಲವೂ ಪಬ್ಲಿಸಿಟಿ ಹುಚ್ಚಿಗಾಗಿ ಅಂತಿದ್ದಾರೆ ನೆಟ್ಟಿಗರು.
 

Ranveer Singh kisses Deepika Padukone at Jio World Plaza event netizens react suc
Author
First Published Nov 1, 2023, 1:05 PM IST

ಸದ್ಯ ಬಾಲಿವುಡ್​ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಬಹಳ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಈ ಜೋಡಿ ಕಾಫಿ ವಿತ್​ ಕರಣ್​ ಷೋನಲ್ಲಿ ಕಾಣಿಸಿಕೊಂಡಿದ್ದು. ಈ ಸಮಯದಲ್ಲಿ ದೀಪಿಕಾ  ತೀರಾ ವೈಯಕ್ತಿಕ ವಿಷಯ ಮಾತನಾಡಿದ್ದು, ಅದು ರಣವೀರ್​ ಅವರಿಗೆ ಸಿಟ್ಟು ತರಿಸಿದ ಬಳಿಕ ಈ ಜೋಡಿಯ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದೆ.  ಈ ಜೋಡಿ ಮದುವೆಯಾಗಿ ಬರುವ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. ಮೊನ್ನೆ ಕಾಫಿ ವಿತ್​ ಕರಣ್​ ಷೋನಲ್ಲಿ ಇದೇ ಮೊದಲ ಬಾರಿಗೆ,  ಮದುವೆಯಾಗಿ ಐದು ವರ್ಷಗಳ ಬಳಿಕ ಮದುವೆಯ ವಿಡಿಯೋ ರಿಲೀಸ್​ ಮಾಡಿದ್ದರು.  ಈ ಸಮಯದಲ್ಲಿ ಈ ಜೋಡಿ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ ಮಾಡಿಕೊಂಡಿತ್ತು. ಪತಿ ರಣವೀರ್​ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್​ ಕುರಿತು ಪ್ರಿಯಾಂಕಾ ಮಾತನಾಡಿದ್ದು, ಇದು ಸಕತ್​ ಟ್ರೋಲ್​ಗೂ ಕಾರಣವಾಯಿತು ಮಾತ್ರವಲ್ಲದೇ ಹಲವರು ಹಲವು ವಿಧದಲ್ಲಿ ದೀಪಿಕಾ ಮಾತನ್ನು ಅರ್ಥೈಸತೊಡಗಿದ್ದಾರೆ.

ಇದರ ನಡುವೆಯೇ ಇದೀಗ ಮತ್ತೊಂದು ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ರಣವೀರ್​ ಅವರು ತಾವು ಯಾವ ಕಾರ್ಯಕ್ರಮಕ್ಕೆ ಬಂದಿದ್ದೇವೆ ಎನ್ನುವುದನ್ನೂ ಮರೆತು ಎಲ್ಲರ ಎದುರೇ ಪತ್ನಿ ದೀಪಿಕಾಗೆ ಮುತ್ತು ಕೊಟ್ಟಿದ್ದು, ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಇದನ್ನೆಲ್ಲಾ ಮನೆಯಲ್ಲಿ ಇಟ್ಟುಕೊಳ್ಳಿ, ಈ ಪರಿ ನಿಮ್ಮ ಪ್ರೀತಿಯನ್ನು ಸಾರ್ವಜನಿಕಗೊಳಿಸಬೇಡಿ ಎಂದು ಹಲವರು ಹೇಳುತ್ತಿದ್ದಾರೆ. ನೀವು ಪತ್ನಿಯನ್ನು ಪ್ರೀತಿಸುತ್ತೀರಿ ಎಂದು ಪಬ್ಲಿಸಿಟಿಗೋಸ್ಕರ ಇದೆಲ್ಲಾ ಮಾಡುವುದು ಬೇಕಿಲ್ಲ ಎನ್ನುತ್ತಿದ್ದಾರೆ ಇನ್ನು ಕೆಲವರು. ಅಷ್ಟಕ್ಕೂ ಈ ರೀತಿ ರಣವೀರ್​ ನಡೆದುಕೊಂಡದ್ದು, ಜಿಯೋ ವರ್ಲ್ಡ್‌ ಪ್ಲಾಜಾ ಉದ್ಘಾಟನಾ ಕಾರ್ಯಕ್ರಮದಲ್ಲಿ.  ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ  ಆಗಮಿಸಿದ್ದರು. ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಕೂಡ ಬಂದಿದ್ದರು.  ರಿಲಯೆನ್ಸ್‌ ಫೌಂಡೇಷನ್‌ ಸ್ಥಾಪಕಿ ಮತ್ತು ಮುಖ್ಯಸ್ಥೆ ನೀತಾ ಅಂಬಾನಿಯವರು ಈ ಈವೆಂಟ್​ ಆಯೋಜಿಸಿದ್ದರು. ಎಲ್ಲರೂ ಇರುವಾಗಲೇ ಏನೂ ಕಾರಣವಿಲ್ಲದೇ, ತಾನು ಎಲ್ಲಿದ್ದೇನೆ ಎನ್ನುವುದನ್ನೂ ಮರೆತು ರಣವೀರ್​ ಪಕ್ಕದಲ್ಲಿದ್ದ ಪತ್ನಿಗೆ ಕಿಸ್​ ಕೊಟ್ಟಿದ್ದು, ಅದು ವಿಡಿಯೋದಲ್ಲಿ ದಾಖಲಾಗಿದೆ.  ವಿಡಿಯೋ ಇದೀಗ ವೈರಲ್‌ ಆಗಿದೆ. ಇವರಿಬ್ಬರು ನೀತಾ ಅಂಬಾನಿ ಜತೆ ಮಾತನಾಡುತ್ತಿದ್ದರು. ಜಿಯೋ ವರ್ಲ್ಡ್‌ ಪ್ಲಾಜಾದ ಹೊರಗಡೆ ತಮ್ಮ ಕಾರಿಗಾಗಿ ಕಾಯುತ್ತ ಇದ್ದರು. ಆ ಸಂದರ್ಭದಲ್ಲಿ ಇವರು ಇಶಾ ಅಂಬಾನಿ ಜತೆಯೂ ಮಾತನಾಡುತ್ತಿದ್ದರು. ಆಗ ರಣವೀರ್​ ಹಿಂದೆ ಮುಂದೆ ನೋಡದೆ ಎಲ್ಲರೆದುರೂ ಕಿಸ್​ ಮಾಡಿದ್ದಾರೆ. 

