Asianet Suvarna News Asianet Suvarna News

ಅನ್ ಲಾಕ್  3  ಮಾರ್ಗಸೂಚಿ ಪ್ರಕಟ, ಜಿಮ್ ಝಗಮಗ, ಮೆಟ್ರೋ, ಸಿನಿಮಾ?

ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ/ ರಾಜ್ಯಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅವಕಾಶ/  ಶಾಲಾ ಕಾಲೇಜು ಓಪನ್ ಇಲ್ಲ/ ಜಿಮ್ , ಯೋಗ ಕೇಂದ್ರ ತೆರೆಯಲು ಅವಕಾಶ

Union Govt Unlock 3 Curfew Ends No Schools Till End August Gyms Can Reopen
Author
Bengaluru, First Published Jul 29, 2020, 7:51 PM IST

ನವದೆಹಲಿ(ಜು.  29)  ಕೇಂದ್ರ ಸರ್ಕಾರ ಅನ್ ಲಾಕ್  3  ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಸ್ಟ್  5  ರಿಂದ ನೈಟ್ ಕರ್ಪ್ಯೂ ಇರುವುದಿಲ್ಲ.  ಯೋಗ ಮತ್ತು ಜಿಮ್ ಗಳು ಓಪನ್  ಆಗಲಿವೆ. ಅಂತರ್ ರಾಜ್ಯ ಓಡಾಟದ ನಿಯಮವನ್ನು ತೆಗೆದು ಹಾಕಲಾಗಿದೆ.

ಇದು ಕೇಂದ್ರ ಸರ್ಕಾರದ ನಿಯಮಾವಳಿಯಾಗಿದ್ದು ಆಯಾ ರಾಜ್ಯ ಸರ್ಕಾರಗಳು ಕೊರೋನಾ ತಡೆಗೆ ತಮ್ಮದೆ ಆದ ಲಾಕ್ ಡೌನ್ ಮಾಡಿಕೊಂಡಿವೆ.  ರಾಜ್ಯ ಸರ್ಕಾರದ  ತೀರ್ಮಾನದ ಮೇಲೆ ಅನುಷ್ಠಾನ ನಿರ್ಧರಿತವಾಗುತ್ತದೆ.

ಕೇಂದ್ರದ ಹೊಸ ಶಿಕ್ಷಣ ನೀತಿ ಪ್ರಮುಖ ಅಂಶಗಳು, ಏನೆಲ್ಲಾ ಬದಲಾವಣೆ

ಅನ್ ಲಾಕ್  3  ಮಾರ್ಗಸೂಚಿ ಆಗಸ್ಟ್  5  ರಿಂದ

* ಯೋಗ ಕೇಂದ್ರ, ಜಿಮ್ ತೆರೆಯಲು ಅವಕಾಶ(ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ) 

* ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆ

* ಶಾಲಾ ಕಾಲೇಜುಗಳು ಆಗಸ್ಟ್ ಅಂತ್ಯದವರೆಗೆ ತೆರೆಯಲ್ಲ

* ವಂದೇ ಭಾರತ್ ಮಿಶನ್ ಅಡಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಸೀಮಿತ ಅವಕಾಶ

* ಮೆಟ್ರೋ, ಸಿನಿಮಾ ಥಿಯೇಟರ್, ಎಂಟರ್ ಟೈನ್ ಮೆಂಟ್ ಪಾರ್ಕ್, ಬಾರ್, ಪಾರ್ಕ್, ಅಡಿಟೋರಿಯಂ, ಅಸೆಂಬ್ಲಿ ಹಾಲ್  ಸದ್ಯಕ್ಕೆ ಇಲ್ಲ(ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು) 

* ಸಾಮಾಜಿಕ ಮತ್ತು ರಾಜಕೀಯ ಸಮಾವೇಶಗಳಿಗೆ ಅವಕಾಶ ಇಲ್ಲ

* ಕಂಟೈನ್ ಮೆಂಟ್ ಝೋನ್ ಝೋನ್ ನಲ್ಲಿ ಆಗಸ್ಟ್  31  ರವರೆಗೂ ಕಠಿಣ ಲಾಕ್ ಡೌನ್ ಮುಂದುವರಿಯಲಿದೆ.

Follow Us:
Download App:
  • android
  • ios