ಹೈದರಾಬಾದ್(ಜು. 29)  ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿಗೂ ಕೊರೋನಾ ಅಂಟಿಕೊಂಡಿದೆ.  ಬಾಲಿವುಡ್ ಬಿಗ್ ಬಿ  ಬಚ್ಚನ್ ಕುಟುಂಬ್ ನಂತರ ನಿರ್ದೇಶಕ ಎಸ್. ಎಸ್‌ .ರಾಜಮೌಳಿ ಕುಟುಂಬಕ್ಕೆ ಕೊರೋನಾ ಅಂಟಿಕೊಂಡಿದೆ.

ಬಾಹುಬಲಿ ನಿರ್ದೇಶಕ ರಾಜಮೌಳಿ ವಿಚಾರವನ್ನು ಟ್ವೀಟ್ ಮೂಲಕ ತಿಳಿಸಿದ್ದು,  ಕೆಲ ದಿನಗಳ ಹಿಂದೆ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಜ್ವರ ಬಂದಿತ್ತು. ಆನಂತರ ಅದು ಕಮ್ಮಿ ಆಗಿತ್ತು.  ನಂತರ ಕೊರೋನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ ಎಂದಿದ್ದಾರೆ.

ಅನ್ ಲಾಕ್ ಮಾರ್ಗಸೂಚಿ, ಜಿಮ್ ಝಗಮಗ, ಮತ್ತೇನು?

ವೈದ್ಯರ  ಸಲಹೆಯಂತೆ ನಮ್ಮ ಕುಟುಂಬದವರೆಲ್ಲ ಹೋಮ್ ಕ್ವಾರಂಟೈನ್ ಆಗಿದ್ದೇವೆ. ನಾವೆಲ್ಲರೂ ಈಗ ಆರಾಮಾಗಿದ್ದೇವೆ. ಆದರೆ, ಎಲ್ಲ ಮುನ್ನೆಚ್ಚರಿಕೆಗಳು ಮತ್ತು ಸೂಚನೆಗಳನ್ನು ಅನುಸರಿಸುತ್ತಿದ್ದೇವೆ. ನಾವೆಲ್ಲ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು, ಪ್ಲಾಸ್ಮಾ ದಾನ  ಮಾಡುತ್ತೇವೆ ಎಂದು ರಾಜಮೌಳಿ ಹೇಳಿದ್ದಾರೆ.