ಅಷ್ಟಕ್ಕೂ ಕಾಫಿ ವಿತ್​ ಕರಣ್​ ಷೋನಲ್ಲಿ ದೀಪಿಕಾ ಮೇಲೆ ರಣವೀರ್​ ಮುನಿಸಿಕೊಂಡಿದ್ದು, ಅದು ಇಂದಿಗೂ ಸಕತ್​ ಸದ್ದು ಮಾಡುತ್ತಿದೆ.  ‘ಇಬ್ಬರೂ ರಿಲೇಶನ್​ಶಿಪ್​ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್​ ಕೇಳಿದ್ರು. ಇದಕ್ಕೆ ದೀಪಿಕಾ ಉತ್ತರಿಸುತ್ತಾ, ‘ಕೆಲವು ಕಾಂಪ್ಲಿಕೇಟೆಡ್​ ರಿಲೇಶನ್​ಷಿಪ್​ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು.  ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು.  ಆ ಸಮಯದಲ್ಲಿ ರಣವೀರ್ ಸಿಕ್ಕರು.  ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್​ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ.  ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್​ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್​ಮೆಂಟ್ ಇರಲಿಲ್ಲ’ ಎಂದಿದ್ದರು.

ಇದಕ್ಕೆ ಹಲವಾರು ಅರ್ಥ ಕಲ್ಪಿಸಲಾಗುತ್ತಿದೆ. ಕೆಲವರಂತೂ ದೀಪಿಕಾ ದೈಹಿಕ ಸುಖಕ್ಕೆ ಪರಪುರಷರ ಬಳಿ ಹೋಗುತ್ತಾರೆ, ಮಾನಸಿಕವಾಗಿ ಮಾತ್ರ ಪತಿ ರಣವೀರ್​ ಬಳಿ ಇದ್ದಾರೆ ಎನ್ನುವಂಥ ಕೀಳು ಮಟ್ಟದ ಅರ್ಥವನ್ನೂ ಕಲ್ಪಿಸುತ್ತಿದ್ದಾರೆ. ಇಂಥ ಅಸಂಬಂಧ ಮಾತುಗಳನ್ನಾಡಬೇಡಿ ಎಂದು ಖುದ್ದು ಕರಣ್​ ಜೋಹರ್​ ಅವರು ಜನರ ವಿರುದ್ಧ ಕಿಡಿ ಕಾರಿದ್ದೂ ಆಗಿದೆ. ಇದೀಗ ರಣವೀರ್​ ಹೀಗೆ ಮಾಡಿದ್ದು, ಎಲ್ಲವೂ ಪಬ್ಲಿಸಿಟಿಗಾಗಿ ಎನ್ನುತ್ತಿದ್ದಾರೆ ನೆಟ್ಟಿಗರು. ಪತ್ನಿಯನ್ನು ಪ್ರೀತಿಸಿದರೆ ಹೀಗೆ ಎಲ್ಲರ ಎದುರು ಪ್ರದರ್ಶನ ಮಾಡುವುದು ಬೇಕಿರಲಿಲ್ಲ ಎನ್ನುತ್ತಿದ್ದಾರೆ. 
 

Follow Us:
Download App:
  • android
  • ios